ನವದೆಹಲಿ (ಜೂ. 7): ಕೋವಿಡ್ ಸೋಂಕಿನ ವಿರುದ್ಧ ವಿಶ್ವದ ಪ್ರಮುಖ ದೇಶಗಳು ಹೋರಾಡುತ್ತಿದ್ದು, ಭಾರತ ಕೂಡ ಈ ಹೋರಾಟದಿಂದ ಹಿಂದೆ ಉಳಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸೋಂಕಿನ ವಿರುದ್ಧ ಹೋರಾಟಕ್ಕೆ ದೇಶ ಕಳೆದ ಒಂದೂವರೆ ವರ್ಷಗಳಲ್ಲಿ ಹೊಸ ಆರೋಗ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದೆ. ದೇಶದಲ್ಲಿ ವಿವಿಧ ಕಂಪನಿಗಳು ಲಸಿಕೆಗಳನ್ನು ಉತ್ಪಾದಿಸಲು ಆರಂಭಿಸಲಿದೆ. ಇದರ ಜೊತೆಗೆ ಬೇರೆ ದೇಶಗಳಿಂದಲೂ ಲಸಿಕೆ ಖರೀದಿ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿದೆ. ಲಸಿಕೆಗಳು ಪಡೆದ ಕಾರಣದಿಂದಲೇ ಆರೋಗ್ಯ ಕಾರ್ಯಕರ್ತರು ಜನರ ಜೀವ ಉಳಿಸಲು ಸಾಧ್ಯವಾಯಿತು. ವಿಶ್ವಾಸದಿಂದಲೇ ಸಿದ್ಧಿ ಎಂಬ ಮೂಲಕ ಮಂತ್ರವನ್ನು ಜಪಿಸಿ ಈಗಾಗಲೇ ದೇಶದ 23 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ ಎಂದರು.
ದೇಶದಲ್ಲಿ ಎಲ್ಲರಿಗೂ ಉಚಿತ ಲಸಿಕೆ ಕೊಡುವ ನಿಟ್ಟಿನಲ್ಲಿ ಕಾರ್ಯ ನಡೆಸಲಾಗುತ್ತಿದ್ದು, ಜನರು ಕೂಡ ಅವರ ಸರದಿ ಬಂದಾಗ ಲಸಿಕೆ ಹಾಕಿಕೊಳ್ಳಬೇಕು. ಇದೇ ಕಾರಣದಿಂದ ಲಸಿಕೆ ವಿತರಣೆ ವೇಗವನ್ನು ಹೆಚ್ಚಸಿಲಾಗುವುದು.ಲಸಿಕೆ ಲಭ್ಯತೆ ಹೆಚ್ಚಿಸಲು ವಿದೇಶದಿಂದ ಕೂಡಲ ಲಸಿಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ. ಮಕ್ಕಳಿಗೂ ಲಸಿಕೆ ನೀಡುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗುತ್ತಿದೆ. ಮಕ್ಕಳಿಗಾಗಿ ಎರಡಯ ಲಸಿಕೆಗಳ ಪ್ರಯೋಗ ನಡೆಯುತ್ತಿದೆ, ಇದರಲ್ಲಿ ಇಂದು ಮೂಗಿನ ದ್ರೌಷಧವಾಗಿದೆ.
ಅಂತರಾಷ್ಟ್ರೀಯ ಯೋಗ ದಿನದಂದು ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುವುದು. ದೇಶದ ಜನರಿಗೆ ಸರ್ಕಾರವೇ ಉಚಿತ ಲಸಿಕೆ ನೀಡಲಾಗುವದು. ಯಾವುದೇ ರಾಜ್ಯ ಸರ್ಕಾರಗಳಿಗೆ ಲಸಿಕೆ ಪಡೆಯಲು ಯಾವುದೇ ಹಣವನ್ನು ಪಾವತಿಸಬೇಕಿಲ್ಲ.
ಬಡವರ ಜೊತೆಗೆ ಸರ್ಕಾರ ಇದೆ. ನಮ್ಮ ಬಡ ಸಹೋದರ-ಸಹೋದರಿಯರು ಹೊಟ್ಟೆ ಹಸಿವಿನಿಂದ ಬಳಲಬಾರದು. ಇದೇ ಕಾರಣಕ್ಕೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಮೇ ಮತ್ತು ಜೂನ್ ತಿಂಗಳಿಗೆ ವಿಸ್ತರಿಸಲಾಗಿದೆ. ದೀಪಾವಳಿ ವರೆಗೂ ಅಂದರೆ ನವೆಂಬರ್ವರೆಗೂ ಪ್ರಧಾನಿ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ ನವೆಂಬರ್ವರೆಗೂ ಉಚಿತ ರೇಷನ್ ನೀಡಲಾಗುವುದು. ಇದರಿಂದ 80 ಕೋಟಿ ಜನರು ಲಾಭಾ ಪಡೆಯಲಿದ್ದಾರೆ ಎಂದು ಘೋಷಿಸಿದರು.
ವರ್ಷದೊಳಗೆ ಭಾರತದಲ್ಲಿ ಎರಡು ಲಸಿಕೆಗಳು ತಯಾರಾದವು. ಲಸಿಕೆ ಕುರಿತು ಅನೇಕ ರಾಜಕಾರಣಗಳು ನಡೆದವು. ಲಸಿಕೆ ಬಗ್ಗೆ ಜನರಲ್ಲಿ ಅನುಮಾನ ಮೂಡುವಂತೆ ಮಾಡಿ ಜನರ ಜೀವನದ ಜೊತೆ ಆಟವಾಡಿದರು. ಇದೇ ಲಸಿಕೆ ಪಡೆದ ಕಾರಣದಿಂದಲೇ ವೈದ್ಯರು, ನರ್ಸ್ ಆರೋಗ್ಯ ಸಿಬ್ಬಂದಿಗಳು ಜನರ ಜೀವ ರಕ್ಷಣೆಗೆ ಹೋರಾಡಿದರು. ಇದೇ ಕಾರಣದಿಂದಲೇ ಜನರಲ್ಲಿ ಮನವಿ ಮಾಡುತ್ತೇನೆ. ಜನರು ಹೋಗಿ ಲಸಿಕೆ ಪಡೆಯಬೇಕು, ಯುವ ಜನರು ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿ: ಬ್ರಾಹ್ಮಣರ ವಿರುದ್ಧ ನಟ ಚೇತನ್ ಹೇಳಿಕೆ: ಪೊಲೀಸ್ ಆಯುಕ್ತರಿಗೆ ಬಾಹ್ಮಣ ಸಮುದಾಯದಿಂದ ದೂರು
ಕೊರೋನಾ ಸೋಂಕಿನ ವಿರದ್ಧದ ಹೋರಾಟದಲ್ಲಿ 130 ಕೋಟಿ ಭಾರತೀಯರು ಒಗ್ಗಟ್ಟಿನಿಂದ ಸಹಕಾರದ ಹೋರಾಟ ನಡೆಸುತ್ತಿದ್ದೇವೆ, ಸೋಂಕಿನ ವಿರುದ್ಧದ ಯಶಸ್ಸಿಗೆ ಹಗಲು- ರಾತ್ರಿ ಇದರ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ದೇಶಾದ್ಯಂತ ಲಸಿಕೆ ವಿತರಣೆಯೂ ಯಶಸ್ವಿಯಾಗಲು ನಾವು ಶ್ರಮವಹಿಸುತ್ತಿದ್ದೇವೆ.
ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ. ಜನರು ತಪ್ಪದೇ ಮಾಸ್ಕ್ ಧರಸಿಬೇಕು. ಸಾಮಾಜಿಕ ಅಂತರ ಕಾಡಬೇಕು, ಕೊರೋನಾ ಕರ್ಫ್ಯೂ ಸಡಿಲಿಸಿದ ಮಾತ್ರಕ್ಕೆ ಸೋಂಕು ಇಲ್ಲ ಎಂದು ತಿಳಿಯದೇ ಎಚ್ಚರವಹಿಸಬೇಕು. ನಾವೆಲ್ಲರೂ ಸೋಂಕಿನ ವಿರುದ್ಧ ಈ ಹೋರಾಟದಲ್ಲಿ ಜಯಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ