HOME » NEWS » Coronavirus-latest-news » PREPARE FOR THIRD WAVE AND WE NEED BUFFER OXYGEN STOCK PAN INDIA SAYS SUPREME COURT RHHSN

ಮೂರನೇ ಅಲೆ ಎದುರಿಸಲು ಸಿದ್ಧರಾಗಿ, ದೇಶವ್ಯಾಪಿ ಆಕ್ಸಿಜನ್ ಸಂಗ್ರಹ ಅತ್ಯಗತ್ಯ; ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ

ದೆಹಲಿಯಲ್ಲಿ ಅನ್​ಲೋಡಿಂಗ್​ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಟ್ಯಾಂಕರ್​ಗಳು ಬೇಗ ಖಾಲಿಯಾದರೆ ಅದನ್ನು ಮತ್ತೆ ತುಂಬಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಂದು ದೆಹಲಿಗೆ ಎರಡು ಆಕ್ಸಿಜನ್​ ಎಕ್ಸ್​ಪ್ರೆಸ್​ ರೈಲುಗಳು ಆಗಮಿಸಲಿವೆ. ಇತರೆ ಎರಡು 63 ಮೆಟ್ರಿಕ್ ಟನ್​ನ ಎರಡು ರೈಲುಗಳು ಸಹ ಬರಲಿವೆ. 126 ಮೆಟ್ರಿಕ್ ಟನ್​ ಆಕ್ಸಿಜನ್​ ಐಎಸ್​ಒ ಕಂಟೈನರ್​ ದುರ್ಗಾಪುರ್​ನಿಂದ ತರಲಾಗಿದೆ ಎಂದು ತುಷಾರ್ ಮೆಹ್ತಾ ತಿಳಿಸಿದರು.

news18-kannada
Updated:May 6, 2021, 3:04 PM IST
ಮೂರನೇ ಅಲೆ ಎದುರಿಸಲು ಸಿದ್ಧರಾಗಿ, ದೇಶವ್ಯಾಪಿ ಆಕ್ಸಿಜನ್ ಸಂಗ್ರಹ ಅತ್ಯಗತ್ಯ; ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ
ಸುಪ್ರೀಂ ಕೋರ್ಟ್​.
  • Share this:
ನವದೆಹಲಿ: ದೆಹಲಿಗೆ ಆಮ್ಲಜನಕ ಪೂರೈಕೆ ಪ್ರಕರಣದ ವಿಚಾರವಾಗಿ ಸುಪ್ರೀಂಕೋರ್ಟ್ ಗುರುವಾರ ವಿಚಾರವಣೆ ನಡೆಸಿತು. ಈ ವೇಳೆ, ದೇಶಾದ್ಯಾಂತ ಆಮ್ಲಜನಕ ವಿತರಣೆ ನೀತಿವನ್ನು ಕೇಂದ್ರ ಸರ್ಕಾರ ನವೀಕರಿಸಬೇಕು ಎಂದು ಹೇಳಿದೆ. ಜೊತೆಗೆ ಮೂರನೇ ಹಂತದ ಅಲೆಯ ಕೊರೋನಾ ವೈರಸ್ ಎದುರಿಸಲು ಕೇಂದ್ರ ಸರ್ಕಾರ ಪ್ಯಾನ್ ಇಂಡಿಯಾ ವಿಧಾನ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸಲಹೆ ನೀಡಿದೆ. ಸಾಂಕ್ರಾಮಿಕ ರೋಗದ ಮೂರನೇ ಹಂತವು ಮೊದಲ ಎರಡಕ್ಕಿಂತ ಭಿನ್ನವಾಗಿರಬಹುದು ಎಂಬ ಕಾರಣಕ್ಕೆ ಆಮ್ಲಜನಕದ ಲೆಕ್ಕಪರಿಶೋಧನೆ ನಡೆಯಬೇಕು ಮತ್ತು ಹಂಚಿಕೆಯ ಆಧಾರವನ್ನು ಮರು ಮೌಲ್ಯಮಾಪನ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಹೇಳಿತು. “ನಾವು ಇಂದು ತಯಾರಿ ನಡೆಸಿದರೆ ಮಾತ್ರ 3 ನೇ ಹಂತವನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಬಫರ್ ಸ್ಟಾಕ್ ರಚಿಸಬೇಕಾಗಿದೆ ”ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಕೇಂದ್ರಕ್ಕೆ ಸಲಹೆ ನೀಡಿದರು.

ದೇಶವ್ಯಾಪಿ ಆಮ್ಲಜನಕ ಬಿಕ್ಕಟ್ಟಿನ ನಡುವೆ, ದೆಹಲಿಯ COVID-19 ರೋಗಿಗಳಿಗೆ ವೈದ್ಯಕೀಯ ಆಮ್ಲಜನಕದ ಪೂರೈಕೆಯನ್ನು ಪ್ರತಿದಿನ 700 ಮೆ.ಟನ್ ಗೆ ಹೇಗೆ ಹೆಚ್ಚಿಸಲು ಸಾಧ್ಯ ಎಂದು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ ಮುಂದೆ ಹೇಳಿದರು. ಕೇಂದ್ರ ಸರ್ಕಾರ ತನ್ನ ಆದೇಶವನ್ನು ಪಾಲಿಸುತ್ತದೆ ಮತ್ತು 700 ಮೆಟ್ರಿಕ್ ಟನ್ ಆಮ್ಲಜನಕದ ಬದಲು, COVID-19 ರೋಗಿಗಳಿಗೆ ಚಿಕಿತ್ಸೆ ನೀಡಲು ದೆಹಲಿಗೆ 730 ಮೆಟ್ರಿಕ್ ಟನ್ ಪೂರೈಕೆ ಮಾಡಲಿದೆ ಎಂದು  ಉನ್ನತ ನ್ಯಾಯಾಲಯಕ್ಕೆ ತಿಳಿಸಿದರು. ಆದರೆ, ದೆಹಲಿ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಇರುವುದಾಗಿ ಸಮೀಕ್ಷೆಯೊಂದು ಬಹಿರಂಗಪಡಿಸಿದೆ ಎಂಬ ವಿಷಯವನ್ನು ಅವರು ಸುಪ್ರೀಂಕೋರ್ಟ್ ಗಮನಕ್ಕೆ ತಂದರು.

ಇದನ್ನು ಓದಿ: Kerala Lockdown | ಕೇರಳದಲ್ಲಿ ಮೇ 8ರಿಂದ 16ರವರೆಗೆ ಲಾಕ್​ಡೌನ್ ಘೋಷಣೆ; ಅಗತ್ಯ ಸೇವೆಗಳು ಮಾತ್ರ ಲಭ್ಯ

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಾತನಾಡಿ, ದೆಹಲಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ಸರಬರಾಜು ಮಾಡಲಾಗಿದೆ ಆದರೆ ರಾಷ್ಟ್ರ ರಾಜಧಾನಿಯಲ್ಲಿ ಟ್ಯಾಂಕರ್​ಗಳಿಂದ ಆಮ್ಲಜನಕ ಅನ್​ಲೋಡಿಂಗ್​ ಮಾಡುವಲ್ಲಿ ಸಮಯ ತೆಗೆದುಕೊಳ್ಳುತ್ತಿದೆ. "ದ್ರವ ವೈದ್ಯಕೀಯ ಆಮ್ಲಜನಕ ಬಳಸುವ ದೆಹಲಿಯ ಎಲ್ಲಾ ಪ್ರಮುಖ ಆಸ್ಪತ್ರೆಗಳನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿದೆ. ಈಗಾಗಲೇ ಆಸ್ಪತ್ರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಸ್ಟಾಕ್ ಇದೆ. ನಿನ್ನೆ ದೆಹಲಿಗೆ ದೊಡ್ಡ ಪ್ರಮಾಣದ ಆಮ್ಲಜನಕ ವಿತರಿಸಲಾಗೊದೆ. ಆದರೆ ವಿತರಿಸಲಾಗಿಲ್ಲ," ಎಂದು ಅವರು ಹೇಳಿದರು.



Youtube Video

ದೆಹಲಿಯಲ್ಲಿ ಆಕ್ಸಿಜನ್ ಟ್ಯಾಂಕರ್​ಗಳಿಂದ ಅನ್​ಲೋಡಿಂಗ್​ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಟ್ಯಾಂಕರ್​ಗಳು ಬೇಗ ಖಾಲಿಯಾದರೆ ಅದನ್ನು ಮತ್ತೆ ತುಂಬಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಂದು ದೆಹಲಿಗೆ ಎರಡು ಆಕ್ಸಿಜನ್​ ಎಕ್ಸ್​ಪ್ರೆಸ್​ ರೈಲುಗಳು ಆಗಮಿಸಲಿವೆ. ಇತರೆ ಎರಡು 63 ಮೆಟ್ರಿಕ್ ಟನ್​ನ ಎರಡು ರೈಲುಗಳು ಸಹ ಬರಲಿವೆ. 126 ಮೆಟ್ರಿಕ್ ಟನ್​ ಆಕ್ಸಿಜನ್​ ಐಎಸ್​ಒ ಕಂಟೈನರ್​ ದುರ್ಗಾಪುರ್​ನಿಂದ ತರಲಾಗಿದೆ ಎಂದು ತುಷಾರ್ ಮೆಹ್ತಾ ತಿಳಿಸಿದರು.

Published by: HR Ramesh
First published: May 6, 2021, 3:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories