HOME » NEWS » Coronavirus-latest-news » POOR WOMEN IN UDUPI HELPED TO POOR AND STREET DWELLERS FROM HER SAVINGS GNR

ಕೊರೋನಾ ಸಂಕಷ್ಟ: ಮೀನು ಮಾರಿ ಕೂಡಿಟ್ಟ ಹಣದಿಂದ ನಿರ್ಗತಿಕರ ಹಸಿವು ನೀಗಿಸಿದ ಬಡ ಮಹಿಳೆ

ಸ್ವಂತ ಮನೆ ಇಲ್ಲದಿದ್ದರೂ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಶಾರದಾ ಅವರ ಔದಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಈ ಔದಾರ್ಯ‌‌‌ ಸೇವೆ ಜಿಲ್ಲಾಧಿಕಾರಿ ಜಗದೀಶ್ ಗಮನಕ್ಕೆ‌ ಬಂದಿದ್ದೇ‌ ತಡ ಡಿಸಿ ಅವರು ಸ್ವತಃ ‌ಶಾರದಾ ಅವರ ಗುಡಿಸಲಿಗೆ‌ ಭೇಟಿ ಕೊಟ್ಟು ಮನೆ ನಿರ್ಮಿಸುವ ಭರವಸೆ ನೀಡಿದ್ದಾರೆ.‌

news18-kannada
Updated:April 25, 2020, 8:22 PM IST
ಕೊರೋನಾ ಸಂಕಷ್ಟ: ಮೀನು ಮಾರಿ ಕೂಡಿಟ್ಟ ಹಣದಿಂದ ನಿರ್ಗತಿಕರ ಹಸಿವು ನೀಗಿಸಿದ ಬಡ ಮಹಿಳೆ
ಕೊರೋನಾ ಸಂಕಷ್ಟ: ಮೀನು ಮಾರಿ ಕೂಡಿಟ್ಟ ಹಣದಿಂದ ನಿರ್ಗತಿಕರ ಹಸಿವು ನೀಗಿಸಿದ ಬಡ ಮಹಿಳೆ
  • Share this:
ಉಡುಪಿ(ಏ.25): ಒಂದು‌ ಸರಿಯಾದ ಸೂರಿರದಿದ್ದರೂ ಮತ್ತೊಬ್ಬರ ಹಸಿವನ್ನ ನೀಗಿಸುವ ಮಹಿಳೆಯೊಬ್ಬರು ಉಡುಪಿಯಲ್ಲಿದ್ದಾರೆ. ಇವರ ಹೆಸರು ಶಾರದ. ಎಲ್ಲರೂ ಪ್ರೀತಿಯಿಂದ ಇವರನ್ನ ಶಾರದಕ್ಕ ಅಂತಲೇ ಕರಿತಾರೆ. ಮೀನು ಮಾರಿ ಕಡುಕಷ್ಟದ‌‌ ಜೀವನ ಸಾಗಿಸುವ ಶಾರದಕ್ಕ, ಅದೆಷ್ಟೋ ವರ್ಷ ಮೀನು ಮಾರಿ ಬಂದ ಸುಮಾರು 30 ಸಾವಿರ ಹಣವನ್ನ ಕೂಡಿಟಿದ್ದರು. ಇದರಿಂದ ಒಂದು ಒಳ್ಳೆಯ ಸೂರನ್ನ ಕಟ್ಟಿಕೊಂಡಿದ್ದರು.

ಹೀಗಿರುವಾಗಲೇ ದೇಶಾದ್ಯಂತ ಅದ್ಯಾವಾಗ ಕೊರೋನಾ ವೈರಸ್ ಅಟ್ಟಹಾಸ‌ ಮರೆಯಿತೋ ಲಾಕ್‌ಡೌನ್​​ನಿಂದ‌ ಜನಜೀವನ ಅಸ್ಥವ್ಯಸ್ಥವಾಗೋಯ್ತು. ಅದರಲ್ಲೂ ಮೀನುಗಾರಿಕೆ ನಡೆಸೋ ಮೀನುಗಾರರ ಕುಟುಂಬಗಳು ಒಂದೊತ್ತಿನ ಊಟಕ್ಕೂ ಕಷ್ಟದ‌ ದಿನಗಳು‌ ಎದುರಿಸುವಂತಾಯಿತು.‌‌ ಈ‌ವೇಳೆ‌ ಹಸಿದವರಿಗೆ ಮಿಡಿದ ಶಾರದ ಅವರ‌ ಮನಸ್ಸು, ಮತ್ತೊಬ್ಬರ ಹಸಿವನ್ನು ನೀಗಿಸುವ ನಿರ್ಧಾರಕ್ಕೆ ಬಂದರು.

ಹೌದು, ಆಕೆ ಉಳಿತಾಯ ಮಾಡಿದ ಹಣದಿಂದ 140 ಮನೆಗೆ ಅಕ್ಕಿ ನೀಡಿ ಮಾನವೀಯತೆ ಮೆರೆದರು.‌ ಮಲ್ಪೆ ಬಂದರಿನೊಳಗೆ ಮೀನು ಮಾರಾಟ ಮಾಡುವ ಓರ್ವ ಸಾಮಾನ್ಯ ಮಹಿಳೆ‌ ಶಾರದಕ್ಕ ತನ್ನ‌ ಕುಟುಂಬ ನೆಟ್ಟಗೆ ಕಾಲುಚಾಚಿ ಮಲಗಲೂ ಸಾಧ್ಯವಿಲ್ಲದಷ್ಟು ಸಣ್ಣ ಗುಡಿಸಲಿನಲ್ಲಿ ವಾಸವಿದ್ದರೂ ಮತ್ತೊಬ್ಬರ ಹಸಿವನ್ನ ನೀಗಿಸಿದರು.

ದಿನಕ್ಕೆ 500 ರೂಪಾಯಿ ದುಡಿಯುವ ಇವರಿಗೆ ತಿಂಗಳ ಖರ್ಚು ಕಳೆದು ಐದಾರು ಸಾವಿರ ಉಳಿತಾಯ ಮಾಡಲು ಸಿಕ್ಕಿದರೆ ಅದೇ ದೊಡ್ಡ ಮೊತ್ತ. ಕರೋನಾ ಎಮರ್ಜೆನ್ಸಿಯಿಂದ ತನ್ನ ಅಕ್ಕಪಕ್ಕದ ಮನೆಯವರು ಕೆಲಸವಿಲ್ಲದೇ ಖರ್ಚಿಗೆ ದುಡ್ಡಿಲ್ಲದೇ ಅಕ್ಕಿಗಾಗಿ ಪರದಾಡುತ್ತಿದ್ದ ಸುದ್ದಿ ಕೇಳಿದ ಶಾರದಕ್ಕ ಮಾತೃ ಹೃದಯ ಕರಗಿದೆ. ಕೂಡಲೇ ತನ್ನ ಬಳಿ ಉಳಿಸಿಕೊಂಡಿದ್ದ ಮೂವತ್ತು ಸಾವಿರ ಹಣದಲ್ಲಿ 700 ಕೆಜಿ ಅಕ್ಕಿ ತಂದು ಮಲ್ಪೆ ನೆರ್ಗಿ ಪ್ರದೇಶದ ಅಂಬೇಡ್ಕರ್ ಕಾಲನಿಯ ನಿವಾಸಿಗಳಿಗೆ ತಲಾ 5 ಕೆಜಿ ಯಂತೆ ಹಂಚಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಪತ್ರಕರ್ತರ ಬೆನ್ನಲ್ಲೀಗ ಪೊಲೀಸರಿಗೂ ತಟ್ಟಿದ ಕೊರೋನಾ ಬಿಸಿ: 96 ಮಂದಿಗೆ ಸೋಂಕು

ನನ್ನ ಬಳಿ ಇದ್ದ ದುಡ್ಡೆಲ್ಲಾ ಖರ್ಚಾಯ್ತು ಇಲ್ಲಾಂದ್ರೆ ಇನ್ನಷ್ಟು ಮನೆಗಳಿಗೆ ಅಕ್ಕಿ ಕೊಡುತ್ತಿದ್ದೆ ಎಂದು ಶಾರದಕ್ಕ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಶಾರದಕ್ಕ ಅವರ ಬಳಿ ಅಕ್ಕಿ ಹಂಚುವಾಗ ಫೋಟೋ ತೆಗೆಯಲಿಲ್ಲವೇ ಎಂದು ಕೇಳಿದಾಗ ನಾನು ಬಡವರ ಹಸಿವೆಗೆ ಅಕ್ಕಿ ಹಂಚಿರೋದು ಫೋಟೋ ತೆಗಿಸಿಕೊಳ್ಳೋದಿಕ್ಕೆ ಅಲ್ಲ ಎಂದು ಮುಗ್ದವಾಗಿ ಉತ್ತರಿಸಿದ್ದಾರೆ.

ಸ್ವಂತ ಮನೆ ಇಲ್ಲದಿದ್ದರೂ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಶಾರದಾ ಅವರ ಔದಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಈ ಔದಾರ್ಯ‌‌‌ ಸೇವೆ ಜಿಲ್ಲಾಧಿಕಾರಿ ಜಗದೀಶ್ ಗಮನಕ್ಕೆ‌ ಬಂದಿದ್ದೇ‌ ತಡ ಡಿಸಿ ಅವರು ಸ್ವತಃ ‌ಶಾರದಾ ಅವರ ಗುಡಿಸಲಿಗೆ‌ ಭೇಟಿ ಕೊಟ್ಟು ಮನೆ ನಿರ್ಮಿಸುವ ಭರವಸೆ ನೀಡಿದ್ದಾರೆ.‌
Youtube Video
First published: April 25, 2020, 8:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories