ಪೊಲೀಸ್ ಕಾನ್ಸ್​​ಟೇಬಲ್​​ಗೆ ಪಾಸಿಟಿವ್ ; ನಾಲ್ಕು ತಿಂಗಳ ಮಗು ಸೇರಿ ನಾಲ್ವರು ಡಿಸ್ಚಾರ್ಜ್

ಜಿಲ್ಲೆಯಲ್ಲಿ ನಾಲ್ಕು ತಿಂಗಳ ಮಗು ಸೇರಿದಂತೆ ನಾಲ್ವರು ಸೋಂಕಿತರು ಗುಣಮಖ ಹೊಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಲಬುರ್ಗಿ(ಮೇ. 06): ಕಲಬುರ್ಗಿ ಜಿಲ್ಲೆಯಲ್ಲಿ ಇಂದು ಮತ್ತೊಂದು ಪಾಸಿಟಿವ್ ಪ್ರಕರಣ ಬಂದಿದ್ದು, ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಲಬುರ್ಗಿಯ ಗಾಜಿಪುರದ 52 ವರ್ಷದ ವ್ಯಕ್ತಿಗೆ ಸೋಂಕಿರೋದು ದೃಢಪಟ್ಟಿದೆ. 52 ವರ್ಷದ ವ್ಯಕ್ತಿ ಕೆಎಸ್ಆರ್​ಪಿ ಪೊಲೀಸ್ ಕಾನ್ಸ್​​ಟೇಬಲ್​​ . ಕೊರೋನಾ ಸೋಂಕಿಗೆ ಗುರಿಯಾಗಿದ್ದ ಪೇಷಂಟ್ 610 ರ ಮನೆಯಲ್ಲಿ ಈತ ಬಾಡಿಗೆಗಿದ್ದ ಮನೆ ಮಾಲೀಕನ ಸಂಪರ್ಕದಿಂದ ಸೋಂಕು ಹರಡಿದೆ.

  ಪೊಲೀಸ್ ಕಾನ್ಸ್​​ಟೇಬಲ್ ಕುಟುಂಬದ ಸದಸ್ಯರಿಗೆ ಟೆಸ್ಟ್ ಮಾಡಲಾಗಿದ್ದು, ಅವರಿಗೆ ನೆಗೆಟಿವ್ ಬಂದಿದೆ. ಕುಟುಂಬದ ಸದಸ್ಯರನ್ನು ಮತ್ತು ಪೊಲೀಸ್ ಪೇದೆ ಜೊತೆಗಿರುತ್ತಿದ್ದ ಮತ್ತೋರ್ವ ಕಾನ್ಸ್​​ಟೇಬಲ್ ಕ್ವಾರಂಟೈನ್ ಮಾಡಲಾಗಿದೆ. ಪೊಲೀಸ್ ಕಾನ್ಸ್​​ಟೇಬಲ್ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ಸೋಂಕಿತನಿಗೆ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ಜಿಲ್ಲೆಯಲ್ಲಿ ನಾಲ್ಕು ತಿಂಗಳ ಮಗು ಸೇರಿದಂತೆ ನಾಲ್ವರು ಸೋಂಕಿತರು ಗುಣಮಖ ಹೊಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

  ನಾಲ್ಕು ತಿಂಗಳ ಮಗು, ಆತನ ತಾಯಿ 26 ವರ್ಷದ ಮಹಿಳೆ, 50 ವರ್ಷದ ಪುರುಷ ಹಾಗೂ 19 ವರ್ಷದ ಯುವಕ ಡಿಸ್ಚಾರ್ಜ್ ಆಗಿದ್ದಾರೆ. ನಾಲ್ಕು ತಿಂಗಳ ಮಗು ಹಾಗೂ ಮಗುವಿನ ತಾಯಿಗೆ ಪೇಷಂಟ್ 395 ಸಂಪರ್ಕದಿಂದ ಸೋಂಕು ತಗುಲಿತ್ತು. ಇಬ್ಬರು ಖಮರ್ ಕಾಲೋನಿ ನಿವಾಸಿಗಳಾಗಿದ್ದಾರೆ. ಪೇಷಂಟ್ 395 ಗೆ ಈ ಹಿಂದೆ ಮೃತಪಟ್ಟ ಪೇಷಂಟ್ 205 ನಿಂದ ಸೋಂಕು ತಗುಲಿತ್ತು. ತಾಯಿ ಮತ್ತು ಮಗ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಮತ್ತೊಂದೆಡೆ 50 ವರ್ಷದ ವ್ಯಕ್ತಿಗೆ ಪೇಷಂಟ್ 177 ರಿಂದ ಸೋಂಕು ಹರಡಿದ್ದರೆ 19 ವರ್ಷದ ಯುವಕನಿಗೆ ಪೇಷಂಟ್ 205 ರಿಂದ ಸೋಂಕು ಹರಡಿತ್ತು.

  ಇದನ್ನೂ ಓದಿ : ಗೋವಾ ರಾಜ್ಯದಲ್ಲಿ ಸಿಲುಕಿಕೊಂಡ ರಾಜ್ಯದ ಕಾರ್ಮಿಕರಿಗೆ ತವರು ಸೇರುವ ಭಾಗ್ಯ ; 42 ದಿನಗಳ ಬಳಿಕ ತಮ್ಮ ಊರಿಗೆ ತೆರಳಲು ಅವಕಾಶ

  50 ವರ್ಷದ ವ್ಯಕ್ತಿ ಸಂತ್ರಸವಾಡಿ ನಿವಾಸಿಯಾಗಿದ್ದು, 19 ವರ್ಷದ ಯುವಕ ಮೋಮಿನಪುರ ನಿವಾಸಿಯಾಗಿದ್ದಾನೆ. ಪೇಷಂಟ್ 177 ಹಾಗೂ ಪೇಷಂಟ್ 205 ಇಬ್ಬರೂ ಮೃತಪಟ್ಟಿದ್ದಾರೆ. ಪೇಷಂಟ್ 205 ಒಂದರಿಂದಲೇ ಇದುವರೆಗೆ 24 ಜನರಿಗೆ ಸೋಂಕು ವ್ಯಾಪಿಸಿದೆ. ಸೋಂಕಿತರ ಪೈಕಿ ಕೆಲವರು ಗುಣಮುಖರಾಗಿದ್ದಾರೆ. ಇಂದು ಜಿಲ್ಲೆಯಲ್ಲಿ ನಾಲ್ವರು ಗುಣಮುಖ ಹೊಂದಿದ್ದು, ಗುಣಮುಖರಾದವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
  First published: