HOME » NEWS » Coronavirus-latest-news » POSITIVE TEST REPORT NOT A MUST FOR HOSPITAL ADMISSION OF COVID 19 PATIENTS

ಕೊವೀಡ್ ಚಿಕಿತ್ಸೆ ಪಡೆಯಲು ಪಾಸಿಟಿವ್ ವರದಿ ಕಡ್ಡಾಯವಲ್ಲ; ಕೇಂದ್ರ ಸಚಿವಾಲಯ

ವರದಿ ನೆಗೆಟಿವ್​ ಇರುವ ಹಿನ್ನಲೆ ಅನೇಕ ಸೋಂಕಿತರು ವೈದ್ಯಕೀಯ ತುರ್ತು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಇದೇ ಕಾರಣಕ್ಕೆ ಕೇಂದ್ರ ಆರೋಗ್ಯ ಇಲಾಖೆ ಹೊಸ ಆದೇಶ ನೀಡಿದೆ.

news18-kannada
Updated:May 8, 2021, 5:04 PM IST
ಕೊವೀಡ್ ಚಿಕಿತ್ಸೆ ಪಡೆಯಲು ಪಾಸಿಟಿವ್ ವರದಿ ಕಡ್ಡಾಯವಲ್ಲ; ಕೇಂದ್ರ ಸಚಿವಾಲಯ
ಸಾಂದರ್ಭಿಕ ಚಿತ್ರ
  • Share this:
ಕೊರೋನಾ ಎರಡನೇ ಅಲೆಯಲ್ಲಿ ಬಹುತೇಕ ಮಂದಿಗೆ ಕೋವಿಡ್​ ಪರೀಕ್ಷಾ ವರದಿಯಲ್ಲಿ ಸೋಂಕು ದೃಢವಾಗುತ್ತಿಲ್ಲ. ಈ ಮಾತ್ರಕ್ಕೆ ಅವರಲ್ಲಿ ಸೋಂಕು ಇಲ್ಲ ಎಂದಲ್ಲ. ತೀವ್ರ ಸ್ವರೂಪದ ಸೋಂಕು ಕೆಲವೊಮ್ಮೆ ಆರ್​ಟಿಪಿಸಿಆರ್​ ಪರೀಕ್ಷೆಯಲ್ಲಿ ನೆಗೆಟಿವ್​ ಬರುತ್ತಿದ್ದು, ಈ ಹಿನ್ನಲೆ ಆಸ್ಪತ್ರೆಗಳು ರೋಗಿಗಳನ್ನು ದಾಖಲು ಮಾಡಿಕೊಳ್ಳುತ್ತಿಲ್ಲ. ವರದಿ ನೆಗೆಟಿವ್​ ಇರುವ ಹಿನ್ನಲೆ ಅನೇಕ ಸೋಂಕಿತರು ವೈದ್ಯಕೀಯ ತುರ್ತು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಇದೇ ಕಾರಣಕ್ಕೆ ಕೇಂದ್ರ ಆರೋಗ್ಯ ಇಲಾಖೆ ಹೊಸ ಆದೇಶ ನೀಡಿದೆ. ಈ ಆದೇಶದ ಅನ್ವಯ ಆಸ್ಪತ್ರೆಗೆ ದಾಖಲಾಗಲು ಕೋವಿಡ್​ ಪಾಸಿಟಿವ್​ ವರದಿ ಕಡ್ಡಾಯವಲ್ಲ ಎಂದು ತಿಳಿಸಿದೆ. ರಾಷ್ಟ್ರೀಯ ನೀತಿಯನ್ನು ಪರಿಷ್ಕರಿಸಿರುವ ಕೇಂದ್ರ ಆರೋಗ್ಯ ಈ ಕುರಿತು ತಿಳಿಸಿದೆ.

ಆಸ್ಪತ್ರೆಗೆ ದಾಖಲಾಗಲು ಈ ಹಿಂದೆ ಜಾರಿಗೆ ತಂದಿದ್ದ ಕೋವಿಡ್​ 19 ಪಾಸಿಟಿವ್​ ವರದಿಯನ್ನು ಹಾಜರು ಪಡಿಸಬೇಕು ಎಂಬ ನಿಯಮವನ್ನು ಸರ್ಕಾರ ಹಿಂಪಡೆದಿದೆ. ಪರಿಷ್ಕೃತ ನಿಯಮದ ಪ್ರಕಾರ ಯಾವುದೇ ರೋಗಿಗೂ ಆರೋಗ್ಯ ಸೇವೆಯನ್ನು ನಿರಾಕರಿಸುವಂತಿಲ್ಲ ಎಂದು ಆರೋಗ್ಯ ಇಲಾಖಳೆ ತಿಳಿಸಿದೆ.

ಒಂದು ವೇಳೆ ರೋಗಿಯೂ ಬೇರೆ ನಗರದವರಾಗಿದ್ದರೂ ಆಕ್ಸಿಜನ್​ ಅಥವಾ ಔಷಧಿ ಕೊಡಲು ಆಸ್ಪತ್ರೆಗಳು ನಿರಾಕರಿಸುವಂತಿಲ್ಲ. ಕೋವಿಡ್​ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಗೆ ಶೀಘ್ರವಾಗಿ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಬೇಕು ಎಂದು ಸೂಚಿಸಿದೆ. ಈ ಹೊಸ ಮಾರ್ಗಸೂಚಿಗಳು ಕೇಂದ್ರ ಹಾಗೂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಅಡಿಯಲ್ಲಿ ಬರುವ ಎಲ್ಲಾ ಆಸ್ಪತ್ರೆಗಳಿಗೂ ಅನ್ವಯವಾಗಲಿದೆ. ಇದರ ಜೊತೆಗೆ ಖಾಸಗಿ ಆಸ್ಪತ್ರೆಗಳಿಗೂ ಇದು ಅನ್ವಯಿಸಲಿದೆ.

ಇದನ್ನು ಓದಿ: ಕೋವಿಡ್​ ಕಳವಳ; ಸೋಂಕಿನ​ ಪರಿಸ್ಥಿತಿ ಕುರಿತು ನಾಲ್ಕು ರಾಜ್ಯಗಳ ಸಿಎಂಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ

ಮಾರ್ಗಸೂಚಿಗಳು

ಆಸ್ಪತ್ರೆ ದಾಖಲಾತಿಗೆ ಕೋವಿಡ್​ ಪರೀಕ್ಷೆಯ ಪಾಸಿಟಿವ್​ ವರದಿ ಕಡ್ಡಾಯವಲ್ಲ. ಸೋಂಕಿನ ಕುರಿತು ಶಂಕಿತ ಪ್ರಕರಣಗಳನ್ನು ಕೋವಿಡ್​ ಕೇರ್​ ಸೆಂಟರ್​ಗಳಿಗೆ ದಾಖಲು ಮಾಡಬಹದು.
ಯಾವುದೇ ಕಾರಣಕ್ಕೂ ಯಾವುದೇ ರೋಗಿಗಳಿಗೂ ಚಿಕಿತ್ಸೆ ನೀಡಲು ನಿರಾಕರಿಸುವಂತಿಲ್ಲ.

  • ರೋಗಿಯೂ ಬೇರೆ ನಗರದವರಾಗಿದ್ದರೂ ಸಹ ಅವರಿಗೆ ಆಕ್ಸಿನ್​ ಅಥವಾ ಔಷಧೋಪಚಾರದ ಅಗತ್ಯವಿದ್ದರೆ ಅದನ್ನು ನೀಡಬೇಕು

  • ಆಸ್ಪತ್ರೆ ಇರುವ ನಗರದ ಗುರುತಿನ ಚೀಟಿಯನ್ನು ತೋರಿಸಲು ವಿಫಲರಾದರೂ ಎಂಬ ಕಾರಣಕ್ಕೂ ರೋಗಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ.

  • ರೋಗಿಯ ಅಗತ್ಯಕ್ಕೆ ಅನುಗುಣವಾಗಿ ಆಸ್ಪತ್ರೆಗೆ ದಾಖಲಿಸಬೇಕು. ಈ ವೇಳೆ ಅವರಿಗೆ ಬೆಡ್​ ಇಲ್ಲ ಎಂಬ ನಿರಾಕರಿಸುವಂತಿಲ್ಲ.

  • ಈ ಆದೇಶದ ಅನ್ವಯ ಆರೋಗ್ಯ ಸಚಿವರು ಕೇಂದ್ರಾಡಳಿ ಪ್ರದೇಶ ಮತ್ತು ರಾಜ್ಯ ಸರ್ಕಾರದ ಕಾರ್ಯದರ್ಶಿಗಳಿಗೆ ಸುತ್ತೋಲೆ ಹೊರಡಿಸುವಂತೆ ಸೂಚನೆ ನೀಡಬೇಕು ಎಂದು ಸೂಚಿಸಲಾಗಿದೆ

Published by: Seema R
First published: May 8, 2021, 5:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories