Modi Meeting: ಮತ್ತೆ ಕೋವಿಡ್ ಕೇಸ್ ಹೈಕ್, ಆಗುತ್ತಾ ದೇಶ 'ಲಾಕ್'? ಏಪ್ರಿಲ್ 27ಕ್ಕೆ ಸಿಎಂಗಳ ಜೊತೆ ಪ್ರಧಾನಿ ಮೀಟಿಂಗ್

ಕೋವಿಡ್ ಕೇಸ್‌ಗಳು ಕಡಿಮೆ ಆಗುತ್ತಿದ್ದಂತೆ ಜನರು ಮೈಮರೆತಿದ್ದಾರೆ. ರೂಲ್ಸ್‌ಗಳನ್ನು ಗಾಳಿಗೆ ತೂರಿ, ಬೇಜವಾಬ್ದಾರಿಯಿಂದ ಇದ್ದಾರೆ. ಹೀಗಾಗಿ ಮತ್ತೆ ಕೇಸ್ ಜಾಸ್ತಿಯಾಗಿದ್ದು, ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ. ಇನ್ನು ಮತ್ತೊಮ್ಮೆ ಲಾಕ್ ಡೌನ್ ಜಾರಿಗೆ ತರಬೇಕೋ ಅಥವಾ ಟಫ್ ರೂಲ್ಸ್ ಜಾರಿ ಮಾಡಬೇಕೋ ಎನ್ನುವ ಬಗ್ಗೆ ಚರ್ಚೆ ನಡೆಯಲಿದೆ.

ಏ. 27ರಂದು ಪ್ರಧಾನಿ ಮೋದಿ ಮೀಟಿಂಗ್

ಏ. 27ರಂದು ಪ್ರಧಾನಿ ಮೋದಿ ಮೀಟಿಂಗ್

  • Share this:
ನವದೆಹಲಿ: ಒಂದನೇ ಅಲೆ  (1st Wave), ಎರಡನೇ ಅಲೆ (2nd Wave) ಹಾಗೂ ಮೂರನೇ ಅಲೆಯಲ್ಲಿ (3rd Wave) ತನ್ನ ಉಗ್ರ ರೂಪ ತೋರಿಸಿದ್ದ ಕೋವಿಡ್ (Covid) ಮಹಾಮಾರಿ, ಈಗ ನಾಲ್ಕನೇ ಅಲೆ (4th Wave) ರೂಪದಲ್ಲಿ ಒಕ್ಕರಿಸಲು ಹವಣಿಸುತ್ತಿದೆ. ಚೀನಾ (China) ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಕೊರೋನ ಕೇಸ್‌ಗಳ (Corona Case) ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ದಿನಕ್ಕೆ ಲಕ್ಷಾಂತರ ಕೇಸ್‌ಗಳು ಪತ್ತೆಯಾಗುತ್ತಿದ್ದು, ಚೀನಾದ ಅನೇಕ ನಗರಗಳಲ್ಲಿ (City) ಲಾಕ್‌ ಡೌನ್ (Lockdown) ಘೋಷಿಸಲಾಗಿದೆ. ಇತ್ತ ಭಾರತದಲ್ಲೂ ದೆಹಲಿ (Delhi), ಕೇರಳ (Kerala) ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಹತ್ವದ ಸಭೆ (Important Meeting) ಕರೆದಿದ್ದಾರೆ. ಇದೇ ಏಪ್ರಿಲ್ 27ರಂದು ಎಲ್ಲಾ ರಾಜ್ಯಗಳ ಸಿಎಂಗಳು (CM) ಹಾಗೂ ಕೇಂದ್ರಾಡಳಿತ ಪ್ರದೇಶಗಳ (Union Territories) ಮುಖ್ಯಸ್ಥರೊಂದಿಗೆ ಪ್ರಧಾನಿ ಸಭೆ ನಡೆಸಲಿದ್ದು, ಈ ಮೀಟಿಂಗ್ ಅತ್ಯಂತ ಹೆಚ್ಚು ಮಹತ್ವ ಪಡೆದಿದೆ.

 ಏಪ್ರಿಲ್ 27ರಂದು ಪ್ರಧಾನಿ ಸಭೆ

ಕೋವಿಡ್ ಕೇಸ್‌ಗಳ ಏರಿಕೆ ಹಿನ್ನೆಲೆಯಲ್ಲಿ ಏಪ್ರಿಲ್ 27ರಂದು ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಲಿದ್ದಾರೆ. ಎಲ್ಲಾ ರಾಜ್ಯಗಳ ಸಿಎಂಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರೊಂದಿಗೆ ಮೋದಿ ಚರ್ಚಿಸಲಿದ್ದಾರೆ. ಪ್ರಧಾನಿ ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿರುವ ಪ್ರಧಾನಿ, ರಾಜ್ಯಗಳ ಕೋವಿಡ್ ಪ್ರಕರಣಗಳ ಕುರಿತಂತೆ ಮಾಹಿತಿ ಪಡೆಯಲಿದ್ದಾರೆ ಎಂದು ಕೇಂದ್ರ  ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

ಮತ್ತೆ ದೇಶದಲ್ಲಿ ಜಾರಿಯಾಗುತ್ತಾ ಲಾಕ್ ಡೌನ್

ಕೋವಿಡ್ ಕೇಸ್‌ಗಳು ಕಡಿಮೆ ಆಗುತ್ತಿದ್ದಂತೆ ಜನರು ಮೈಮರೆತಿದ್ದಾರೆ. ರೂಲ್ಸ್‌ಗಳನ್ನು ಗಾಳಿಗೆ ತೂರಿ, ಬೇಜವಾಬ್ದಾರಿಯಿಂದ ಇದ್ದಾರೆ. ಹೀಗಾಗಿ ಮತ್ತೆ ಕೇಸ್ ಜಾಸ್ತಿಯಾಗಿದ್ದು, ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ. ಇನ್ನು ಮತ್ತೊಮ್ಮೆ ಲಾಕ್ ಡೌನ್ ಜಾರಿಗೆ ತರಬೇಕೋ ಅಥವಾ ಟಫ್ ರೂಲ್ಸ್ ಜಾರಿ ಮಾಡಬೇಕೋ ಎನ್ನುವ ಬಗ್ಗೆ ಚರ್ಚೆ ನಡೆಯಿದೆ.

ಇದನ್ನೂ ಓದಿ: Explained: ಕರ್ನಾಟಕದಲ್ಲೂ ಶುರುವಾಗುವುದೇ ಕೋವಿಡ್ 4ನೇ ಅಲೆ? ಸೋಂಕು ನಿಯಂತ್ರಣಕ್ಕೆ ಸಜ್ಜಾಗಿದ್ಯಾ ರಾಜ್ಯ?

ಸಿಎಂ ನೇತೃತ್ವದಲ್ಲಿ ಇಂದು ಮಹತ್ವದ ಸಭೆ

ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಇಂದು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಕರ್ನಾಟಕದಲ್ಲಿ ನಾಲ್ಕು ವಾರದ ಬಳಿಕ ಕೊರೊನಾ ನಾಲ್ಕನೇ ಅಲೆಯ ಆರಂಭದ ಬಗ್ಗೆ ತಜ್ಞರ ತಂಡ ಮುನ್ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.

ಸಭೆಯಲ್ಲಿ ಸಚಿವರು, ತಜ್ಞರು ಭಾಗಿ

ಸಭೆಯಲ್ಲಿ ಕಂದಾಯ ಸಚಿವ ಅಶೋಕ್, ಆರೋಗ್ಯ ಸಚಿವ ಡಾ. ಸುಧಾಕರ್, ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಹಾಗೂ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು ಸದಸ್ಯರು ಭಾಗಿಯಾಗಲಿದ್ದಾರೆ. ರಾಜ್ಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ದೇಶದಲ್ಲಿ ಕೋವಿಡ್ ಕೇಸ್‌ಗಳ ಹೆಚ್ಚಳ

ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ 2,527 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಭಾರತದಲ್ಲಿ ಒಟ್ಟು ಸಾಂಕ್ರಾಮಿಕ ಪ್ರಕರಣಗಳ ಸಂಖ್ಯೆ 4,3054,952ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 15,079 ಕ್ಕೆ ಏರಿಕೆಯಾಗಿದೆ. ಇನ್ನೂ 33 ಜನರ ಸಾವಿನೊಂದಿಗೆ ದೇಶದಲ್ಲಿ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ 5,22,149 ಕ್ಕೆ ಏರಿದೆ.

ಇದನ್ನೂ ಓದಿ: Corona 4th Wave: "ಕೊರೋನಾದಿಂದ ಕಾಪಾಡಮ್ಮ" ಅಂತ ಸೋಂಕಿನ ಮಾರಿಯಮ್ಮನಿಗೆ ಪ್ರಾಣಿ ಬಲಿ ಕೊಟ್ಟ ಜನರು!

 ಮತ್ತಷ್ಟು ಹೆಚ್ಚಾಗುತ್ತಾ ಕೋವಿಡ್ ಸೋಂಕು?

ಆರ್‌ ವ್ಯಾಲ್ಯೂ 1ಕ್ಕಿಂತ ಕಡಿಮೆ ಇದ್ದರೆ ಸಾಂಕ್ರಾಮಿಕ ಮುಕ್ತಾಯದ ಹಂತದ ಸಾಗುತ್ತಿದೆ ಎಂದು ಪರಿಗಣಿಸಲಾಗುತ್ತದೆ. ಆದರೆ ದೆಹಲಿಯಲ್ಲಿ ಕಳೆದ 3 ತಿಂಗಳಲ್ಲೇ ಮೊದಲ ಬಾರಿಗೆ, ಕಳೆದ ವಾರ ಆರ್‌ ವ್ಯಾಲ್ಯೂ ಶೇ.1ರ ಗಡಿ ದಾಟುವ ಮೂಲಕ ಆತಂಕ ಹುಟ್ಟುಹಾಕಿತ್ತು. ಇದೀಗ ಸತತ 2ನೇ ವಾರ ಕೂಡಾ ಹರಡುವಿಕೆ ಪ್ರಮಾಣ ಹೆಚ್ಚು ಕಡಿಮೆ ಅದೇ ಮಟ್ಟದಲ್ಲಿ ಇರುವ ಕಾರಣ, ಮುಂದಿನ ವಾರಗಳಲ್ಲಿ ಸೋಂಕಿತರ ಪ್ರಮಾಣ ಮತ್ತಷ್ಟುಹೆಚ್ಚುವ ಆತಂಕ ಎದುರಾಗಿದೆ.
Published by:Annappa Achari
First published: