ಕರ್ತವ್ಯದಲ್ಲಿದ್ದಾಗಲೇ ಅಪಘಾತ, ಪೊಲೀಸ್‌ ಪೇದೆ ಸಾವು; ಸರ್ಕಾರದ ನೆರವಿಗೆ ಸಹೋದ್ಯೋಗಿಗಳ ಮನವಿ

ಪೇದೆ ಮೋಹನ್‌ ಕುಮಾರ್‌ ಇತ್ತೀಚೆಗೆ ಮದುವೆಯಾಗಿದ್ದರೂ ಸಹ ರಜೆ ತೆಗೆದುಕೊಳ್ಳದೆ ಲಾಕ್‌ಡೌನ್‌ನಿಂದಾಗಿ ನಿರಂತರ ಸೇವೆ ಸಲ್ಲಿಸಲ್ಲಿದ್ದಾರೆ. ಆದರೆ, ಸೇವೆ ಸಲ್ಲಿಸುವಾಗಲೇ ಇಂತಹ ಅಪಘಾತ ನಡೆದದ್ದು ದುರ್ವಿಧಿ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಮರುಗಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಪೊಲೀಸ್‌ ಪೇದೆ ಮೋಹನ್ ಕುಮಾರ್‌.

ಅಪಘಾತದಲ್ಲಿ ಮೃತಪಟ್ಟ ಪೊಲೀಸ್‌ ಪೇದೆ ಮೋಹನ್ ಕುಮಾರ್‌.

  • Share this:
ಹಾಸನ (ಮೇ 13); ಐದು ದಿನಗಳ ಹಿಂದೆ ಕರ್ತವ್ಯದಲ್ಲಿ ನಿರತವಾಗಿದ್ದ ವೇಳೆ ತೀವ್ರ ಅಪಘಾತಕ್ಕೆ ಈಡಾಗಿದ್ದ ಪೊಲೀಸ್‌ ಪೇದೆ ಮೋಹನ್‌ ಕುಮಾರ್‌ (32) ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆ ಉಸಿರೆಳೆದಿದ್ದಾರೆ.

ಮೋಹನ್‌ ಕುಮಾರ್‌ ಅವರಿಗೆ ಕೇವಲ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಆದರೆ, ಐದು ದಿನಗಳ ಹಿಂದೆ ಬೈಕ್‌ನಲ್ಲಿ ಸ್ಟೇಷನ್‌ಗೆ ತೆರಳುತ್ತಿದ್ದಾಗ ಕಂದಲಿ ಗ್ರಾಮದ ಬಳಿ ಅಪಘಾತವಾಗಿತ್ತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪೇದೆ ಮೋಹನ್‌ ಕುಮಾರ್‌ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆ ಫಲ ನೀಡಿಲ್ಲ.

ಪೇದೆ ಮೋಹನ್‌ ಕುಮಾರ್‌ ಇತ್ತೀಚೆಗೆ ಮದುವೆಯಾಗಿದ್ದರೂ ಸಹ ರಜೆ ತೆಗೆದುಕೊಳ್ಳದೆ ಲಾಕ್‌ಡೌನ್‌ನಿಂದಾಗಿ ನಿರಂತರ ಸೇವೆ ಸಲ್ಲಿಸಲ್ಲಿದ್ದಾರೆ. ಆದರೆ, ಸೇವೆ ಸಲ್ಲಿಸುವಾಗಲೇ ಇಂತಹ ಅಪಘಾತ ನಡೆದದ್ದು ದುರ್ವಿಧಿ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಮರುಗಿದ್ದಾರೆ. ಅಲ್ಲದೆ, ಸರ್ಕಾರದಿಂದ ಅವರ ಕುಟುಂಬಕ್ಕೆ ಸೂಕ್ತ ನೆರವು ಸಿಗಬೇಕು ಎಂದು ಅವರ ಸಹೊದ್ಯೋಗಿಗಳ ಮನವಿ ಕೊಂಡಿದ್ದಾರೆ.

ಇದನ್ನೂ ಓದಿ : ಕೋಲಾರದಲ್ಲಿ ಕೊರೋನಾ ಕೇಕೆ; ಒಂದೇ ದಿನ ಐವರಲ್ಲಿ ಕಾಣಿಸಿಕೊಂಡ ಮಾರಣಾಂತಿಕ ಸೋಂಕು
First published: