ಬೆಲ್ಜಿಯಂ ನಲ್ಲಿ ನಡೆಸಿದ ಪ್ರಯೋಗಗಳಿಂದ ಕೋವಿಡ್-19 ಸಾಂಕ್ರಾಮಿಕದ ರೋಗವನ್ನು ತಡೆಗಟ್ಟುವಲ್ಲಿ ಲಾಮಾ ಪ್ರತಿಕಾಯಗಳು (Llama antibodies) ಪರಿಣಾಮಕಾರಿಯಾಗಿದೆ ಎಂದು ಪ್ರಯೋಗಗಳಿಂದ ಸಾಬೀತಾಗಿದೆ. ಸಾಂಕ್ರಾಮಿಕ ಹೋರಾಟದಲ್ಲಿ (CoronaVirus) ಲಾಮಾ ಪ್ರತಿಕಾಯಗಳು ಶೀಘ್ರದಲ್ಲಿಯೇ ಪ್ರಮುಖ ಪಾತ್ರವಹಿಸಲಿವೆ ಎಂಬುದಾಗಿ ಪ್ರಯೋಗಗಳು ತಿಳಿಸಿವೆ. ಲಾಮಾಗಳು ಮುದ್ದಾಗಿರುವ ಪ್ರಾಣಿಗಳಾಗಿದ್ದು ಸೌಮ್ಯ ಸ್ವಭಾವಕ್ಕೆ ಹೆಸರುವಾಸಿಯಾಗಿವೆ. ಪ್ರಾಣಿಗಳ ಶಾಂತ ನಡವಳಿಕೆಯು ಒಮ್ಮೊಮ್ಮೆ ಬೇಸರಕ್ಕೂ ವ್ಯಕ್ತವಾಗುತ್ತದೆ. ಇವುಗಳಿಗೆ ಕೋಪ ಬರುವುದು ಕಡಿಮೆ ಹಾಗೂ ಆಕ್ರಮಣವನ್ನು ನಡೆಸುವುದು ತುಂಬಾ ವಿರಳವಾಗಿದೆ. ಆಡುಗಳು ಮತ್ತು ಕುರಿಗಳನ್ನು ಸಂರಕ್ಷಿಸಲು ಪರಭಕ್ಷಕಗಳನ್ನು ದೂರವಿಡುವ ಸಾಮರ್ಥ್ಯ ಕೂಡ ಈ ಪ್ರಾಣಿಗಿದೆ. ಈ ಪ್ರಾಣಿಯ ತುಪ್ಪಳವು ಕೋಟುಗಳಿಗೆ ಹೆಸರುವಾಸಿಯಾಗಿದೆ. ಇದು ತಣ್ಣಿನ ಪ್ರದೇಶದಲ್ಲಿ ಬೆಚ್ಚಗಿರಿಸುತ್ತದೆ ಮತ್ತು ಇವುಗಳನ್ನು ಕೆಲವೆಡೆಗಳಲ್ಲಿ ಸಾರಿಗೆಗಾಗಿಯೂ ಬಳಸಲಾಗುತ್ತದೆ.
ಇಷ್ಟೆಲ್ಲಾ ಪರೋಪಕಾರಿ ಜೀವಿಗಳಾಗಿರುವ ಲಾಮಾಗಳು ಇದೀಗ ಸಂಕ್ರಾಮಿಕದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಪಡೆದುಕೊಂಡಿವೆ ಎಂಬುದಾಗಿ ಬೆಲ್ಜಿಯಂ ನಲ್ಲಿ ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ. ಲಾಮಾ ಪ್ರತಿಕಾಯಗಳು ಕೋವಿಡ್-19 ರೂಪಾಂತರಗಳನ್ನು ಸೋಂಕನ್ನು ತಡೆಯಬಲ್ಲವು ಎಂಬುದು ಈ ಪ್ರಯೋಗಗಳಿಂದ ತಿಳಿದು ಬಂದಿರುವ ಮಾಹಿತಿಯಾಗಿದೆ.
ಲಾಮಾ ಪ್ರತಿಕಾಯಗಳು ಕೋವಿಡ್-19 ಅನ್ನು ನಿಷ್ಕ್ರಿಯಗೊಳಿಸುವ ಜಾಗತಿಕ ಹೋರಾಟದಲ್ಲಿ ಶೀಘ್ರದಲ್ಲೇ ಪ್ರಮುಖ ಪಾತ್ರವಹಿಸಲಿವೆ ಎಂಬ ಅಂಶ ಕೂಡ ನಿಚ್ಚಳವಾಗಿ ಕಂಡುಬಂದಿದೆ. ಘೆಂಟ್ನಲ್ಲಿರುವ VIB-UGent ಸೆಂಟರ್ನ ಮೆಡಿಕಲ್ ಬಯೋಟೆಕ್ನಾಲಜಿಯ ಸಂಶೋಧಕರು ಈ ಅಧ್ಯಯನವನ್ನು ಕೈಗೊಂಡಿದ್ದಾರೆ. ವಿಂಟರ್ ಹೆಸರಿನ ಲಾಮಾದಿಂದ ಹೊರತೆಗೆಯಲಾದ ಪ್ರತಿಕಾಯಗಳು COVID-19 ವೈರಸ್ ಮತ್ತು ಅದರ ರೂಪಾಂತರಗಳನ್ನು ತಟಸ್ಥಗೊಳಿಸಲು ಸಮರ್ಥವಾಗಿವೆ ಎಂದು ತಂಡವು ಕಂಡುಹಿಡಿದಿದೆ.
ವೈದ್ಯಕೀಯ ಅಧಿಕಾರಿ ಡೊಮಿನಿಕ್ ಟೆರ್ಸಾಗೊ ಪ್ರಕಾರ ಈ ತಂತ್ರಜ್ಞಾನ ಅನ್ವೇಷಣೆಯ ದಿಕ್ಕನ್ನೇ ಬದಲಾಯಿಸಲಿದ್ದು ದುರ್ಬಲ ರೋಗನಿರೋಧಕ ಶಕ್ತಿಯಿರುವ ಜನರಿಗೆ ವರದಾನವಾಗಲಿದೆ. ಲಾಮಾ ಪ್ರತಿಕಾಯಗಳು ಅಸಾಧಾರಣವಾಗಿ ಚಿಕ್ಕದಾಗಿರುತ್ತವೆ, ಆದರೆ ವೈರಸ್ನ ಸ್ಪೈಕ್ ಪ್ರೋಟೀನ್ನ ನಿರ್ದಿಷ್ಟ ಭಾಗವನ್ನು ನಿರ್ಬಂಧಿಸಲು ಮತ್ತು ಕೋಶಗಳಿಗೆ ಸೋಂಕು ತಗಲದಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ಪ್ರಯೋಗಾಲ ಯದ ಪರೀಕ್ಷೆಯು ಕಂಡುಹಿಡಿದಿದೆ.
ಲಾಮಾ ಪ್ರತಿಕಾಯಗಳು ಕೋವಿಡ್ ರೂಪಾಂತರದ ವಿರುದ್ಧ ಬಲವಾದ ತಟಸ್ಥೀಕರಣವನ್ನು ಪ್ರದರ್ಶಿಸಿವೆ ಎಂದು ಟೆರ್ಸಾಗೊ ತಿಳಿಸಿದ್ದಾರೆ. ಪ್ರಯೋಗಕ್ಕೆ ಒಳಗಾದ ಸ್ವಯಂಸೇವಕರು ಹಾಗೂ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳ ಮೇಲೆ ಪ್ರತಿಕಾಯಗಳನ್ನು ಅಧ್ಯಯನಗಳನ್ನು ನಡೆಸಲು ತಂಡವು ಈಗಾಗಲೇ ಕ್ಲಿನಿಕಲ್ ಪ್ರಯೋಗಗಳನ್ನು ಆರಂಭಿಸಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಚಳಿಗಾಲದಲ್ಲಿ ಪ್ರತಿಕಾಯಗಳ ಆವೃತ್ತಿಗಳ ಉತ್ಪಾದನೆ ನಡೆಯುತ್ತದೆ ಎಂಬುದು ವರದಿಯಾಗಿದ್ದು ಇವುಗಳು ಚಿಕ್ಕದಾಗಿದ್ದರೂ ಹೆಚ್ಚು ಸ್ಥಿರವಾಗಿವೆ ಹಾಗೂ ಇತರ ಸಸ್ತನಿಗಳಿಗೆ ಹೋಲಿಸಿದಾಗ ಬಹುಮುಖವಾಗಿವೆ ಎಂಬ ಅಂಶ ತಿಳಿದು ಬಂದಿದೆ ಎಂದು ಪ್ರಯೋಗದ ಪ್ರಮುಖ ನಾಯಕ ಕ್ಸೇವಿಯರ್ ಸೇಲೆನ್ಸ್ ತಿಳಿಸಿದ್ದಾರೆ.
ಪ್ರತಿಕಾಯಗಳು ಸಣ್ಣದಾಗಿರುವುದರಿಂದ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸರಿಯಾದ ಗುರಿಯನ್ನು ತಲುಪಲಿವೆ ಹಾಗೂ ರೂಪಾಂತರದ ವಿರುದ್ಧ ತಡೆಯನ್ನೊಡ್ಡಲಿವೆ. ಈ ಪ್ರತಿಕಾಯಗಳು ಎಷ್ಟು ಸಮರ್ಥವಾಗಿವೆ ಎಂದರೆ ಕೋವಿಡ್ ರೂಪಾಂತರಗಳಿಗೆ ಪ್ರವೇಶಿಸಲು ಅಸಮರ್ಥವಾಗಿವೆ ಎಂದು ಕ್ಸೇವಿಯರ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ