HOME » NEWS » Coronavirus-latest-news » PRIVATE HOSPITAL LICENSE BANNED FOR NOT FOLLOWING GOVT ORDERS ON CORONAVIRUS IN BANGALORE MAK

ಕೊರೋನಾ ಸಂಕಷ್ಟದಲ್ಲೂ ಬೆಂಗಳೂರಿನಲ್ಲಿ ಸರ್ಕಾರದ ಆದೇಶ ಪಾಲಿಸದ 19 ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದು

ಧಿಡೀರ್‌ ಕಾರ್ಯಾಚರಣೆಗೆ ಮುಂದಾಗಿರುವ ಬೆಂಗಳೂರು ಮಹಾನಗರ ಪಾಲಿಕೆ ಕಂದಾಯ ಸಚಿವ ಅಶೋಕ್ ಸೂಚನೆ‌ ಮೇರೆಗೆ ಸರ್ಕಾರದ ಆದೇಶ ಪಾಲಿಸದ ಬೆಂಗಳೂರು ದಕ್ಷಿಣ ವಲಯದ ಬಸವನಗುಡಿ, ವಿಜಯನಗರ, ಪದ್ಮನಾಭನಗರ, ಬಿಟಿಎಂ ಲೇಔಟ್, ಚಿಕ್ಕಪೇಟೆಯಲ್ಲಿರುವ 19 ಖಾಸಗಿ ಆಸ್ಪತ್ರೆಗಳ ಪರವಾನಗಿಯನ್ನು ರದ್ದು ಮಾಡಿದೆ.

news18-kannada
Updated:July 31, 2020, 8:43 AM IST
ಕೊರೋನಾ ಸಂಕಷ್ಟದಲ್ಲೂ ಬೆಂಗಳೂರಿನಲ್ಲಿ ಸರ್ಕಾರದ ಆದೇಶ ಪಾಲಿಸದ 19 ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದು
ಖಾಸಗಿ ಆಸ್ಪತ್ರೆಯ ಎದುರು ಪರವಾನಗಿ ರದ್ದಾಗಿರುವ ಸೂಚನಾ ಪಲಕವನ್ನು ಅಂಟಿಸುತ್ತಿರುವ ಪಾಲಿಕೆ ಅಧಿಕಾರಿಗಳು.
  • Share this:
ಬೆಂಗಳೂರು (ಜುಲೈ 31); ಕೊರೋನಾ ಸಂಕಷ್ಟದ ಕಾಲದಲ್ಲಿ ರಾಜ್ಯ ಸರ್ಕಾರ ರೂಪಿಸಿರುವ ನಿಯಮದಂತೆ ಸರ್ಕಾರಕ್ಕೆ ಶೇ.50 ರಷ್ಟು ಬೆಡ್‌ಗಳನ್ನು ನೀಡದ ಬೆಂಗಳೂರು ದಕ್ಷಿಣ ವಲಯದ 19 ಖಾಸಗಿ ಆಸ್ಪತ್ರೆಗಳ ಪರವಾನಗಿಯನ್ನು ರಾಜ್ಯ ಸರ್ಕಾರ ಇಂದು ರದ್ದು ಮಾಡಿ ಆದೇಶಿಸಿದೆ. 

ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕೊರೋನಾ ವೈರಸ್‌ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಸೋಂಕು ಪೀಡಿತರಿಗೆ ಸೂಕ್ತ ಚಿಕಿತ್ಸೆ ನೀಡುವುದೇ ದುಸ್ಥರವಾಗಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಬೆಡ್‌ಗಳನ್ನು ಸರ್ಕಾರಕ್ಕೆ ನೀಡಬೇಕು ಎಂದು ಆದೇಶಿಸಿತ್ತು. ಆದರೆ, ಖಾಸಗಿ ಆಸ್ಪತ್ರೆಗಳು ಈ ನಿಯಮವನ್ನು ಪಾಲಿಸಿರಲಿಲ್ಲ. ಪರಿಣಾಮ ಕೊರೋನಾ ರೋಗಿಗಳಿಗೆ ಹಾಸಿಗೆ ವ್ಯವಸ್ಥೆ ಮಾಡುವುದೇ ಸರ್ಕಾರಕ್ಕೆ ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಹೀಗಾಗಿ ಧಿಡೀರ್‌ ಕಾರ್ಯಾಚರಣೆಗೆ ಮುಂದಾಗಿರುವ ಬೆಂಗಳೂರು ಮಹಾನಗರ ಪಾಲಿಕೆ ಕಂದಾಯ ಸಚಿವ ಅಶೋಕ್ ಸೂಚನೆ‌ ಮೇರೆಗೆ ಸರ್ಕಾರದ ಆದೇಶ ಪಾಲಿಸದ ಬೆಂಗಳೂರು ದಕ್ಷಿಣ ವಲಯದ ಬಸವನಗುಡಿ, ವಿಜಯನಗರ, ಪದ್ಮನಾಭನಗರ, ಬಿಟಿಎಂ ಲೇಔಟ್, ಚಿಕ್ಕಪೇಟೆಯಲ್ಲಿರುವ 19 ಖಾಸಗಿ ಆಸ್ಪತ್ರೆಗಳ ಪರವಾನಗಿಯನ್ನು ರದ್ದು ಮಾಡಿದೆ.

ಅಲ್ಲದೆ, 19 ಖಾಸಗಿ ಆಸ್ಪತ್ರೆಗಳ ಮುಂದೆ ಸಾರ್ವಜನಿಕ ಪ್ರಕಟಣೆ ಬ್ಯಾನರ್ ಅಳವಡಿಕೆ ಮಾಡುವುದರ ಜೊತೆಗೆ, ಪೊಲೀಸ್ ಠಾಣೆಯಲ್ಲೂ ದೂರು ದಾಖಲು ಮಾಡಲಾಗಿದೆ. ಈ ಮೂಲಕ ಭವಿಷ್ಯದಲ್ಲಿ ಸರ್ಕಾರದ ಆದೇಶ ಪಾಲಿಸದಿದ್ದರೆ ಉಳಿದ ಖಾಸಗಿ ಆಸ್ಪತ್ರೆಗಳ ವಿರುದ್ಧವೂ ಇದೇ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಾಲಿಕೆ ಪರೋಕ್ಷ ಎಚ್ಚರಿಕೆ ನೀಡಿದಂತಾಗಿದೆ.

ಇದನ್ನೂ ಓದಿ : ಆಗಸ್ಟ್‌ 14ಕ್ಕೆ ರಾಜಸ್ಥಾನ ಅಧಿವೇಶನ; ಆಪರೇಷನ್ ಕಮಲಕ್ಕೆ ಹೆದರಿ ಎಲ್ಲಾ ಕೈ ಶಾಸಕರು ರೆಸಾರ್ಟ್‌‌ಗೆ ಶಿಫ್ಟ್

ಈ ನಡುವೆ ಗುರುವಾರ ಒಂದೇ ದಿನ ರಾಜ್ಯದಲ್ಲಿ 6,128 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಕೊರೋನಾ ಕೇಸ್​ಗಳ ಸಂಖ್ಯೆ 6 ಸಾವಿರದ ಗಡಿ ದಾಟಿವೆ. ಈ ಮೂಲಕ ರಾಜ್ಯದ ಕೊರೋನಾ ಕೇಸ್​ಗಳ ಒಟ್ಟು ಸಂಖ್ಯೆ 1.18 ಲಕ್ಷಕ್ಕೆ ಏರಿಕೆಯಾಗಿದೆ.
ಮಾರಣಾಂತಿಕ ಕೊರೋನಾ ಸೋಂಕಿಗೆ 83 ಜನ ಬಲಿಯಾಗಿದ್ದು, ಮೃತರ ಸಂಖ್ಯೆಯೂ 2,230ಕ್ಕೆ ಏರಿಕೆಯಾಗಿದೆ. 3,793 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಒಟ್ಟು 46,694 ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೆಲ್ತ್‌ ಬುಲೆಟಿನ್‌ನಲ್ಲಿ ತಿಳಿಸಿದೆ.
Published by: MAshok Kumar
First published: July 31, 2020, 8:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories