PM CARES Fund: ಇದು ಅದ್ಭುತ ಅರ್ಧಶತಕ; ರೈನಾ 52 ಲಕ್ಷ ರೂ. ದೇಣಿಗೆಗೆ ಪ್ರಧಾನಿ ಮೋದಿ ಶ್ಲಾಘನೆ

Suresh Raina: ಕೊರೋನಾ ಪಿಡುಗಿನ ವಿರುದ್ಧ ಸಮರ ಸಾರಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜೊತೆ ಟೀಂ ಇಂಡಿಯಾ ಆಟಗಾರ ಸುರೇಶ್‌ ರೈನಾ ಕೈಜೋಡಿಸಿದ್ದಾರೆ. ರೈನಾ 52 ಲಕ್ಷ ರೂ. ದೇಣಿಗೆಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ.

Vinay Bhat | news18-kannada
Updated:March 29, 2020, 9:15 AM IST
PM CARES Fund: ಇದು ಅದ್ಭುತ ಅರ್ಧಶತಕ; ರೈನಾ 52 ಲಕ್ಷ ರೂ. ದೇಣಿಗೆಗೆ ಪ್ರಧಾನಿ ಮೋದಿ ಶ್ಲಾಘನೆ
ಪ್ರಧಾನಿ ನರೇಂದ್ರ ಮೋದಿ ಹಾಗೂ ಸುರೇಶ್ ರೈನಾ.
  • Share this:
ಕೊರೋನಾ ವೈರಸ್​ನ ಮರಣಮೃದಂಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮಾರಕ ಕೋವಿಡ್-19 ನಿಯಂತ್ರಣಕ್ಕಾಗಿ ದೇಶವನ್ನು ಏಪ್ರಿಲ್ 14ರವರೆಗೆ ಲಾಕ್ ​ಡೌನ್​ ಮಾಡಲಾಗಿದ್ದರೂ ಸಹ ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಾಗುತ್ತಿಲ್ಲ. ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 918ಕ್ಕೆ ಏರಿಕೆಯಾಗಿದ್ದು, ಇಂದಿನವರೆಗೂ ಮಾರಕ ಸೋಂಕಿನಿಂದ ಸತ್ತವರ ಸಂಖ್ಯೆ 20ಕ್ಕೆ ತಲುಪಿದೆ.

'That’s a brilliant fifty,' PM Narendra Modi praises Suresh Raina for donating to COVID-19 relief funds
ಸುರೇಶ್ ರೈನಾ.


Coronavirus: ಕೊರೋನಾ ವಿರುದ್ಧ ಹೋರಾಟ: ಬಿಸಿಸಿಐಯಿಂದ 51 ಕೋಟಿ ರೂ ದೇಣಿಗೆ

ವಿಶ್ವಾದ್ಯಂತ ಕೊರೋನಾ ವೈರಸ್ ಹರಡಿರುವ ರೀತಿ ತೀವ್ರ ಆತಂಕ ಸೃಷ್ಟಿಸುತ್ತಿದೆ. ಈವರೆಗೆ ವಿಶ್ವದಲ್ಲಿ ಒಟ್ಟು 6,63,720 ಜನರಿಗೆ ಸೋಂಕಿರುವುದು ದೃಢಪಟ್ಟಿದೆ. 30 ಸಾವಿರ ಜನರು ಕೊರೋನಾಗೆ ಬಲಿಯಾಗಿದ್ದಾರೆ. 1.42 ಲಕ್ಷ ಜನರು ಕೊರೋನಾ ವೈರಸ್​ನಿಂದ ಚೇತರಿಕೆ ಕಂಡಿದ್ದಾರೆ.

ಸದ್ಯ ದೇಶದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಎಲ್ಲೆಡೆಯಿಂದ ದೇಣಿಗೆ ಹರಿದು ಬರುತ್ತಿದೆ. ಕ್ರೀಡಾಪಟುಗಳು, ಸಿನಿಮಾ ನಟಿ- ನಟಿಯರು ಸೇರಿದಂತೆ ಅನೇಕರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

ಈ ನಡುವೆ ಕೊರೋನಾ ಪಿಡುಗಿನ ವಿರುದ್ಧ ಸಮರ ಸಾರಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜೊತೆ ಟೀಂ ಇಂಡಿಯಾ ಆಟಗಾರ ಸುರೇಶ್‌ ರೈನಾ ಕೈಜೋಡಿಸಿದ್ದಾರೆ. 31 ಲಕ್ಷ ರೂ. PM-CARES ನಿಧಿಗೆ ಹಾಗೂ 21 ಲಕ್ಷ ರೂ ಉತ್ತರ ಪ್ರದೇಶ ಮುಖ್ಯಮಂತ್ರಿ ವಿಪತ್ತು ನಿರ್ವಹಣಾ ನಿಧಿಗೆ ರೈನಾ ದೇಣಿಗೆ ನೀಡಿದ್ದಾರೆ.

ಕೊರೋನಾ ವಿರುದ್ಧದ ಹೋರಾಟದಲ್ಲಿ ಪೊಲೀಸರಾದ ಕ್ರೀಡಾಪಟುಗಳು; ಸಲಾಂ ಹೇಳಲೇ ಬೇಕು! ಈ ಮೂಲಕ ಅತೀ ಹೆಚ್ಚು ಮೊತ್ತ ಕೊಟ್ಟ ಭಾರತದ ಕ್ರೀಡಾಪಟು ಎಂಬ ಹಿರಿಮೆಗೂ ರೈನಾ ಪಾತ್ರರಾಗಿದ್ದಾರೆ. ಜೊತೆಗೆ ನೀವು ಕೂಡ ಕೈಲಾದಷ್ಟು ಸಹಾಯ ಮಾಡಿ ಕೇಳಿಕೊಂಡಿದ್ದಾರೆ.

ಇನ್ನೂ ಸುರೇಶ್ ರೈನಾ ನೀಡಿರುವ ಒಟ್ಟು 52 ಲಕ್ಷ ರೂ. ದೇಣಿಗೆಗೆ ಪ್ರಧಾನಿ ನರೇಂದ್ರ ಮೋದಿ ಅವರು 'ಇದು ಅದ್ಭುತವಾದ ಐವತ್ತು (ಅರ್ಧಶತಕ)' ಎಂದು ವಿಶೇಷವಾಗಿ ಟ್ವೀಟ್ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ.

 


First published:March 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading