ದರ ಹೆಚ್ಚಳದೊಂದಿಗೆ ಎರಡು-ಮೂರು ದಿನಗಳಲ್ಲಿ ಖಾಸಗಿ ಬಸ್ ಸಂಚಾರ ಆರಂಭ; ಡಿಸಿಎಂ ಲಕ್ಷ್ಮಣ ಸವದಿ

ಲಾಕ್‌ಡೌನ್‌ ಕಾರಣದಿಂದಾಗಿ ಕಳೆದ ಎರಡು ತಿಂಗಳಿನಿಂದ ರಾಜ್ಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಸಾರಿಗೆ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ, ಇದೀಗ ಹಂತ ಹಂತವಾಗಿ ಸರ್ಕಾರಿ ರಸ್ತೆ ಸಾರಿಗೆ ಸೇವೆ ಆರಂಭಿಸಿದೆ. ಇದರ ಬೆನ್ನಿಗೆ ಖಾಸಗಿ ಸಾರಿಗೆ ಸಂಸ್ಥೆಯವರೂ ಸಹ ಸೇವೆ ಆರಂಭಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಡಿಸಿಎಂ ಲಕ್ಷ್ಮಣ ಸವದಿ.

ಡಿಸಿಎಂ ಲಕ್ಷ್ಮಣ ಸವದಿ.

  • Share this:
ರಾಯಚೂರು (ಮೇ 22); ದರ ಹೆಚ್ಚಳದೊಂದಿಗೆ ಇನ್ನೂ ಎರಡು ಅಥವಾ ಮೂರು ದಿನಗಳಲ್ಲಿ ರಾಜ್ಯಾದ್ಯಂತ ಖಾಸಗಿ ಬಸ್‌ಗಳು ಸಂಚಾರ ಆರಂಭಿಸಲಿವೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾಹಿತಿ ನೀಡಿದ್ದಾರೆ.

ಲಾಕ್‌ಡೌನ್‌ ಕಾರಣದಿಂದಾಗಿ ಕಳೆದ ಎರಡು ತಿಂಗಳಿನಿಂದ ರಾಜ್ಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಸಾರಿಗೆ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ, ಇದೀಗ ಹಂತ ಹಂತವಾಗಿ ಸರ್ಕಾರಿ ರಸ್ತೆ ಸಾರಿಗೆ ಸೇವೆ ಆರಂಭಿಸಿದೆ. ಇದರ ಬೆನ್ನಿಗೆ ಖಾಸಗಿ ಸಾರಿಗೆ ಸಂಸ್ಥೆಯವರೂ ಸಹ ಸೇವೆ ಆರಂಭಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ, ಟಿಕೆಟ್‌ ದರ ಏರಿಸುವ ಚಿಂತನೆ ನಡೆಸಿದ್ದಾರೆ.

ಈ ಕುರಿತು ರಾಯಚೂರಿನಲ್ಲಿ ಇಂದು ಮಾಹಿತಿ ನೀಡಿರುವ ಸಾರಿಗೆ ಸಚಿವರೂ ಆದ ಲಕ್ಷ್ಮಣ ಸವದಿ, "ಖಾಸಗಿ ಸಾರಿಗೆಯನ್ನು ಆರಂಭಿಸುವ ಕುರಿತು ಮಾಲೀಕರ ಜೊತೆಗೆ ಮಾತುಕತೆ ನಡೆಸಲಾಗಿದೆ. ಆದರೆ, ಖಾಸಗಿ ಸಾರಿಗೆ ಸಂಸ್ಥೆಯ ಮಾಲೀಕರು ಟಿಕೆಟ್‌ ದರವನ್ನು ಶೇ.50 ರಷ್ಟು ಹೆಚ್ಚಿಸಿ ಬಸ್‌ ಓಡಿಸಲು ಅನುಮತಿ ಕೇಳಿದ್ದರು.

ಆದರೆ, ನಾವು ಶೇ. 15 ರಷ್ಟು ದರ ಹೆಚ್ಚಿಸಿ ಬಸ್‌ ಓಡಿಸಲು ಅನುಮತಿ ನೀಡಿದ್ದೇವೆ. ಎಲ್ಲವೂ ಅಂದುಕೊಂಡಂತೆ ಆದರೆ, ರಾಜ್ಯಾದ್ಯಂತ ಇನ್ನೂ ಎರಡು ಅಥವಾ ಮೂರು ದಿನಗಳಲ್ಲಿ ಖಾಸಗಿ ಬಸ್ ಗಳು ಸಂಚಾರ ಆರಂಭವಾಗಲಿವೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Coronavirus in Karnataka - ಅರ್ಧದಿನದಲ್ಲೇ 105 ಪ್ರಕರಣ; ರಾಜ್ಯದಲ್ಲಿ ಸಂಖ್ಯೆ 1,710ಕ್ಕೇರಿಕೆ
First published: