ಮೈಸೂರು(ಮೇ.28): " ದೇಶದ ಬಹುತೇಕ ಕಡೆ ಬೀದಿ, ಪಾರ್ಕ್ಗಳಿಗೆ ರಾಜೀವ್ ಗಾಂಧಿ, ಜವಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯಂತವರ ಹೆಸರಿಟ್ಟ ಕಾಂಗ್ರೆಸ್ಗೆ, ಸರ್ಕಾರ ಯಲಹಂಕದ 'ಮೇಜರ್ ಸಂದೀಪ್ ಉನ್ನಿಕೃಷ್ಣನ್' ರಸ್ತೆಯ ಮೇಲ್ಸೇತುವೆಗೆ 'ವಿನಾಯಕ ದಾಮೋದರ ಸಾವರ್ಕರ್ ಹೆಸರು ನಾಮಕರಣ ಮಾಡಿದರೆ ಮಾತ್ರ ಯಾಕೇ ನೋವು?" ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಇಂದು ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಂಸದ ಪ್ರತಾಪ್ ಸಿಂಹ, ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಭಜನೆ ಮಾಡೋದು ಮಾತ್ರ ಕಾಂಗ್ರೆಸ್ ಗೊತ್ತು. ಸರ್ದಾರ್ ವಲ್ಲಭಭಾಯ್ ಪಟೇಲ್, ಅಂಬೇಡ್ಕರ್ ಅವರನ್ನೇ ಕಾಂಗ್ರೆಸ್ ಸಹಿಸಲಿಲ್ಲ. ಈಗ ವೀರ್ ಸಾವರ್ಕರ್ ಹೆಸರು ಸಹಿಸುವರೇ ಎಂದರು ಪ್ರತಾಪ್ ಸಿಂಹ.
ಕಾಂಗ್ರೆಸ್ಗೆ ನೆಹರು ಕುಟುಂಬವನ್ನು ಮಾತ್ರ ಹೊಗಳುವುದು ಗೊತ್ತು. ಇವರು ಇಡೀ ದೇಶದಲ್ಲಿ ಪಾರ್ಕ್, ಬೀದಿಯೆನ್ನದೇ ಎಲ್ಲದಕ್ಕೂ ಅವರಿಗೆ ಬೇಕಾದವರ ಹೆಸರು ಇಡಬಹುದು. ನಾವು ಬೆಂಗಳೂರಿನ ಒಂದು ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟರೆ ಮಾತ್ರ ಇವರಿಗೆ ನೋವು ಎಂದು ಕುಟುಕಿದರು.
ಇದನ್ನೂ ಓದಿ: COVID-19: ಹೀಗಿದೆ ಕೊರೋನಾ ಪೀಡಿತರ ರಾಜ್ಯವಾರು ವಿವರ..!
ಸ್ವಾತಂತ್ರ್ಯ ಹೋರಾಟದ ಕನಿಷ್ಠ ಜ್ಞಾನವೂ ಕಾಂಗ್ರೆಸ್ಗೆ ಇಲ್ಲ. ಇಂದಿರಾ ಕ್ಯಾಂಟಿನ್ ಎಂದು ಹೆಸರಿಡುವಾಗ ಕನ್ನಡಿಗರ ಹೆಸರು ಕಾಣಿಸಲಿಲ್ಲ ಸಿದ್ದರಾಮಯ್ಯನವರಿಗೆ. ಅಂದು ಅವರ ಕಣ್ಣಿಗೆ ಕಂಡಿದ್ದು ಇಂದಿರಮ್ಮ ಹೆಸರು ಮಾತ್ರ. ಈಗಲಾದರೂ ಆತ್ಮದ್ರೋಹದ ಮಾತು ಬೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ. ಇನ್ನಾದರೂ ಆತ್ಮಾವಲೋಕನ ಮಾಡಿಕೊಂಡು ರಚನಾತ್ಮಕ ರಾಜಕಾರಣ ಮಾಡಿದರೆ ನಿಮಗೆ ಉಳಿಗಾಲ. ಇಲ್ಲದಿದ್ದರೆ ನಿರ್ಣಾಮ ಆಗಿಬಿಡುತ್ತೀರಾ. ಒಮ್ಮೆ ಯೋಚಿಸಿ ಎಂದು ಸಿದ್ದರಾಮಯ್ಯಗೆ ಸಲಹೆ ನೀಡಿದರು ಪ್ರತಾಪ್ ಸಿಂಹ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ