ಪ್ರಧಾನಿ ಮೋದಿ ತನ್ನ ತಪ್ಪುಗಳನ್ನು ಒಪ್ಪಿ, ದೇಶವನ್ನು ಪುನರ್​ ನಿರ್ಮಿಸಲು ತಜ್ಞರಿಗೆ ಸಹಕರಿಸಬೇಕು; ರಾಹುಲ್ ಗಾಂಧಿ

ವಿಶ್ವಬ್ಯಾಂಕ್ ವರದಿಯ ಪ್ರಕಾರ ಕೊರೋನಾ ಸಾಂಕ್ರಮಿಕದ ಸಮಯದಲ್ಲಿ ಜಗತ್ತಿನ 13.1 ಕೋಟಿ ಜನರು ಬಡತನ ರೇಖೆಗಿಂತ ಕೆಳಗೆ ಇಳಿಸಿದ್ದಾರೆ. ಈ ಪೈಕಿ 7.5 ಕೋಟಿ ಜನರು ಭಾರತದ ಜನರೆ ಆಗಿದ್ದಾರೆ (ಶೇ.57.3) ಎಂಬ ಅಂಶ ಆಘಾತಕ್ಕೆ ಕಾರಣವಾಗಿದೆ.

ನರೇಂದ್ರ ಮೋದಿ-ರಾಹುಲ್ ಗಾಂಧಿ.

ನರೇಂದ್ರ ಮೋದಿ-ರಾಹುಲ್ ಗಾಂಧಿ.

 • Share this:
  ನವ ದೆಹಲಿ (ಜೂನ್ 17); "ದೇಶದಲ್ಲಿ ಕೊರೋನಾ ಸೋಂಕಿನ ಪರಿಣಾಮವನ್ನು ನಿಭಾಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಎಡವಿದ್ದಾರೆ. ಹೀಗಾಗಿ ಅವರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಈಗಲಾದರೂ ತಜ್ಞರ ಸಲಹೆ ಪಡೆದರೆ ಮಾತ್ರ ದೇಶವನ್ನು ಪುನರ್​ ನಿರ್ಮಿಸುವುದು ಸಾಧ್ಯ. ಇಲ್ಲದಿದ್ದರೆ ಇದಕ್ಕಿಂತ ದೊಡ್ಡ ಅನಾಹುತಗಳು ಎದುರಾಗಲಿವೆ" ಎಂದು ಕಾಂಗ್ರೆಸ್​ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ. ಅಸಲಿಗೆ 2020 ಜನವರಿಯಲ್ಲೇ ದೇಶಕ್ಕೆ ಕೊರೋನಾ ಮಾರಕವಾಗಬಲ್ಲದು ಹೀಗಾಗಿ ಕೇಂದ್ರ ಸರ್ಕಾರ ಹುಷಾರಾಗಿರುವುದು, ಎಚ್ಚರಿಕೆ ವಹಿಸುವುದು ಸೂಕ್ತ ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದರು. ಆದರೆ, ಕೇಂದ್ರ ಸರ್ಕಾರ ಈ ಸಲಹೆಯನ್ನು ಗಂಭೀರವಾಗಿ ಪರಿಣಮಿಸಿರಲಿಲ್ಲ.

  ಇನ್ನೂ ಮೊದಲ ಕೊರೋನಾ ಅಲೆಯಿಂದ ಪಾಠ ಕಲಿತ ನಂತರವೂ ಎರಡನೇ ಅಲೆಯ ಬಗ್ಗೆ ಎಚ್ಚರಿಕೆ ಇದ್ದರೂ, ಸೂಕ್ತ ಸಿದ್ಧತೆ ನಡೆಸಿರಲಿಲ್ಲ. ಪರಿಣಾಮ ಲಕ್ಷಾಂತರ ಜನ ಅಮಾಯಕರು ಕೊರೋನಾದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಆರ್ಥಿಕವಾ ಗಿಯೂ ಭಾರತ ಹಿಂದುಳಿದಿದ್ದು, ಕೊರೋನಾ ಅನೇಕ ಭಾರತೀಯರನ್ನು ಬಡತನಕ್ಕೆ ನೂಕಿದೆ ಈ ಬಗ್ಗೆ ಮೋದಿ ಸರ್ಕಾರವನ್ನು ರಾಹುಲ್​ ಗಾಂಧಿ ನಿರಂತರ ಟೀಕೆಗೆ ಗುರಿ ಮಾಡುತ್ತಲೇ ಇದ್ದಾರೆ.

  ಗುರುವಾರವೂ ಈ ಬಗ್ಗೆ ವಿಸ್ಕೃತ ವರದಿಗಳನ್ನು ಉಲ್ಲೇಖಿಸಿ ಟ್ವೀಟ್ ಮೂಲಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಕೆಣಕಿದ್ದಾರೆ. ಅಲ್ಲದೆ, ಕೊರೋನಾ ಸಾಂಕ್ರಾಮಿಕ ಸಮಯ ಜಾಗತಿಕ ಬಡತನದ ಹೆಚ್ಚಳದಲ್ಲಿ ಭಾರತವು ಶೇ.57.3 ರಷ್ಟು ಪಾಲನ್ನು ಹೊಂದಿದೆ ಎಂದು ವಿಶ್ವ ಬ್ಯಾಂಕ್‌ ವರದಿ ನೀಡಿತ್ತು. ಈ ಅಂಕಿ ಅಂಶಗಳನ್ನು ಅವರು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.  ವಿಶ್ವಬ್ಯಾಂಕ್‌ ಬಡನದ ಕುರಿತು ನೀಡಿದ್ದ ವರದಿಯ ಚಿತ್ರವನ್ನು ಹಂಚಿಕೊಂಡು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಇದು ಭಾರತ ಸರ್ಕಾರವು ಸಾಂಕ್ರಮಿಕವನ್ನು ಕೆಟ್ಟದಾಗಿ ನಿರ್ವಹಿಸಿರುವುದರ ಫಲಿತಾಂಶವಾಗಿದೆ. ಆದರೆ ನಾವೀಗ ಭವಿಷ್ಯದತ್ತ ಗಮನ ಹರಿಸಬೇಕಾಗಿದೆ. ಪ್ರಧಾನಿ ತನ್ನ ತಪ್ಪುಗಳನ್ನು ಒಪ್ಪಿಕೊಂಡು, ತಜ್ಞರ ಸಹಾಯವನ್ನು ಪಡೆದರೆ ಮಾತ್ರ, ನಾವು ನಮ್ಮ ದೇಶವನ್ನು ಪುನರ್‌‌ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ" ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ: HD Kumaraswamy: ನಾಯಕತ್ವವೇ ಇಲ್ಲದ ಬಿಜೆಪಿ ಸರ್ಕಾರ ಇದ್ದೇನು ಉಪಯೋಗ, ವಿಸರ್ಜಿಸಿ ಮೊದಲು; ಕುಮಾರಸ್ವಾಮಿ ಕಿಡಿ

  ವಿಶ್ವಬ್ಯಾಂಕ್‌ ತನ್ನ ವರದಿಯಲ್ಲಿ, ಜಾಗತಿಕವಾಗಿ ಬಡತನ ರೇಖೆಗಿಂತ ಕೆಳಗಿರುವ ಹಾಗೂ ಮಧ್ಯಮ ಆದಾಯದ ಗುಂಪಿನಿಂದ ಹೊರಗುಳಿದ ಜನರ ಅಂದಾಜು ಅಂಕಿ ಅಂಶವನ್ನು ನೀಡಿದೆ. ಇದರಲ್ಲಿ ಹೆಚ್ಚಿನ ಕೊಡುಗೆ ಭಾರತದ್ದೆ ಆಗಿದೆ ಎಂದು ಅದು ಉಲ್ಲೇಖಿಸಿದೆ.

  ಇದನ್ನೂ ಓದಿ: CBSE 12th Result: ಮೂರು ವರ್ಷಗಳ ಸಾಧನೆ ಆಧಾರದ ಮೇಲೆ ಮೌಲ್ಯಮಾಪನ; ಜುಲೈ 31ಕ್ಕೆ CBSE ಫಲಿತಾಂಶ

  ವಿಶ್ವಬ್ಯಾಂಕ್ ವರದಿಯ ಪ್ರಕಾರ ಕೊರೋನಾ ಸಾಂಕ್ರಮಿಕದ ಸಮಯದಲ್ಲಿ ಜಗತ್ತಿನ 13.1 ಕೋಟಿ ಜನರು ಬಡತನ ರೇಖೆಗಿಂತ ಕೆಳಗೆ ಇಳಿಸಿದ್ದಾರೆ. ಈ ಪೈಕಿ 7.5 ಕೋಟಿ ಜನರು ಭಾರತದ ಜನರೆ ಆಗಿದ್ದಾರೆ (ಶೇ.57.3) ಎಂಬ ಅಂಶ ಆಘಾತಕ್ಕೆ ಕಾರಣವಾಗಿದೆ. ಹಾಗೆಯೆ ಸಾಂಕ್ರಮಿಕದ ಸಮಯದಲ್ಲಿ ಜಗತ್ತಿನ 5.4 ಕೋಟಿ ಜನರು ಮಧ್ಯಮ ಆದಾಯದ ಗುಂಪಿನಿಂದ ಹೊರಹೋಗಿದ್ದಾರೆ. ಇದರಲ್ಲಿ 3.5 ಕೋಟಿ ಜನರು ಭಾರತೀಯರಾಗಿದ್ದಾರೆ (59.3%) ಎಂಬುದು ಉಲ್ಲೇಖಾರ್ಹ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:MAshok Kumar
  First published: