news18-kannada Updated:April 18, 2020, 6:13 PM IST
ಪೊಲೀಸ್ ಜೀಪ್
ಕಾರವಾರ(ಏ.18): ಲಾಕ್ ಡೌನ್ ನಿಂದ ಇದ್ದ ಜಾಗದಲ್ಲಿ ಇರಲಾಗದೆ ತಪ್ಪಿಸಿಕೊಂಡು ಊರು ಸೇರಲು ಜನ ಹರಸಾಹ ಪಡುತ್ತಿದ್ದಾರೆ. ಇದರ ಜೊತೆ ಹತ್ತಾರು ಸುಳ್ಳು ಸುದ್ದಿ ಸಹಿತ ಮುಂಚೂಣಿಗೆ ತಂದಿದ್ದಾರೆ. ಆದರೆ, ಈ ನಾಲ್ವರು ಕಾರ್ಮಿಕರು ಮಾತ್ರ ಪೋಲಿಸರನ್ನೆ ಉಪಯೋಗಿಸಿ ಕೊಂಡು ಚಾಣಾಕ್ಯತನ ಮೆರೆದಿದ್ದಾರೆ.
ಅಸಲಿ ಪೊಲೀಸ್ ಜೀಪ್ ವೊಂದನ್ನ ಅಕ್ರಮವಾಗಿ ಉಪಯೋಗಿಸಿಕೊಂಡು ಹುಬ್ಬಳ್ಳಿಯಿಂದ ಉತ್ತರಕನ್ನಡ ಜಿಲ್ಲೆಗೆ ಪ್ರವೇಶ ಮಾಡಿದ ನಾಲ್ವರು ಯುವಕರನ್ನ ಸ್ಥಳೀಯರು ಸಂಶಯದ ಮೇಲೆ ಹಿಡಿದು ಪೊಲೀಸ್ ರಿಗೆ ಒಪ್ಪಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ಹಿತ್ತಲ್ಲಮಕ್ಕಿ ಪೊಲೀಸ್ ಚೆಕ್ ಪೊಸ್ಟ್ ಬಳಿ ನಡೆದಿದೆ.
ಈ ಜೀಪನಲ್ಲಿ ಬಂದವರು ಯಾರು ಕೂಡ ಪೊಲೀಸ ಇಲಾಖೆಗೆ ಸೇರಿದವರಲ್ಲ. ಅವರು ಬಂದಿರುವ ಜೀಪ್ ಮಾತ್ರ ಪೊಲೀಸ್ ಇಲಾಖೆಗೆ ಸೇರಿದ್ದು ಎನ್ನಲಾಗಿದೆ. ಈ ನಾಲ್ವರು ಯುವಕರು ಹುಬ್ಬಳ್ಳಿಯಿಂದ ಯಲ್ಲಾಪುರ ಮಾರ್ಗವಾಗಿ ಜಿಲ್ಲೆಗೆ ಆಗಮಿಸಿದ್ದಾರೆ. ಈ ಜೀಪ್ ಗೋಕರ್ಣದ ಹಿತ್ತಲಮಕ್ಕಿ ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಬರುತ್ತಿದ್ದಂತೆ ಗಮನಿಸಿದ ಸ್ಥಳೀಯ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ನೋಡಲ್ ಅಧಿಕಾರಿಗಳು ಸಂಶಯದಿಂದ ಜೀಪ್ ನಲ್ಲಿ ಇರುವವರನ್ನ ವಿಚಾರಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಆ ಜೀಪನಲ್ಲಿ ಇದ್ದವರು ಕೂಡ ಪೊಲೀಸರು ಅಲ್ಲ ಎನ್ನುವುದು ಗೋತ್ತಾಗಿದೆ. ಈ ಸಮಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ನೋಡಲ್ ಅಧಿಕಾರಿಗಳು ಅವನ್ನ ಈ ಪೊಲೀಸ್ ಜೀಪ್ ಯಾಕೆ ತೆಗೆದುಕೊಂಡು ಬಂದಿದ್ದೀರಿ ಎಂದು ಕೇಳಿದಾಗ ನಾವು ತೆಗೆದುಕೊಂಡು ಬಂದಿಲ್ಲ. ಹುಬ್ಬಳ್ಳಿ ಸಬ್ ಇನ್ಸ್ಪೆಕ್ಟರ್ ಅವರೆ ನಮಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಪೊಲೀಸ್ ಜೀಪ್ ನಲ್ಲಿ ಬಂದ ಕಾರ್ಮಿಕರು
ಇವರು ಅಸಲಿ ಪೊಲೀಸ್ ಜೀಪ್ ನಲ್ಲಿ ಬಂದಿರುವ ನಕಲಿ ಪೊಲೀಸರು ಎಂದು ತಿಳಿದ ಗ್ರಾಮ ಪಂಚಾಯತ್ ಅಧ್ಯಕ್ಷರು ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಇದೀಗ ನಾಲ್ಬರು ಯುವಕರ ಮೇಲೆ ಪ್ರಕರಣ ದಾಖಲಾಗಿದೆ.ಸಿಕ್ಕಿ ಬಿದ್ದಿರುವ ಯುವಕರು ಮೂಲತಃ ಹುಬ್ಬಳ್ಳಿಯವರು ಆಗಿದ್ದು, ಗೋಕರ್ಣದಲ್ಲಿ ಜೆಸಿಬಿ ಚಾಲಕರಾಗಿ ಕೆಲಸ ಮಾಡುತ್ತಿದ್ದವರು ಎಂದು ಗೊತ್ತಾಗಿದೆ. ಲಾಕ್ ಡೌನ್ ಆಗುವ ಮೊದಲೇ ಇವರೆಲ್ಲ ಅನ್ಯ ಕೆಲಸದ ಮೇಲೆ ಊರಿಗೆ ಹೋಗಿದ್ದರು. ಆದರೆ ಬಳಿಕ ಲಾಕ್ ಡೌನ್ ಆಗಿರುವ ಕಾರಣಕ್ಕೆ ವಾಪಸ್ ಗೋಕರ್ಣಕ್ಕೆ ಬರಲು ಸಾಧ್ಯವಾಗಿಲ್ಲ.
ಇದನ್ನೂ ಓದಿ :
ಆಸ್ತಿ ಮುಟ್ಟುಗೋಲು ಜತೆಗೆ ಕೊರೋನಾ ಸಾವಿಗೆ ತಬ್ಲಿಘಿ ಪ್ರಕರಣದಲ್ಲಿ ಭಾಗಿಯಾದವರನ್ನು ಹೊಣೆ ಮಾಡಿ; ಶೋಭಾ ಕರಂದ್ಲಾಜೆ ಆಗ್ರಹ
ಪೊಲೀಸರನ್ನೆ ಬುಟ್ಟಿಗೆ ಬಿಳಿಸಿಕೊಂಡ ಇವರು ಅಲ್ಲಿನ ಪೊಲೀಸ್ ಅಧಿಕಾರಿಯೊಬ್ಬರಿಗೆ ಹಣ ನೀಡಿ ಓರ್ವ ಪೊಲೀಸ್ ಜೀಪನ ಚಾಲಕನೊಂದಿಗೆ ಗೋಕರ್ಣಕ್ಕೆ ಬಂದಿದ್ದು, ಪೊಲೀಸ್ ಜೀಪನಲ್ಲಿ ಬಂದವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕುಳ್ಳುವಂತಾಗಿದೆ.
First published:
April 18, 2020, 6:08 PM IST