Darshan Fans Social Work: ದರ್ಶನ್​ ಅಭಿಮಾನಿಗಳ ಕೆಲಸ ಮೆಚ್ಚಿಕೊಂಡ ರಾಜಕೀಯ ನಾಯಕರು

ಲಾಕ್​ಡೌನ್​ ಆರಂಭವಾದಾಗಿನಿಂದ ಡಿಬಾಸ್​ ಅಭಿಮಾನಿಗಳು ಮೈಸೂರಿನಲ್ಲಿ ನಿರಾಶ್ರಿತರಿಗೆ ದಿನಕ್ಕೆ ಎರಡು ಸಲ ಅನ್ನದಾನ ಮಾಡುತ್ತಿದ್ದಾರೆ. ಇದನ್ನು ಮೊದಲ ಕೆಲವೇ ದಿನಗಳಿಗೆ ಎಂದು ಅಂದುಕೊಂಡಿದ್ದ ದರ್ಶನ್​ ಅಭಿಮಾನಿಗಳು ಅದನ್ನು ಲಾಕ್​ಡೌನ್​ ಕೊನೆಗೊಳ್ಳುವವರೆಗೂ ವಿಸ್ತರಿಸಿದ್ದಾರೆ. ಮೈಸೂರಿನಲ್ಲಿ ಡಿಬಾಸ್​ ಅಭಿಮಾನಿಗಳು ಅನ್ನದಾನ ಮಾಡುತ್ತಿರುವ ಪರಿಹಾರ ಕೇಂದ್ರಕ್ಕೆ ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹಾಗೂ ಸಂಸದ ಪ್ರತಾಪ್​ ಸಿಂಹ ಅವರು ಭೇಟಿ ನೀಡಿದ್ದರು.

ದರ್ಶನ್​ ಅಭಿಮಾನಿಗಳು ಅನ್ನದಾನ ಮಾಡುತ್ತಿರುವ ಮೈಸೂರಿನ ಪರಿಹಾರ ಕೇಂದ್ರ

ದರ್ಶನ್​ ಅಭಿಮಾನಿಗಳು ಅನ್ನದಾನ ಮಾಡುತ್ತಿರುವ ಮೈಸೂರಿನ ಪರಿಹಾರ ಕೇಂದ್ರ

  • Share this:
ಕೊರೋನಾ ಭೀತಿಯಿಂದಾಗಿ ಇಡೀ ದೇಶವನ್ನೇ ಲಾಕ್​ಡೌನ್​ ಮಾಡಲಾಗಿದೆ. ಇದರಿಂದಾಗಿ ಹೆಚ್ಚಾಗಿ ಸಂಕಷ್ಟದಲ್ಲಿರುವುದು ದಿನಗೂಲಿ ಕಾರ್ಮಿಕರು ಹಾಗೂ ನಿರಾಶ್ರಿತರು. ಇಂತಹವರ ನೆರವಿಗೆ ಹಲವಾರು ಸೆಲೆಬ್ರಿಟಿಗಳು ಬಂದಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಸ್ಟಾರ್​ ನಟರ ಅಭಿಮಾನಿಗಳು ಇದರಿಂದ ಹೊರತಾಗಿಲ್ಲ.

ಲಾಕ್​ಡೌನ್​ ಆರಂಭವಾದಾಗಿನಿಂದ ಡಿಬಾಸ್​ ಅಭಿಮಾನಿಗಳು ಮೈಸೂರಿನಲ್ಲಿ ನಿರಾಶ್ರಿತರಿಗೆ ದಿನಕ್ಕೆ ಎರಡು ಸಲ ಅನ್ನದಾನ ಮಾಡುತ್ತಿದ್ದಾರೆ. ಇದನ್ನು ಮೊದಲ ಕೆಲವೇ ದಿನಗಳಿಗೆ ಎಂದು ಅಂದುಕೊಂಡಿದ್ದ ದರ್ಶನ್​ ಅಭಿಮಾನಿಗಳು ಅದನ್ನು ಲಾಕ್​ಡೌನ್​ ಕೊನೆಗೊಳ್ಳುವವರೆಗೂ ವಿಸ್ತರಿಸಿದ್ದಾರೆ. ಮೈಸೂರಿನಲ್ಲಿ ಡಿಬಾಸ್​ ಅಭಿಮಾನಿಗಳು ಅನ್ನದಾನ ಮಾಡುತ್ತಿರುವ ಪರಿಹಾರ ಕೇಂದ್ರಕ್ಕೆ ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹಾಗೂ ಸಂಸದ ಪ್ರತಾಪ್​ ಸಿಂಹ ಅವರು ಭೇಟಿ ನೀಡಿದ್ದರು.



ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ವಿ. ಸೋಮಣ್ಣ ಹಾಗೂ ಸಂಸದ ಪ್ರತಾಪ್​ ಸಿಂಹ ಅವರು ದರ್ಶನ್​ ಅಭಿಮಾನಿಗಳ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.





ದರ್ಶನ್​ ಅಭಿಮಾನಿಗಳು ಮೈಸೂರು ಮಾತ್ರವಲ್ಲದೆ ಬೆಂಗಳೂರಿನಲ್ಲೂ ಮೂರು ದಿನಕ್ಕೊಮ್ಮೆ ದಿನಗೂಲಿ ಕಾರ್ಮಿಕರ ಮನೆ ಬಾಗಿಲಿಗೆ ದಿನಸಿ ತಲುಪಿಸುತ್ತಿದ್ದಾರೆ. ಈ ಎಲ್ಲ ಕೆಲಸಗಳಿಗೂ ಆರ್ಥಿಕವಾಗಿ ಸಹಾಯ ಮಾಡುತ್ತಿರುವುದು ಅಭಿಮಾನಿಗಳ ದಾಸ ದರ್ಶನ್​.

Prakash Rai: 500 ಕುಟುಂಬಗಳ ತುತ್ತಿನ ಬುತ್ತಿ ತುಂಬಿಸುತ್ತಿರುವ ಪ್ರಕಾಶ್​ ರೈ..!

First published: