Prabhas: ಕೊರೋನಾ ವಿರುದ್ಧ ಹೋರಾಟಕ್ಕೆ ಪ್ರಭಾಸ್ 4 ಕೋಟಿ ನೆರವು

Prabhas Donates 4 crore: ಕೊರೋನಾ ಭೀತಿಯಿಂದಾಗಿ ಎಲ್ಲಡೆ ಲಾಕ್​ಡೌನ್​ ಆಗಿದ್ದು, ಪ್ರಭಾಸ್​ ಸಹ ಮನೆಯಲ್ಲೇ ಸೆಲ್ಫ್​ ಐಸೋಲೇಶನ್​ನಲ್ಲಿದ್ದಾರೆ. ತಮ್ಮ ಖಾಸಗಿ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದುತ್ತಾ ಕಾಲ ಕಳೆಯುತ್ತಿರು ಡಾರ್ಲಿಂಗ್​ ಕೊರೋನಾ ವಿರುದ್ಧದ ಹೋರಾಟಕ್ಕೂ ಕೈ ಜೋಡಿಸಿದ್ದಾರೆ.

Anitha E | news18-kannada
Updated:March 27, 2020, 12:27 PM IST
Prabhas: ಕೊರೋನಾ ವಿರುದ್ಧ ಹೋರಾಟಕ್ಕೆ ಪ್ರಭಾಸ್ 4 ಕೋಟಿ ನೆರವು
ಮೋದಿ ಹಾಗೂ ಪ್ರಭಾಸ್​
  • Share this:
ನಟ ಪ್ರಭಾಸ್ ಇತ್ತೀಚೆಗಷ್ಟೆ ತಮ್ಮ ಹೊಸ ಸಿನಿಮಾದ ಚಿತ್ರೀಕರಣ ಮುಗಿಸಿಕೊಂಡು ಭಾರತಕ್ಕೆ ಬಂದಿದ್ದಾರೆ. ಯುರೋಪ್​ನಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ಶೆಡ್ಯೂಲ್​ ಕೊನೆಗೊಂಡ ನಂತರ ಪ್ರಭಾಸ್​ ಹೈದರಾಬಾದಿಗೆ ಹಿಂತಿರುಗಿದ್ದಾರೆ.

ಕೊರೋನಾ ಭೀತಿಯಿಂದಾಗಿ ಎಲ್ಲಡೆ ಲಾಕ್​ಡೌನ್​ ಆಗಿದ್ದು, ಪ್ರಭಾಸ್​ ಸಹ ಮನೆಯಲ್ಲೇ ಸೆಲ್ಫ್​ ಐಸೋಲೇಶನ್​ನಲ್ಲಿದ್ದಾರೆ. ತಮ್ಮ ಖಾಸಗಿ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದುತ್ತಾ ಕಾಲ ಕಳೆಯುತ್ತಿರು ಡಾರ್ಲಿಂಗ್​ ಕೊರೋನಾ ವಿರುದ್ಧದ ಹೋರಾಟಕ್ಕೂ ಕೈ ಜೋಡಿಸಿದ್ದಾರೆ.

Prabhas Pooja Hegde and Radhakrishna new movie First Look poster will be out soon 
ಪ್ರಭಾಸ್​


ಹೌದು, ಪ್ರಭಾಸ್​ ಕೊರೋನಾ ವಿರುದ್ಧ ಹೋರಾಡಲು 4 ಕೋಟಿ ಹಣ ನೀಡುವುದಾಗಿ ಹೇಳಿದ್ದಾರೆ. 3 ಕೋಟಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ, ಆಂಧ್ರ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 50 ಲಕ್ಷ ನೀಡಲು ನಿರ್ಧರಿಸಿದ್ದಾರಂತೆ.

 ಇನ್ನು ನಿನ್ನೆ ಪವನ್ ಕಲ್ಯಾಣ್​ 2 ಕೋಟಿ, ಚಿರಂಜೀವಿ ಒಂದು ಕೋಟಿ ಹಾಗೂ ರಾಮ್​ ಚರಣ್​ 70 ಲಕ್ಷ ಹಣವನ್ನು ಕೊರೋನಾ ವಿರುದ್ಧ ಹೋರಾಡಲು ನೀಡುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

Nikhil-Revathi: ಬೇವು ಬೆಲ್ಲ ಹಂಚಿಕೊಂಡು ಸುಖ-ದುಖಃದಲ್ಲಿ ಸಮಪಾಲು ಸ್ವೀಕರಿಸುವುದಾಗಿ ಸಾರಿದ ನಿಖಿಲ್​-ರೇವತಿ..!

First published:March 27, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading