Police Jobs: ಪೊಲೀಸ್ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ: SI ಹುದ್ದೆಗೆ ವಯೋಮಿತಿ ಹೆಚ್ಚಳ

Police Recruitment 2020: ಸಾಮಾನ್ಯ ವರ್ಗದವರಿಗೆ 28 ರಿಂದ‌ 30 ರವರೆಗೆ ವಯೋಮಿತಿ ಹೆಚ್ಚಳ ಮಾಡಿದ್ರೆ, ಎಸ್ಸಿ ಎಸ್ಟಿ, ಓಬಿಸಿ ವರ್ಗದವರಿಗೆ 30 ರಿಂದ 32 ರ ವರೆಗೆ ವಯೋಮಿತಿ ಹೆಚ್ಚಿಸಲಾಗಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು: ವಯಸ್ಸು ಜಾಸ್ತಿ ಆಗೋಯ್ತು. ಆ ಕೆಲಸಕ್ಕೆ ವಯೋಮಿತಿ ಕೂಡ ಮುಗಿದು ಹೋಯ್ತು. ಇನ್ನೂ ಸ್ವಲ್ಪ ವರ್ಷಗಳ ಕಾಲ ಸಮಯ ಕೊಟ್ಟಿದ್ರೆ ಪೊಲೀಸ್ ಕೆಲಸವನ್ನು ಪಡೆಯಬಹುದಿತ್ತು ಎಂದು ಚಿಂತಿಸುತ್ತಿದ್ದ ಯುವಕರಿಗೆ ಇದೀಗ ಸರ್ಕಾರ ಸಿಹಿ ಸುದ್ದಿ ನೀಡಿದೆ.

ಪೊಲೀಸ್ ಹುದ್ದೆಗೆ ವಯೋಮಿತಿ ಹೆಚ್ಚಳ ಮಾಡುವ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸರ್ಕಾರ ನಿರ್ಧಾರ ಮಾಡಿದೆ. ಪೊಲೀಸ್​ ಸಬ್​ ಇನ್ಪ್ ಪೆಕ್ಟರ್ ಹುದ್ದೆಗಾಗಿ ವಯೋಮಿತಿ ಹೆಚ್ಚಳ ಮಾಡಿದೆ.

ಸಾಮಾನ್ಯ ವರ್ಗದವರಿಗೆ 28 ರಿಂದ‌ 30 ರವರೆಗೆ ವಯೋಮಿತಿ ಹೆಚ್ಚಳ ಮಾಡಿದ್ರೆ, ಎಸ್ಸಿ ಎಸ್ಟಿ, ಓಬಿಸಿ ವರ್ಗದವರಿಗೆ 30 ರಿಂದ 32 ರ ವರೆಗೆ ವಯೋಮಿತಿ ಹೆಚ್ಚಿಸಲಾಗಿದೆ. ಈ ಹಿಂದೆ ಸಾಮಾನ್ಯ ವರ್ಗದವರಿಗೆ 26 ರಿಂದ 28 ಹಾಗೂ ಎಸ್ಪಿ ಎಸ್ಟಿಗೆ 28 ರಿಂದ 30 ಇತ್ತು.

ಇದನ್ನೂ ಓದಿ: ಜೂನ್ ಅಂತ್ಯದೊಳಗೆ ರಾಜ್ಯ ಸಂಪುಟ ವಿಸ್ತರಣೆ; ಹೆಚ್ಚುವರಿಯಾಗಿ ನಾಲ್ವರಿಗೆ ಸಚಿವ ಸ್ಥಾನ ಸಾಧ್ಯತೆ?

ಇದೀಗ ಎರಡೆರಡು ವರ್ಷಗಳ ಕಾಲ ವಯೋಮಿತಿಯನ್ನು ಸರ್ಕಾರ ಹೆಚ್ಚಿಸಿದೆ. ಈ ಕುರಿತು  ಮಾತನಾಡಿರುವ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ವಯೋಮಿತಿ ಹೆಚ್ಚಳದ ಬಗ್ಗೆ 17 ವರ್ಷಗಳ ನಂತರ ಸರ್ಕಾರ ತೀರ್ಮಾನ ಮಾಡಿದೆ. ಈ ಬಗ್ಗೆ ಬಹಳ ವರ್ಷಗಳಿಂದ ಯುವಕರ ಅಭಿಲಾಷೆ ಇತ್ತು. ವಯೋಮಿತಿ ಹೆಚ್ಚಿಸುವ ಬಗ್ಗೆ ತೀರ್ಮಾನ ಮಾಡಿದ್ದೇವೆ. ಪ್ರಸ್ತುತವಾಗಿ ನೇಮಕ ಪ್ರಕ್ರಿಯೆಗೆ ಇದು ಅನ್ವಯ ವಾಗಲಿದೆ. ಅಲ್ಲದೆ ಇನ್ನೂ ಅರ್ಜಿ ಹಾಕಲು ಕೂಡ ಇವಾಗ ಇರುವ ಸಮಯವನ್ನು ಹೆಚ್ಚಳ ಮಾಡಲಾಗುವುದು. ಈ ಬಗ್ಗೆ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ವಲಸೆ ಕಾರ್ಮಿಕರ ಸಂಕಷ್ಟಕ್ಕೆ ರಾಜ್ಯ-ಕೇಂದ್ರ ಸರ್ಕಾರಗಳು ಜರುಗಿಸಿದ ಕ್ರಮವೇನು?; ಸುಪ್ರೀಂ ಪ್ರಶ್ನೆ

ಒಟ್ಟಾರೆ ಪೊಲೀಸ್ ನೌಕರಿ ಪಡೆಯಲು ವಯೋಮಿತಿಯ ಚಿಂತೆ ಪಡುತ್ತಿದ್ದ ಆಕಾಂಕ್ಷಿ ಗಳಿಗೆ ಸರ್ಕಾರ ಒಂದು ಸುವರ್ಣಾವಕಾಶ ನೀಡಿದೆ. ಎಷ್ಟೋ ಮಂದಿ ಸಬ್​ ಇನ್ಸ್​ಪೆಕ್ಟರ್​ ಆಗಬೇಕು ಎಂಬ ಕನಸು ಕಂಡು ಸಫಲರಾಗದವರು, ಈಗ ಹೊಸ ವಯೋಮಿತಿ ಹೆಚ್ಚಳದ ನಿರ್ಣಯದಿಂದ ಮತ್ತೆ ಕನಸು ನನಸಾಗಿಸುವತ್ತ ಹೆಜ್ಜೆ ಇಡುವ ಸದಾವಕಾಶ ರಾಜ್ಯ ಸರ್ಕಾರ ಕಲ್ಪಿಸಿದೆ.
First published: