HOME » NEWS » Coronavirus-latest-news » PREGNANT WOMAN CAN GET VACCINE WHAT CENTRAL COMMITTEE SAID KVD

ಗರ್ಭಿಣಿಯರು ವ್ಯಾಕ್ಸಿನ್ ಪಡೆಯಬಹುದಂತೆ; ಹಾಲುಣಿಸುವ ತಾಯಿಯೂ ಲಸಿಕೆ ಹಾಕಿಸಿಕೊಳ್ಳಬಹುದಾ?

ಲಸಿಕೆ ಪಡೆಯುವುದರಿಂದ ಗರ್ಭಿಣಿಯ ಪ್ಲೆಸೆಂಟಾ (ಜರಾಯು, ಹೊಕ್ಕಳುಬಳ್ಳಿ)ಗೆ  ಹಾನಿಯಾಗುತ್ತದೆ ಎಂಬ ಊಹಾಪೋಹವನ್ನು ಅಲ್ಲಗಳೆದಿದ್ದಾರೆ. ಲಸಿಕೆಯಿಂದ ಗರ್ಭದ ಶೀಲಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದಿದ್ದಾರೆ.

Kavya V | news18-kannada
Updated:May 13, 2021, 2:40 PM IST
ಗರ್ಭಿಣಿಯರು ವ್ಯಾಕ್ಸಿನ್ ಪಡೆಯಬಹುದಂತೆ;  ಹಾಲುಣಿಸುವ ತಾಯಿಯೂ ಲಸಿಕೆ ಹಾಕಿಸಿಕೊಳ್ಳಬಹುದಾ?
ಸಾಂದರ್ಭಿಕ ಚಿತ್ರಗಳು
  • Share this:
ನವದೆಹಲಿ (ಮೇ 13) : ಕೊರೋನಾ 2ನೇ ಅಲೆಯ ಅಬ್ಬರ ದೇಶಾದ್ಯಂತ ಭಯಾನಕ ಪರಿಸ್ಥಿತಿಯನ್ನು ನಿರ್ಮಿಸಿಬಿಟ್ಟಿದೆ. ಸರ್ವವ್ಯಾಪಿ ಆಗಿರುವ ಸೋಂಕಿನಿಂದ ಸುರಕ್ಷಿತರಾಗಿರಲು ಕೊರೋನಾ ನಮಗಿರುವ ದೊಡ್ಡ ಅಸ್ತ್ರ. 18 ವರ್ಷ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್​ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ. ಆದರೆ ಲಸಿಕೆ ಪಡೆಯುವವರಲ್ಲಿ ಹಲವು ಗೊಂದಲಗಳು ಮನೆ ಮಾಡಿವೆ. ಗರ್ಭಿಣಿಯರು ಲಸಿಕೆ ಪಡೆಯಬಹುದಾ? ಲಸಿಕೆ ಪಡೆಯುವುದಾದರೆ ಯಾವ ತಿಂಗಳು ಸೂಕ್ತ? ಬಾಣಂತಿಯರು ವ್ಯಾಕ್ಸಿನ್​ ಪಡೆಯಬಹುದೇ? ಮಗುವಿಗೆ ಹಾಲುಣಿಸುತ್ತಿರುವ ಸ್ತ್ರೀಯರೂ ಲಸಿಕೆ ಪಡೆಯಬಹುದೇ? ಎಂಬೆಲ್ಲಾ ಗೊಂದಲಗಳು ಮನೆ ಮಾಡಿವೆ.

ಮೇಲಿನ ಎಲ್ಲಾ ಗೊಂದಲಗಳಿಗೆ ಕೇಂದ್ರದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ತೆರೆ ಎಳೆದಿದೆ. ಗರ್ಭಿಣಿಯರು ಲಸಿಕೆ ಪಡೆಯಲು ಯಾವುದೇ ಅಭ್ಯಂತರವಿಲ್ಲ. ಇದರಿಂದ ಗರ್ಭದಲ್ಲಿರುವ ಮಗುವಿಗೆ, ತಾಯಿಗೆ ಯಾವುದೇ ತೊಂದರೆ  ಆಗುವುದಿಲ್ಲ. ಆದರೂ ವ್ಯಾಕ್ಸಿನ್ ಪಡೆಯುವುದು ಅವರ ಆಯ್ಕೆಗೆ ಬಿಟ್ಟಿದ್ದು. ಅವಶ್ಯಕತೆ ಇದ್ದರೆ ಯಾವುದೇ ಕೊರೋನಾ ಲಸಿಕೆ (ಕೋವ್ಯಾಕ್ಸಿನ್​​ ಅಥವಾ ಕೋವಿಶೀಲ್ಡ್​​) ಪಡೆಯಬಹುದು ಎಂದಿದ್ದಾರೆ. ಇನ್ನು ಹಾಲುಣಿಸುವ ಮಹಿಳೆಯರು ಲಸಿಕೆ ಪಡೆಯಲು ಸಮಸ್ಯೆ ಇಲ್ಲ. ಕೊರೊನಾ ಪಾಸಿಟಿವ್ ಆದವರು 6 ತಿಂಗಳು ಲಸಿಕೆ ಪಡೆಯುವುದನ್ನು ಮುಂದೂಡಬೇಕು ಎಂದು ಕೇಂದ್ರದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ.

ಇನ್ನು ಲಸಿಕೆ ಪಡೆಯುವುದರಿಂದ ಗರ್ಭಿಣಿಯ ಪ್ಲೆಸೆಂಟಾ (ಜರಾಯು, ಹೊಕ್ಕಳುಬಳ್ಳಿ)ಗೆ  ಹಾನಿಯಾಗುತ್ತದೆ ಎಂಬ ಊಹಾಪೋಹವನ್ನು ಅಲ್ಲಗಳೆದಿದ್ದಾರೆ. ಲಸಿಕೆಯಿಂದ ಗರ್ಭದ ಶೀಲಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದಿದ್ದಾರೆ. ಅಮೆರಿಕಾ, ಬ್ರೇಜಿಲ್​ ದೇಶಗಳು ಗರ್ಭಿಣಿಯರಿಗೆ ಲಸಿಕೆಯನ್ನು ನೀಡುತ್ತಿವೆ. ಸದ್ಯದವರೆಗೂ ಲಸಿಕೆಯಿಂದ ಗರ್ಭಿಣಿಯರಿಗೆ ತೊಂದರೆಯಾದಂತಹ ಪ್ರಕರಣಗಳು ದಾಖಲಾಗಿಲ್ಲ. ಹೆಚ್ಚಿನ ಮಾಹಿತಿಗೆ ಮತ್ತಷ್ಟು ಸಂಶೋಧನೆಗಳು ನಡೆಯಬೇಕಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ರಾಜ್ಯದಲ್ಲಿ ಸದ್ಯಕ್ಕೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನವನ್ನು ತಾತ್ಕಾಲಿಕವಾಗಿ ಸರ್ಕಾರ ಮುಂದೂಡಿದೆ. ಸರ್ಕಾರಿ ಆಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ಕೊರತೆ ಕಂಡು ಬಂದಿದೆ. ಹೀಗಾಗಿ ಗರ್ಭಿಣಿಯರು, ಹಾಲುಣಿಸುತ್ತಿರುವವರು ಲಸಿಕೆಗೆ ಕಾಯುವ ಬದಲು ಕೋವಿಡ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸುವ ಮೂಲಕ ಸುರಕ್ಷಿತವಾಗಿ ಇರಬಹುದು. ಇನ್ನು ಲಸಿಕೆ ಪಡೆಯಲೇಬೇಕು ಎನ್ನುವ ನಿಯಮ ಇಲ್ಲದಿರುವುದರಿಂದ ನಿಮ್ಮ ವೈದ್ಯರ ಸಲಹೆ ಮೇರೆಗೆ ಮುಂದುವರಿಯುವುದು ಉತ್ತಮ.

ಇನ್ನು ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 3,62,727 ಕೊರೋನಾ ಪಾಸಿಟಿವ್​​ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ದೇಶದಲ್ಲಿ ಕೊರೋನಾ ಕೇಸ್​ಗಳ ಸಂಖ್ಯೆ 2,37,03,665ಕ್ಕೆ ಏರಿಕೆ ಆಗಿದೆ. ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದೆ. 24 ಗಂಟೆಗಳ ಅವಧಿಯಲ್ಲಿ  4,120 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,58,317ಕ್ಕೆ ಏರಿಕೆ ಆಗಿದೆ. ಇನ್ನು ಸಮಾಧಾನಕರ ಸಂಗತಿ ಎಂದರೆ ಒಂದೇ ದಿನ 3,52,181 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.
Published by: Kavya V
First published: May 13, 2021, 2:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories