21 ದಿನಗಳ ಭಾರತ್​​ ಬಂದ್​ ಕೊರೋನಾ ತಡೆಯುತ್ತೆ ಎನ್ನಲು ವೈಜ್ಞಾನಿಕ ಪುರಾವೆಗಳಿಲ್ಲ - ಪ್ರಶಾಂತ್​​ ಕಿಶೋರ್​

ದೇಶದಲ್ಲಿ ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮಂಗಳವಾರ ರಾತ್ರಿ 12 ಗಂಟೆಯಿಂದ ಜಾರಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶವನ್ನು ಮೂರು ವಾರಗಳ ಮಟ್ಟಿಗೆ ಲಾಕ್‌ಡೌನ್ ಮಾಡಲು ಆದೇಶಿಸಿದರು. ಪರಿಣಾಮ ಬುಧವಾರ ಷೇರು ಮಾರುಕಟ್ಟೆ ವ್ಯವಹಾರ ಆರಂಭಿಸುತ್ತಿದ್ದಂತೆ ಈಕ್ವಿಟಿ ಶೇ.0.47 ರಷ್ಟು ಕುಸಿತ ಅನುಭವಿಸಿದೆ.

ಪ್ರಶಾಂತ್​ ಕಿಶೋರ್​.

ಪ್ರಶಾಂತ್​ ಕಿಶೋರ್​.

 • Share this:
  ನವದೆಹಲಿ(ಮಾ.25): ಕೊರೋನಾ ನಿಯಂತ್ರಣಕ್ಕಾಗಿ ಮೂರು ವಾರಗಳ ಕಾಲ ಇಡೀ ದೇಶದ್ಯಾಂತ ಕರ್ಫ್ಯೂ ಜಾರಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರದ ಬಗ್ಗೆ ಭಾರತೀಯ ರಾಜಕೀಯ ಕಾರ್ಯ ಸಮಿತಿ (ಐಪಿಸಿ) ತಂಡದ ಮುಖ್ಯಸ್ಥ ಪ್ರಶಾಂತ್​​ ಕಿಶೋರ್ ಅಸಮಾಧಾನ ಹೊರಹಾಕಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಚುನಾವಣಾ ವಿಶ್ಲೇಷಕ ಪ್ರಶಾಂತ್ ಕಿಶೋರ್, 21 ದಿನಗಳ ಲಾಕ್‌ಡೌನ್ ಕೊರೋನಾ ವೈರಸ್​​ ಸೋಂಕನ್ನು ನಿಯಂತ್ರಿಸಲಿದೆ ಎನ್ನಲು ವೈಜ್ಞಾನಿಕ ಆಧಾರಗಳಿಲ್ಲ ಎಂದು ಬರೆದುಕೊಂಡಿದ್ದಾರೆ.

  ದೇಶವನ್ನು 21 ದಿನ ಲಾಕ್​​ಡೌನ್​ ಮಾಡುವುದು ಸರಿಯಾದ ನಿರ್ಧಾರ ಆಗಿರಬಹುದು. ಆದರೆ, ಮೂರು ವಾರ ಇಡೀ ದೇಶ ಬಂದ್​ ಅಂದರೆ ತುಸು ದೀರ್ಘ ಆಯ್ತು. ದೇಶವನ್ನು ಕೊರೋನಾದಿಂದ ಪಾರು ಮಾಡುಲು ಕೇಂದ್ರ ಸರ್ಕಾರ ತೆಗೆದುಕೊಂಡ ಕಳಪೆ ನಿರ್ಧಾರ ಇದಾಗಿದೆ. ಜತೆಗೆ ಬಡವರು ಇದಕ್ಕೆ ಬೆಲೆ ತೆರಬೇಕಾಗಿದೆ. ಮುಂದೆ ನಾವು ಇನ್ನಷ್ಟು ಕರಾಳ ದಿನಗಳನ್ನು ನೋಡಲಿದ್ದೇವೆ ಎಂದು ಪ್ರಶಾಂತ್​ ಕಿಶೋರ್​ ಟ್ವೀಟ್​​ ಮಾಡಿದ್ದಾರೆ.

  ಇನ್ನು, ಸರಿಯಾದ ಚಿಕಿತ್ಸೆಯ ಕ್ರಮಗಳಿಲ್ಲದೆ ಕೇವಲ 21 ದಿನಗಳ ಕಾಲ ಇಡೀ ದೇಶ ಲಾಕ್‌ಡೌನ್ ಮಾಡುವುದು ಕೋವಿಡ್​​​ ರೋಗವನ್ನು ನಿಯಂತ್ರಿಸಲಿದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದನ್ನು ಸರಿಯಾಗಿ ಕಾರ್ಯರೂಪಕ್ಕೆ ತರದೇ ಹೋದರೆ ಮೂರು ವಾರಗಳ ಬಂದ್​​ ಲಕ್ಷಾಂತರ ಭಾರತೀಯ ಬದುಕು ನಾಶ ಮಾಡಲಿದೆ ಎಂದು ಪ್ರಶಾಂತ್​ ಕಿಶೋರ್​​ ಮತ್ತೊಂದು ಟ್ವೀಟ್​ ಮಾಡಿದ್ದಾರೆ.  ಕೊರೋನಾ ಸೋಂಕು ಹಬ್ಬದಂತೆ ತಡೆಯುವ ಸಲುವಾಗಿ ರಾಷ್ಟ್ರವ್ಯಾಪಿ ಕರೆ ನೀಡಿರುವ 21`ದಿನಗಳ ಲಾಕ್‌ಡೌನ್‌ನಿಂದಾಗಿ ಭಾರತ ಸುಮಾರು 120 ಬಿಲಿಯನ್ (ಭಾರತೀಯ ಹಣದಲ್ಲಿ 9 ಲಕ್ಷ) ಕಳೆದುಕೊಳ್ಳಲಿದೆ. ಅಂದರೆ ಅಂದಾಜು ಭಾರತದ ಶೇ. 4 ರಷ್ಟು ಜಿಡಿಪಿ ನಷ್ಟವಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್‌ ಅನ್ನು ಘೋಷಿಸುವ ಅಗತ್ಯವಿದೆ ಎಂದು ಆರ್ಥಿಕ ತಜ್ಞರು ಸೂಚನೆ ನೀಡಿದ್ದಾರೆ.

  ಇದನ್ನೂ ಓದಿ: ರಾಜ್ಯದಲ್ಲಿ ಅರ್ಧ ಶತಕ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ; ಬೆಂಗಳೂರಿನಲ್ಲಿಯೇ 32 ಪ್ರಕರಣ

  ದೇಶದಲ್ಲಿ ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಮಂಗಳವಾರ ರಾತ್ರಿ 12 ಗಂಟೆಯಿಂದ ಜಾರಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶವನ್ನು ಮೂರು ವಾರಗಳ ಮಟ್ಟಿಗೆ ಲಾಕ್‌ಡೌನ್ ಮಾಡಲು ಆದೇಶಿಸಿದರು. ಪರಿಣಾಮ ಬುಧವಾರ ಷೇರು ಮಾರುಕಟ್ಟೆ ವ್ಯವಹಾರ ಆರಂಭಿಸುತ್ತಿದ್ದಂತೆ ಈಕ್ವಿಟಿ ಶೇ.0.47 ರಷ್ಟು ಕುಸಿತ ಅನುಭವಿಸಿದೆ.

  ಈ ಮೂರು ವಾರಗಳ ಲಾಕ್‌ಡೌನ್‌ನಿಂದಾಗಿ 120 ಬಿಲಿಯನ್, ದೇಶದ ಜಿಡಿಪಿ ಮೌಲ್ಯದ ಶೇ.4 ರಷ್ಟು ಹಣ ನಷ್ಟ ಉಂಟಾಗಲಿದೆ ಎಂದು ಅಂದಾಜು ಮಾಡಲಾಗಿರುವುದಾಗಿ ಬ್ರಿಟಿಷ್ ಬ್ರೋಕರೇಜ್ ಬಾರ್ಕ್ಲೇಸ್ ಈಗಾಗಲೇ ತನ್ನ ಟಿಪ್ಪಣಿಯಲ್ಲಿ ತಿಳಿಸಿದೆ.
  First published: