ಕೊರೋನಾ ಎಫೆಕ್ಟ್‌; ನೆಲಕಚ್ಚಿದ ಕುಕ್ಕುಟೋದ್ಯಮ, ಗಗನಕ್ಕೇರುತ್ತಿದೆ ಕುರಿ-ಮೇಕೆ ಮಾಂಸದ ಬೆಲೆ

ರಾಜ್ಯದಲ್ಲಿ ಒಟ್ಟು 15 ಸಾವಿರ ಜನ ರೈತರು ಕೋಳಿ ಉದ್ಯಮದಲ್ಲಿದ್ದಾರೆ. 5 ಲಕ್ಷ ಜನ ಕಾರ್ಮಿಕರು ಈ ಉದ್ಯಮದಲ್ಲಿ ತೊಡಗಿದ್ದಾರೆ. ಪ್ರತಿ ಯುಗಾದಿಗೆ ಕೋಳಿ ಮಾಂಸ ಪ್ರತಿ ಕೆಜಿಗೆ 120 ರೂ ಇರ್ತಿತ್ತು. ಆದರೆ, ಈಗ ಕೋಳಿಯನ್ನು ಪುಕ್ಕಟೆಯಾಗಿ ಕೊಟ್ಟರೂ ಖರೀದಿ ಮಾಡಲು ಯಾರೂ ಮುಂದೆ ಬರುತ್ತಿಲ್ಲ.

MAshok Kumar | news18-kannada
Updated:March 26, 2020, 12:39 PM IST
ಕೊರೋನಾ ಎಫೆಕ್ಟ್‌; ನೆಲಕಚ್ಚಿದ ಕುಕ್ಕುಟೋದ್ಯಮ, ಗಗನಕ್ಕೇರುತ್ತಿದೆ ಕುರಿ-ಮೇಕೆ ಮಾಂಸದ ಬೆಲೆ
ಪ್ರಾತಿನಿಧಿಕ ಚಿತ್ರ.
  • Share this:
ರಾಮನಗರ (ಮಾರ್ಚ್‌ 26); ಮಾರಣಾಂತಿಕ ಕೊರೋನಾ ವೈರಸ್‌ ರಾಜ್ಯದಲ್ಲಿ ಹಾವಳಿ ಮಾಡುತ್ತಿದೆ. ಅಲ್ಲದೆ, ಮತ್ತೊಂದೆಡೆ ಮೈಸೂರು ಮಂಡ್ಯ ಭಾಗದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸುತ್ತಿದೆ. ಪರಿಣಾಮ ಕೋಳಿ ಮಾಂಸವನ್ನು ಪುಕ್ಕಟೆಯಾಗಿ ಕೊಟ್ಟರೂ ಜನ ಖರೀದಿ ಮಾಡದ ಸ್ಥಿತಿ ಬಂದೊದಗಿದ್ದು ಕೊಕ್ಕುಟೋದ್ಯಮ ಸಂಪೂರ್ಣವಾಗಿ ನೆಲ ಕಚ್ಚಿದೆ. ಪರಿಣಾಮ ಕುರಿ ಮತ್ತು ಮೇಕೆ ಮಾಂಸ ಗಗನಕ್ಕೇರುತ್ತಿದೆ.

ಈ ಕುರಿತು ನ್ಯೂಸ್‌18 ಜೊತೆಗೆ ಮಾತನಾಡಿರುವ ಕರ್ನಾಟಕ ರಾಜ್ಯ ಕುಕ್ಕುಟ ಮಹಾ ಮಂಡಳಿ ಅಧ್ಯಕ್ಷ ಡಿ.ಕೆ.ಕಾಂತರಾಜು, "ಕೊರೋನಾ ವೈರಸ್‌ ಭೀತಿ ಹಿನ್ನೆಲೆ  ದೇಶಾದ್ಯಂತ ಕೋಳಿ ವ್ಯಾಪಾರ ವಹಿವಾಟು ಪಾತಾಳಕ್ಕೆ ಕುಸಿದಿದೆ. ರಾಜ್ಯದಲ್ಲಿ ವರ್ಷಕ್ಕೆ 20 ಸಾವಿರ ಕೋಟಿ ಕೋಳಿ ಉದ್ಯಮದಲ್ಲಿ ವಹಿವಾಟು ನಡೆಯುತ್ತಿತ್ತು. ಆದರೆ, ಈ ಬಾರಿ ಸಂಪೂರ್ಣ ಲಾಸ್ ಆಗಿದೆ.

ದಿನಕ್ಕೆ 14 ಲಕ್ಷ ಕೋಳಿ ಮರಿಗಳು ಉತ್ಪಾದನೆಯಾಗ್ತಿತ್ತು, ದಿನಕ್ಕೆ 1.5 ಕೋಟಿ ಮೊಟ್ಟೆ ಉತ್ಪಾದನೆಯಾಗ್ತಿತ್ತು. ಆದರೆ, ಇದೀಗ 3.80 ರೂಪಾಯಿ ಇದ್ದ ಮೊಟ್ಟೆ ಬೆಲೆ, 1.50 ರೂ ಗೆ ಇಳಿದಿದೆ. ಕೋಳಿಗಳ ಆಹಾರ ಜೋಳಾ, ಸೋಯಾ, ಫೀಡ್ಸ್ ಬೆಲೆ ಸಂಪೂರ್ಣ ನೆಲಕಚ್ಚಿದೆ. 21 ದಿನ ದೇಶವೇ ಲಾಕ್ ಡೌನ್ ಆಗಿರುವುದರಿಂದ ಮುಂದಿನ 1 ವರ್ಷ ಕೋಳಿ ಮರಿಗಳು ಸಿಗೋದು ಕಷ್ಟ.

ರಾಜ್ಯದಲ್ಲಿ ಒಟ್ಟು 15 ಸಾವಿರ ಜನ ರೈತರು ಕೋಳಿ ಉದ್ಯಮದಲ್ಲಿದ್ದಾರೆ. 5 ಲಕ್ಷ ಜನ ಕಾರ್ಮಿಕರು ಈ ಉದ್ಯಮದಲ್ಲಿ ತೊಡಗಿದ್ದಾರೆ. ಪ್ರತಿ ಯುಗಾದಿಗೆ ಕೋಳಿ ಮಾಂಸ ಪ್ರತಿ ಕೆಜಿಗೆ 120 ರೂ ಇರ್ತಿತ್ತು. ಆದರೆ, ಈಗ ಕೋಳಿಯನ್ನು ಪುಕ್ಕಟೆಯಾಗಿ ಕೊಟ್ಟರೂ ಖರೀದಿ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಕೋಳಿಗಳನ್ನ ಗುಂಡಿಗಳಲ್ಲಿ ಮುಚ್ಚಲಾಗುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಒಂದೆಡೆ ಕೋಳಿ ಮಾಂಸದ ಬೆಲೆ ಪಾತಾಳಕ್ಕೆ ಕುಸಿಯುತ್ತಿದ್ದಂತೆ ಕುರಿ ಮತ್ತು ಮೇಕೆ ಮಾಂಸದ ಬೆಲೆ ಗಗನಕ್ಕೇರುತ್ತಿದೆ. ಒಂದು ಕೆಜಿ ಮಟನ್ ಬೆಲೆ ಕಳೆದ ತಿಂಗಳು 500 ರಿಂದ 600 ರೂ ಆಸುಪಾಸಿನಲ್ಲಿತ್ತು. ಆದರೆ, ಪ್ರಸ್ತುತ 700 ರಿಂದ 800 ರೂ. ಗೆ ಮಾರಾಟ ಮಾಡಲಾಗುತ್ತಿದೆ.

(ವರದಿ - ಎ.ಟಿ. ವೆಂಕಟೇಶ್ ರಾಮನಗರ)

ಇದನ್ನೂ ಓದಿ : ಕೊರೋನಾ ಬೆನ್ನಿಗೆ ಮನೆ ಓನರ್‌ಗಳ ಕಿರಿಕ್; Home Isolation ನಲ್ಲಿರುವವರನ್ನು ಮನೆ ಖಾಲಿ ಮಾಡುವಂತೆ ತಾಕೀತು
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading