• Home
  • »
  • News
  • »
  • coronavirus-latest-news
  • »
  • ಪೌರಾಣಿಕ ಪಾತ್ರಗಳ ಮೂಲಕ ಕೊರೋನಾ ಜಾಗೃತಿ ಮೂಡಿಸಿದ ಪೊಲೀಸರು

ಪೌರಾಣಿಕ ಪಾತ್ರಗಳ ಮೂಲಕ ಕೊರೋನಾ ಜಾಗೃತಿ ಮೂಡಿಸಿದ ಪೊಲೀಸರು

ಪೊಲೀಸರು

ಪೊಲೀಸರು

ಗಂಜ್ ಸರ್ಕಲ್, ತಿನ್ ಕಂದಿಲ್ , ಡಾ.ಅಂಬೇಡ್ಕರ್ ವೃತ್ತದಲ್ಲಿ ನಾಟಕ ಪ್ರದರ್ಶನ ಮಾಡಲಾಯಿತು. ಈ ವೇಳೆ ಎಸ್ ಪಿ ಡಾ.ಸಿ.ಬಿ.ವೇದಮೂರ್ತಿ ಹಾಡಿದ ಕೊರೊನಾ ಹಾಡನ್ನು ಹಿನ್ನೆಲೆ ಸಂಗೀತಕ್ಕೆ ಬಳಸಿಕೊಳ್ಳಲಾಯಿತು.

  • Share this:

ರಾಯಚೂರು(ಮೇ.05): ದೇಶದಲ್ಲಿ ಕೊರೋನಾ ತಡೆಗಾಗಿ ಮೂರನೆಯ ಹಂತದ ಲಾಕ್ ಡೌನ್ ಆರಂಭವಾಗಿದೆ ಹಸಿರು ವಲಯದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ, ಆದರೂ ಜನರು ಎಚ್ವರಿಕೆಯಿಂದರಿಬೇಕೆಂದು ಜಾಗೃತಿ ಕಾರ್ಯಕ್ರಮಗಳು ನಡೆದಿವೆ. ಹಸಿರು ವಲಯದಲ್ಲಿರುವ ರಾಯಚೂರು ಜಿಲ್ಲೆಯ ಜನರಿಗೆ ಕೊರೊನಾ ಜಾಗೃತಿ ಮೂಡಿಸಲು ಪೊಲಿಸರು ಬೀದಿ ನಾಟಕ ಪ್ರದರ್ಶಿಸಿ ಯಮಲೋಕದ ಪಾತ್ರಧಾರಿಗಳ ಛದ್ಮವೇಷ ಧರಿಸಿ ಗಮನ ಸೆಳೆದರು. 


ಪೊಲೀಸರು ಯಮರಾಜ, ಚಿತ್ರಗುಪ್ತ, ಯಮಧೂತರ ಪಾತ್ರಧಾರಿಗಳು ಕೊರೊನಾದಿಂದ ಹೇಗೆ ಸಾವು ಸಂಭವಿಸುತ್ತದೆ ಎಂಬ ಚಿತ್ರಣ ಕಟ್ಟಿಕೊಟ್ಟರು. ಕೊರೊನಾದಿಂದ ಪಾರಾಗಲು ಏನೆಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬ ಕುರಿತು ತಿಳಿ ಹೇಳಲಾಯಿತು. ಎಲ್ಲ ಪಾತ್ರಗಳನ್ನು ಪೊಲೀಸರೇ ನಿಭಾಯಿಸಿದ್ದು ವಿಶೇಷವಾಗಿತ್ತು.
ಗಂಜ್ ಸರ್ಕಲ್, ತಿನ್ ಕಂದಿಲ್ , ಡಾ.ಅಂಬೇಡ್ಕರ್ ವೃತ್ತದಲ್ಲಿ ನಾಟಕ ಪ್ರದರ್ಶನ ಮಾಡಲಾಯಿತು. ಈ ವೇಳೆ ಎಸ್ ಪಿ ಡಾ.ಸಿ.ಬಿ.ವೇದಮೂರ್ತಿ ಹಾಡಿದ ಕೊರೊನಾ ಹಾಡನ್ನು ಹಿನ್ನೆಲೆ ಸಂಗೀತಕ್ಕೆ ಬಳಸಿಕೊಳ್ಳಲಾಯಿತು.
ಇದನ್ನೂ ಓದಿ :  ಕೊರೋನಾ ಮುಕ್ತವಾಗುವತ್ತ ಉತ್ತರ ಕನ್ನಡ ; ಜನರಲ್ಲಿ ಆತಂಕ ಸೃಷ್ಟಿಸಿದ ಮತ್ತೊಂದು ಪಾಸಿಟಿವ್ ಪ್ರಕರಣ


ರಾಯಚೂರಿನಲ್ಲಿ ಎರಡು ದಿನಗಳಿಂದ ಲಾಕ್ ಡೌನ್ ಸಡಿಲಿಕೆಯಾಗಿದ್ದು ಜನರು ಸಂಪೂರ್ಣ ಸಡಿಲಿಕೆಯಾಗಿದೆ ಎಂಬಂತೆ ವರ್ತಿಸುತ್ತಿದ್ದಾರೆ. ಆದರೆ, ಜನರ ಓಡಾಟ, ಗುಂಪು ಕೂಡುವಿಕೆ ನೋಡಿದರೆ ಜನರಲ್ಲಿ ಭಯ ಉಂಟಾಗುತ್ತಿದೆ. ಇದೇ ಸಂದರ್ಭದಲ್ಲಿ ಜನರ ಭಯದ ಮಧ್ಯೆ ಆರ್ಥಿಕ ಚಟುವಟಿಕೆ ನಡೆಯಬೇಕೆನ್ನುವ ಕಾರಣಕ್ಕೆ ಲಾಕ್ ಡೌನ್ ಸಡಿಲಿಕೆ ಮಾಡಿದ್ದು, ಈ ಸಂದರ್ಭದಲ್ಲಿ ಮೈ ಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುವುದನ್ನು ಪೊಲೀಸರು ಬೀದಿ ನಾಟಕದ ಮುಖಾಂತರ  ಜಾಗೃತಿ ಮೂಡಿಸಿದರು.

Published by:G Hareeshkumar
First published: