‘ನಾನು ನಿಮ್ಮ ಮನೆಯ ಸದಸ್ಯ; ಕೈ ಮುಗಿದು ಬೇಡುವೆ, ಮನೆಯಲ್ಲೇ ಇರಿ‘ - ಭಾರತೀಯರಿಗೆ ಮೋದಿ ಮನವಿ

ಕೋವಿಡ್-19 ತಡೆಗೆ ಸಾಮಾಜಿಕ ಅಂತರ ಮುಖ್ಯ. ಈ ಮಾರಕ ವೈರಾಣು ಹೇಗೆ ಹರಡುತ್ತದೆ ಎಂದು ಇಲ್ಲಿಯವರೆಗೂ ಸ್ಪಷ್ಟತೆ ಸಿಕ್ಕಿಲ್ಲ. ಇದರ ಪ್ರಾಥಮಿಕ ಗುಣಲಕ್ಷಣಗಳು ಏನು ಎಂಬುದು ಯಾರಿಗೂ ಅರ್ಥ ಆಗಿಲ್ಲ. ಸಾಮಾಜಿಕ ಅಂತರವೂ ನನಗೂ ಸೇರಿದಂತೆ ಎಲ್ಲರಿಗೂ ಅನ್ವಯಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

news18-kannada
Updated:March 24, 2020, 9:35 PM IST
‘ನಾನು ನಿಮ್ಮ ಮನೆಯ ಸದಸ್ಯ; ಕೈ ಮುಗಿದು ಬೇಡುವೆ, ಮನೆಯಲ್ಲೇ ಇರಿ‘ - ಭಾರತೀಯರಿಗೆ ಮೋದಿ ಮನವಿ
ಪ್ರಧಾನಿ ಮೋದಿ.
  • Share this:
ನವದೆಹಲಿ(ಮಾ.24): "ನಾನು ನಿಮ್ಮ ಮನೆಯ ಸದಸ್ಯ; ಕೈ ಮುಗಿದು ಕೇಳಿಕೊಳ್ಳುತ್ತೇನೆ, ನಿಮ್ಮ ಮನೆಯಲ್ಲೇ ಇರಿ" ಎಂದು ಪ್ರಧಾನಿ ನರೇಂದ್ರ ಮೋದಿ ಭಾರತೀಯರಲ್ಲಿ ವಿನಂತಿ ಮಾಡಿದ್ದಾರೆ. 21 ದಿನಗಳ ಇಡೀ ದೇಶದ ಬಂದ್​​ಗೆ ಕರೆ ನೀಡಿದ ಪ್ರಧಾನಿ ನರೇಂದ್ರ, ಕೊರೋನಾ ವೈರಸ್​​, ವಿಶ್ವದ ಸಮರ್ಥ ದೇಶಗಳನ್ನೇ ಆತಂಕ್ಕೀಡು ಮಾಡಿದೆ. ಇದನ್ನು ಬಗ್ಗುಬಡಿಯಲು 21 ದಿನ ಯಾರು ಮನೆಯಿಂದ ಹೊರಗೆ ಬರಬೇಡಿ ಎಂದು ಹೇಳಿದರು.

ಇಡೀ ದೇಶವೇ ನಿಮ್ಮನ್ನು ಕೊರೋನಾ ವೈರಸ್​ನಿಂದ ಬಚಾವ್​ ಮಾಡಲು ಕೆಲಸ ಮಾಡುತ್ತಿದೆ. ಪೊಲೀಸರು, ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು ನಿಮಗಾಗಿ ಕೆಲಸ ಮಾಡುತ್ತಿದ್ಧಾರೆ. ಕಳೆದ ಎರಡು ತಿಂಗಳಿನಲ್ಲಿ ಜಗತ್ತಿನಾದ್ಯಂತ ಕೊರೋನಾ ವೈರಸ್​​ ಸೋಂಕು 1 ಲಕ್ಷಕ್ಕೂ ಹೆಚ್ಚು ಜನರಿಗೆ ತಗುಲಿದೆ. ಈಗಾಗಲೇ 1 ಲಕ್ಷ ಸೋಂಕಿತರು ಇರುವುದರಿಂದ ಮತ್ತೊಂದು ಲಕ್ಷ ಜನ ಇದಕ್ಕೆ ಬಲಿಯಾಗಲು ಕೇವಲ ಮೂರು ದಿನ ಸಾಕು. ಹಾಗಾಗಿ ನಾವು ಎಚ್ಚೆತ್ತುಕೊಳ್ಳದಿದ್ದರೆ 21 ವರ್ಷ ಹಿಂದಕ್ಕೆ ಹೋಗಬೇಕಾಗುತ್ತದೆ ಎಂದರು.

ಇದನ್ನೂ ಓದಿ: 21 ದಿನ ದೇಶಾದ್ಯಂತ ಕರ್ಫ್ಯೂ; ಪ್ರಧಾನಿ ಮೋದಿ ಘೋಷಣೆ

ಕೋವಿಡ್-19 ತಡೆಗೆ ಸಾಮಾಜಿಕ ಅಂತರ ಮುಖ್ಯ. ಈ ಮಾರಕ ವೈರಾಣು ಹೇಗೆ ಹರಡುತ್ತದೆ ಎಂದು ಇಲ್ಲಿಯವರೆಗೂ ಸ್ಪಷ್ಟತೆ ಸಿಕ್ಕಿಲ್ಲ. ಇದರ ಪ್ರಾಥಮಿಕ ಗುಣಲಕ್ಷಣಗಳು ಏನು ಎಂಬುದು ಯಾರಿಗೂ ಅರ್ಥ ಆಗಿಲ್ಲ. ಸಾಮಾಜಿಕ ಅಂತರವೂ ನನಗೂ ಸೇರಿದಂತೆ ಎಲ್ಲರಿಗೂ ಅನ್ವಯಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ನಾವು ಕಾರ್ಯಪ್ರವೃತ್ತರಾಗಬೇಕಾದ ಹಂತದಲ್ಲಿದ್ದೇವೆ. ಈ ಕೊರೋನಾ ಮುಂದಿನ ಹಂತಕ್ಕೆ ಹೋಗುವ ಮುನ್ನ ನಾವು ಇದನ್ನು ಬಗ್ಗುಬಡಿಯಬೇಕಿದೆ. ಹೀಗೆ ಧೃಡ ನಿರ್ಧಾರ ಮಾಡಬೇಕಾದ ಸಮಯ ಇದಾಗಿದೆ. ಜನರಿಗೆ ಮೂಲಭೂತ ವಸ್ತುಗಳನ್ನು ಪೂರೈಕೆ ಮಾಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು. ಅದಕ್ಕಾಗಿ ಕೇಂದ್ರ 15 ಸಾವಿರ ಕೋಟಿ ಘೋಷಣೆ ಮಾಡಿದೆ ಎಂದು ಭರವಸೆ ನೀಡಿದರು.

!function(e,i,n,s){var t="InfogramEmbeds",d=e.getElementsByTagName("script")[0];if(window[t]&&window[t].initialized)window[t].process&&window[t].process();else if(!e.getElementById(n)){var o=e.createElement("script");o.async=1,o.id=n,o.src="https://e.infogram.com/js/dist/embed-loader-min.js",d.parentNode.insertBefore(o,d)}}(document,0,"infogram-async");
First published:March 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading