Primary Schools Reopen: ಕೋವಿಡ್​ ಭಯದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿರುವ ಪೋಷಕರು ಈ ಸುದ್ದಿ ಓದಿ..!

‘’ಮಾಸ್ಕ್‌ಗಳನ್ನು ಧರಿಸಬೇಕೆಂದು ಮಕ್ಕಳಿಗೆ ತಿಳಿದಿದೆ ಹಾಗೂ ಶಾಲೆಗಳು ಸಹ ಕೋವಿಡ್ ಸೂಕ್ತ ನಡವಳಿಕೆಯನ್ನು [CAB] ಅನುಸರಿಸುವ ಬಗ್ಗೆ ಜಾಗರೂಕರಾಗಿರುತ್ತವೆ, ಏಕೆಂದರೆ ಅವರೂ ಸಹ ಸಮಾನ ಕಾಳಜಿ ಹೊಂದಿದ್ದಾರೆ’’ಎಂದು ಡಾ. ಗಲಗಲಿ ಹೇಳಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದಲ್ಲಿ ಕೊರೋನಾ(Coronavirus) ಹಾವಳಿ ಕಡಿಮೆಯಾಗುತ್ತಿದ್ದು, ಹೊಸ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿದೆ. ಈಗಾಗಲೇ ಕರ್ನಾಟಕ(Karnataka)ದಲ್ಲಿ 6ನೇ ತರಗತಿಯಿಂದ ವಿದ್ಯಾರ್ಥಿ(School Students)ಗಳಿಗೆ ಶಾಲೆ ಪುನಾರಂಭ(Schools Reopen) ಮಾಡಲಾಗಿತ್ತು. ಈಗ ಅಕ್ಟೋಬರ್ 25ರಿಂದ 1 ರಿಂದ 5 ನೇ ತರಗತಿಗಳಿಗೆ ಶಾಲೆಗಳನ್ನು ಪುನಃ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ, ಪೋಷಕರಿ(Parents)ಗೆ ಈಗಲೂ ಕೂಡ ತಮ್ಮ ಮಕ್ಕಳನ್ನು ಶಾಲೆ(School)ಗೆ ಕಳಿಸುವ ಬಗ್ಗೆ ಆತಂಕವಿದ್ದು, ಮಕ್ಕಳ ವೈದ್ಯರಿಗೆ(Doctors) ಕರೆ ಮಾಡುವ ಪೋಷಕರು ಶಾಲೆಯಲ್ಲಿ ಮಕ್ಕಳ ಸುರಕ್ಷತೆ(Children Safety )ಯ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಪೋಷಕರ ಭಯ ಹೋಗಲಾಡಿಸುತ್ತಿರುವ ವೈದ್ಯರು, ಮಕ್ಕಳನ್ನು ಶಾಲೆಗೆ ಕಳಿಸಿ. ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ.

ಪೋಷಕರು ಆತಂಕ ಪಡಬೇಡಿ

‘’ಮಕ್ಕಳನ್ನು ಬೇರೆಡೆಗೆ ಕರೆದೊಯ್ಯುತ್ತಿದ್ದರೂ, ಅನೇಕ ಪೋಷಕರು ತಮ್ಮ ಮಕ್ಕಳನ್ನುಶಾಲೆಗೆ ಕಳುಹಿಸುವ ಬಗ್ಗೆ ಚಿಂತಿತರಾಗಿದ್ದಾರೆ. ವೈರಸ್‌ನ ಭಯ ಇನ್ನೂ ವಾಸ್ತವವಾಗಿದೆ’’ ಎಂದು ಮಕ್ಕಳ ವೈದ್ಯರು ಟೈಮ್ಸ್ ಆಫ್‌ ಇಂಡಿಯಾಗೆ ತಿಳಿಸಿದ್ದಾರೆ. ಅಲ್ಲದೆ, "ಮಕ್ಕಳಲ್ಲಿ ಕಲಿಕೆಯ ನಷ್ಟದ ಬಗ್ಗೆ ಮತ್ತು ಆನ್‌ಲೈನ್ ಕಲಿಕೆಯು ಶಾಶ್ವತ ಪರಿಹಾರವಲ್ಲ ಎಂಬುದನ್ನು ನಾವು ಪೋಷಕರಿಗೆ ವಿವರಿಸುತ್ತೇವೆ’’ ಎಂದೂ ವೈದ್ಯರು ಹೇಳಿದ್ದಾರೆ.

‘’ತನ್ನನ್ನು ಸಮಾಲೋಚಿಸುವ 75% ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆ ಕಾಳಜಿ ಹೊಂದಿದ್ದಾರೆ’’ ಎಂದು ಇಂಡಿಯಾ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್‌ (IAP)ನಕಾರ್ಯಕಾರಿ ಸಮಿತಿಯ ಅಧ್ಯಕ್ಷೆ, ಕರ್ನಾಟಕ, ಡಾ. ಪ್ರೀತಿ ಎಂ ಗಲಗಲಿ ಹೇಳಿದ್ದಾರೆ.

ಪೋಷಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ

"ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಲ್ಲಿ ಜಾಗೃತಿ ಮೂಡಿಸಲು ನಾನು ಬ್ರಾಡ್‌ಕ್ಯಾಸ್ಟ್‌ ಗ್ರೂಪ್‌ವೊಂದನ್ನು ರಚಿಸಿದ್ದೇನೆ’’ ಎಂದೂ ಡಾ. ಗಲಗಲಿ ಹೇಳಿದರು. "ಹಿರಿಯ ಮಕ್ಕಳಿಗಾಗಿ ಶಾಲೆಗಳು ಪುನಾರಂಭವಾದ ನಂತರ ಒಂದು ಮಗು ಕೂಡ ಶೀತ ಅಥವಾ ಕೆಮ್ಮಿನ ಲಕ್ಷಣಗಳು ಕಾಣಿಸಿಕೊಂಡ ಬಗ್ಗೆ ನನ್ನ ಅರಿವಿಗೆ ಬರಲಿಲ್ಲ. ಉಸಿರಾಟದ ಸೋಂಕುಗಳ ಬಗ್ಗೆ ಪ್ರಶ್ನೆ ಮಾಡುವ ಪೋಷಕರ ಮಕ್ಕಳು ಚಿಕ್ಕವರು. ಅವರಿಗಿನ್ನೂ ಶಾಲೆ ಆರಂಭವಾಗಿಲ್ಲ’’ ಎಂದು ಹೇಳಿದರು.

ಇದನ್ನೂ ಓದಿ:BS Yediyurappa: ನಮ್ಮ ತಾತ ತರಕಾರಿ ಮಾರುತ್ತಿದ್ದರು, ನಾನು ಮಂಡ್ಯದಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದೆ; ಬಿಎಸ್ ಯಡಿಯೂರಪ್ಪ!

ಅಲ್ಲದೆ, ಶಾಲೆಗೆ ಭೇಟಿ ನೀಡಿ ಕ್ಯಾಂಪಸ್‌ನಲ್ಲಿ ತೆಗೆದುಕೊಳ್ಳುತ್ತಿರುವ ಮುನ್ನೆಚ್ಚರಿಕೆಗಳನ್ನು ಸ್ವತ: ಪೋಷಕರು ನೋಡಬೇಕೆಂದೂ ವೈದ್ಯರು ಸಲಹೆ ನೀಡಿದ್ದಾರೆ.

‘’ಮಾಸ್ಕ್‌ಗಳನ್ನು ಧರಿಸಬೇಕೆಂದು ಮಕ್ಕಳಿಗೆ ತಿಳಿದಿದೆ ಹಾಗೂ ಶಾಲೆಗಳು ಸಹ ಕೋವಿಡ್ ಸೂಕ್ತ ನಡವಳಿಕೆಯನ್ನು [CAB] ಅನುಸರಿಸುವ ಬಗ್ಗೆ ಜಾಗರೂಕರಾಗಿರುತ್ತವೆ, ಏಕೆಂದರೆ ಅವರೂ ಸಹ ಸಮಾನ ಕಾಳಜಿ ಹೊಂದಿದ್ದಾರೆ’’ಎಂದು ಡಾ. ಗಲಗಲಿ ಹೇಳಿದರು.

ಶಾಲೆಗಳನ್ನು ಮತ್ತೆ ತೆರೆಯಲು ಅನುಮತಿ ನೀಡುವ ಮೊದಲು ರಾಜ್ಯ ಸರ್ಕಾರ ಎಲ್ಲಾ ಅಂಶಗಳನ್ನು ಪರಿಗಣಿಸಿದೆ. ನಿಯಮಿತ ತರಗತಿಗಳಿಗೆ ಹಾಜರಾಗಲು ಪೋಷಕರ ಒಪ್ಪಿಗೆ ಅಗತ್ಯ ಎಂದು ತಾಂತ್ರಿಕ ಸಲಹಾ ಸಮಿತಿಯ (ಟಿಎಸಿ) ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್ ತಿಳಿಸಿದರು.

ಕೊರೋನಾ ಪರೀಕ್ಷೆ ಕಡ್ಡಾಯ

"ಮಕ್ಕಳನ್ನು ನಿಯಮಿತವಾಗಿ ಕೋವಿಡ್‌ಗಾಗಿ ಪರೀಕ್ಷಿಸಲಾಗುತ್ತದೆ. ಪ್ರಸ್ತುತ, ಶಾಲಾ ಮಕ್ಕಳಲ್ಲಿ ಸಕಾರಾತ್ಮಕತೆಯ ಪ್ರಮಾಣವು ಕೇವಲ 0.1% ಮಾತ್ರ” ಎಂದು ಡಾ. ಸುದರ್ಶನ್ ಹೇಳಿದರು. ಅಲ್ಲದೆ, ರಾಜ್ಯದಲ್ಲಿ ಪ್ರತಿದಿನ 10% ಕೋವಿಡ್‌ ಪರೀಕ್ಷೆಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನಡೆಯಬೇಕು ಎಂದು TAC ಕಡ್ಡಾಯಗೊಳಿಸಿದೆ ಎಂಬುದನ್ನೂ ತಿಳಿಸಿದರು.

ಗಣನೀಯ ಇಳಿಕೆ ಕಂಡ ಕೋವಿಡ್ ಪ್ರಕರಣಗಳು

ಇನ್ನು, ಈ ಸಮಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ. ವಯಸ್ಕ ಜನಸಂಖ್ಯೆಯ ಹೆಚ್ಚಿನವರು ಲಸಿಕೆ ತೆಗೆದುಕೊಂಡಿದ್ದಾರೆ ಅಥವಾ ಈಗಾಗಲೇ ಕೋವಿಡ್‌ ಸೋಂಕಿಗೊಳಗಾಗಿದ್ದಾರೆ ಎಂದು ಬೆಂಗಳೂರು ಮೂಲದ ಶಿಶುವೈದ್ಯರು ಮತ್ತು ಕೋವಿಡ್ ಮೂರನೇ ಅಲೆಯ ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿ ರಾಜ್ಯದ ಉನ್ನತ ಮಟ್ಟದ ತಜ್ಞರ ಸಮಿತಿಯ ಸದಸ್ಯರಾದ ಡಾ.ಜಗದೀಶ್ ಚಿನ್ನಪ್ಪ ಹೇಳಿದ್ದಾರೆ.

"ವಯಸ್ಕರಿಂದ ಮಕ್ಕಳಿಗೆ ಹರಡುವ ಸಾಧ್ಯತೆ ಕಡಿಮೆ. ಕಾಳಜಿಯು ಮಕ್ಕಳಿಂದ ಮಕ್ಕಳಿಗೆ ಹರಡುವಿಕೆಯಾಗಿದೆ, ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳ ಅಧ್ಯಯನ ನೋಡಿದರೆ, ಆ ಅವಕಾಶಗಳು ತುಂಬಾ ಕಡಿಮೆ. ಮಕ್ಕಳು ಸೋಂಕಿಗೆ ಒಳಗಾದರೂ, ಅವರಲ್ಲಿ 95% ರಷ್ಟು ಜನರಿಗೆ ಸೌಮ್ಯವಾದ ಶೀತ ಮತ್ತು ಕೆಮ್ಮು ಹೊರತುಪಡಿಸಿ ಯಾವುದೇ ಪ್ರಮುಖ ಲಕ್ಷಣಗಳಿರಲ್ಲ. ಹಾಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪ್ರೋತ್ಸಾಹಿಸುವಂತೆ ಸಲಹೆ ನೀಡಲಾಗಿದೆ’’ ಎಂದೂ ಹೇಳಿದರು.

ಇದನ್ನೂ ಓದಿ:Siddaramaiah| ಮೋದಿ ಸರ್ಕಾರ ಅತ್ಯವಸರದಿಂದ 100 ಕೋಟಿ ಲಸಿಕೆ ಸಂಭ್ರಮಾಚರಣೆಗೆ ಮುಂದಾಗಿರುವುದು ಹಾಸ್ಯಾಸ್ಪದ; ಸಿದ್ದರಾಮಯ್ಯ

ಕೋವಿಡ್ ನಿಯಮಗಳ ಪಾಲನೆ ಕಡ್ಡಾಯ

ಶಾಲೆಗಳಲ್ಲಿ ಸಾಧ್ಯವಾದಷ್ಟು ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಸಾಧ್ಯವಾದಷ್ಟು ಚಟುವಟಿಕೆಗಳನ್ನು ಬಯಲಿನಲ್ಲಿ ನಡೆಸಬೇಕು. "ಪ್ರಕರಣಗಳು ಪತ್ತೆಯಾಗದಂತೆ ಖಚಿತಪಡಿಸಿಕೊಳ್ಳಲು ಆಗಾಗ್ಗೆ ಪರೀಕ್ಷೆಗಳನ್ನು ಮಾಡಬೇಕು. ರ‍್ಯಾಂಡಮ್‌ ಪರೀಕ್ಷೆಗಳನ್ನು ನಡೆಸಬಹುದು’’ಎಂದು ಡಾ.ಚಿನ್ನಪ್ಪ ಹೇಳಿದರು.

ಮಕ್ಕಳ ತಜ್ಞರು ಹೇಳುವುದೇನು?

ಐದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳನ್ನು ಶಾಲೆಗೆ ಕಳುಹಿಸಲು ಯಾವುದೇ ಆತಂಕ ಇರಬಾರದು ಎಂದು ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಮಕ್ಕಳ ತೀವ್ರ ತಜ್ಞೆ ಡಾ.ಸುಪ್ರಜಾ ಚಂದ್ರಶೇಖರ್ ಹೇಳಿದ್ದಾರೆ.

CABಯ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಲು ಸುಮಾರು ಒಂದು ವರ್ಷ ತೆಗೆದುಕೊಂಡಿದೆ. ವಾಸ್ತವವಾಗಿ, ಇದು 'ಉಸಿರಾಟಕ್ಕೆ ಸೂಕ್ತವಾದ ನಡವಳಿಕೆ' ಆಗಿರಬೇಕು ಏಕೆಂದರೆ, ಇದು ಎಲ್ಲಾ ಉಸಿರಾಟದ ಸೋಂಕುಗಳಿಂದ ಜನರನ್ನು ರಕ್ಷಿಸುತ್ತದೆ ಎಂದೂ ಅವರು ಹೇಳಿದರು.

ಮಕ್ಕಳ ಸುರಕ್ಷತೆಗೆ ಏನು ಮಾಡಬೇಕು?

“ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವ ಪ್ರಯೋಜನಗಳ ಬಗ್ಗೆ ನಮಗೆ ಭರವಸೆ ನೀಡಬೇಕು. ವೈರಲ್ ಸೋಂಕು ಮುಖವನ್ನು ಸ್ಪರ್ಶಿಸುವುದರಿಂದ ಮತ್ತು ಪರಸ್ಪರ ಹತ್ತಿರವಿರುವ ಆಹಾರ ತಿನ್ನುವುದರಿಂದ ಹರಡುತ್ತದೆ. ಅನೇಕ ಶಾಲೆಗಳು ಮಕ್ಕಳಿಗೆ ಮನೆಯಲ್ಲಿ ತಿನ್ನಲು ಅವಕಾಶ ನೀಡಿವೆ. ಮಕ್ಕಳು ಶಾಲೆಗಳಲ್ಲಿ ಊಟ ಮಾಡುತ್ತಿದ್ದರೆ ಎರಡು ಅಡಿ ಅಂತರ ಇರುವಂತೆ ಶಾಲೆಗಳು ಖಚಿತಪಡಿಸಿಕೊಳ್ಳಬೇಕು ಮತ್ತು ಅದು ತೆರೆದ, ಚೆನ್ನಾಗಿ ಗಾಳಿ ಇರುವ ಪ್ರದೇಶವಾಗಿರಬೇಕು. ಶಾಲೆಗಳು ಮತ್ತು ಮಕ್ಕಳು ಈ ಸುರಕ್ಷತಾ ನಿಯಮಗಳನ್ನು ನಿರ್ವಹಿಸಿದರೆ, ಮಕ್ಕಳು ಸುರಕ್ಷಿತವಾಗಿರುತ್ತಾರೆ ಎಂದು ಅವರು ಹೇಳಿದರು.

ಪ್ರೀಸ್ಕೂಲ್ ಓಪನ್ ಯಾವಾಗ?

ಆದರೆ, ಚಿಕ್ಕ ಮಕ್ಕಳಲ್ಲಿ ಉಸಿರಾಟದ ಸೋಂಕುಗಳು ಹೆಚ್ಚಾಗಿರುವುದರಿಂದ ಪ್ರೀಸ್ಕೂಲ್‌ಗಳನ್ನು ತೆರೆಯಲು ಅವರು ಆತಂಕ ಹೊಂದಿದ್ದಾರೆ. ಆದರೆ, ಪ್ರೀಸ್ಕೂಲ್ ತೆರೆಯುವ ಬಗ್ಗೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದೂ ಡಾ.ಸುಪ್ರಜಾ ಚಂದ್ರಶೇಖರ್ ಹೇಳಿದರು.
Published by:Latha CG
First published: