Mann Ki Baat: ಇಂದು ಮನ್ ಕಿ ಬಾತ್ ಮೂಲಕ ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಇಂದು ಬೆಳಗ್ಗೆ 11 ಗಂಟೆಗೆ ದೇಶ ಮತ್ತು ವಿದೇಶಗಳಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಆಕಾಶವಾಣಿಯ ಎಲ್ಲಾ ಜಾಲಗಳಲ್ಲಿ, ದೂರದರ್ಶನ ಮತ್ತು ವೆಬ್​ಸೈಟ್​, ನ್ಯೂಸ್​​ ಆನ್​​ ಎಐಆರ್​ ಆ್ಯಪ್​​ನಲ್ಲೂ ಪ್ರಧಾನಿಯವರ ಭಾಷಣ ಪ್ರಸಾರವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

 • Share this:
  ಬೆಂಗಳೂರು(ಮೇ.31): ಭಾರತದಲ್ಲಿ ಕೊರೋನಾ ವೈರಸ್​ ಆರ್ಭಟ ಮುಂದುವರಿದಿದೆ. ಈ ಮಾರಕ ಸೋಂಕಿಗೆ ದಿನದಿಂದ ಸಾಯುವವರ ಸಂಖ್ಯೆ ಏರುತ್ತಲೇ ಇದೆ. ಇದರ ನಿಯಂತ್ರಣಕ್ಕೆ ಈಗಾಗಲೇ ಕೇಂದ್ರ ಸರ್ಕಾರ ಐದನೇ ಅವಧಿಗೆ ಲಾಕ್​​ಡೌನ್​​ ವಿಸ್ತರಿಸಿದೆ. ಇಂದಿಗೆ 4ನೇ ಹಂತದ ಲಾಕ್​ಡೌನ್ ಮುಕ್ತಾಯವಾಗಲಿದೆ. ನಾಳೆಯಿಂದ ಅದರೆ ಜೂನ್​ 1ರಿಂದ 15ರವರೆಗೂ ಐದನೇ ಹಂತದ ಲಾಕ್​ಡೌನ್​ ಜಾರಿಯಲ್ಲಿರಲಿದೆ. ಕೊರೋನಾ ಕುರಿತಂತೆ ಆಗ್ಗಾಗ ಜನರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮಾತಾಡುತ್ತಿರುತ್ತಾರೆ. ಹೀಗೆ ಇಂದು ಈ ಕೋವಿಡ್​​-19 ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಾಳೆ ಮನ್ ಕಿ ಬಾತ್ ಮೂಲಕ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

  ಇಂದು ಬೆಳಗ್ಗೆ 11 ಗಂಟೆಗೆ ದೇಶ ಮತ್ತು ವಿದೇಶಗಳಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಆಕಾಶವಾಣಿಯ ಎಲ್ಲಾ ಜಾಲಗಳಲ್ಲಿ, ದೂರದರ್ಶನ ಮತ್ತು ವೆಬ್​ಸೈಟ್​, ನ್ಯೂಸ್​​ ಆನ್​​ ಎಐಆರ್​ ಆ್ಯಪ್​​ನಲ್ಲೂ ಪ್ರಧಾನಿಯವರ ಭಾಷಣ ಪ್ರಸಾರವಾಗಲಿದೆ.

  ಜೂನ್ 1ರಿಂದ 15ರವರೆಗೆ 5ನೇ ಹಂತದ ಲಾಕ್ಡೌನ್ ಜಾರಿಯಲ್ಲಿರಲಿದೆ. ಈ ವೇಳೆ 13 ಮಹಾನಗರಗಳಲ್ಲಿ ಕಟ್ಟುನಿಟ್ಟಿನ‌ ಕ್ರಮ ಇರಲಿದೆ. ಆ 13 ನಗರಗಳೆಂದರೆ ದೆಹಲಿ, ಮುಂಬೈ, ಚೆನ್ನೈ, ಅಹಮದಾಬಾದ್, ಥಾಣೆ, ಪುಣೆ, ಹೈದರಾಬಾದ್, ಕೋಲ್ಕತಾ/ಹೌರಾ, ಇಂಧೂರ್, ಜೈಪುರ, ಜೋದ್​ಪುರ್, ಚೆಂಗಾಲಪಟ್ಟು ಮತ್ತು ತಿರುವಳ್ಳೂರು. ದೇಶದ ಮೆಟ್ರೋ ಸಿಟಿಗಳಲ್ಲಿ ಒಂದಾದ ರಾಜ್ಯ ರಾಜಧಾನಿ ಬೆಂಗಳೂರು ಐದನೇ ಹಂತದ ಲಾಕ್​ಡೌನ್​ನಿಂದ ಬಚಾವಾದಂತಾಗಿದೆ. ಇದಲ್ಲದೆ 145 ಜಿಲ್ಲೆಗಳ‌ ಪೈಕಿ ರಾಜ್ಯದಲ್ಲಿ ಅತಿ ಹೆಚ್ಚು ಕೊರೋನಾ ಪೀಡಿತರಿರುವ ಮಂಡ್ಯ, ಕಲ್ಬುರ್ಗಿ ಮತ್ತು ಯಾದಗಿರಿ ಸ್ಥಾನ ಪಡೆಯುವ ಸಂಭವ ಇದೆ.

  ಇದನ್ನೂ ಓದಿ: ಇಂದಿಗೆ ನಾಲ್ಕನೇ ಹಂತದ ಲಾಕ್​ಡೌನ್ ಮುಕ್ತಾಯ; ಐದನೇ ಹಂತದ ಲಾಕ್​ಡೌನ್​ನಲ್ಲಿ ಹಲವು ರಿಯಾಯಿತಿ?

  5ನೇ ಹಂತದ ಲಾಕ್ಡೌನ್ ಸ್ವರೂಪ ಸಂಪೂರ್ಣ ಭಿನ್ನವಾಗಿರಲಿದೆ. ಈ ಬಾರಿ ದೇಶದ 13 ಮಹಾನಗರಗಳು ಸೇರಿದಂತೆ 145 ಜಿಲ್ಲೆಗಳಲ್ಲಿ ಮಾತ್ರ ಕಟ್ಟುನಿಟ್ಟಿನ‌ ಕ್ರಮ ಇರಲಿದೆ. ಉಳಿದೆಡೆ ರಾತ್ರಿ‌ 9ರಿಂದ ಬೆಳಿಗ್ಗೆ 7ರವರೆಗೆ ಮಾತ್ರ ನಿಷೇಧಾಜ್ಞೆ ಇರಲಿದೆ. ಮೊದಲು ರಾತ್ರಿ‌ 7ರಿಂದ ಬೆಳಿಗ್ಗೆ 7ರವರೆಗೆ ಮಾತ್ರ ನಿಷೇಧಾಜ್ಞೆ ಇತ್ತು. ರಾಜ್ಯಗಳ ಒತ್ತಡದ ಮೇಲೆ ಹೊಸ ಮಾರ್ಗಸೂಚಿಯಲ್ಲಿ 2 ಗಂಟೆ ಕಾಲ ವಿಸ್ತರಣೆ ಮಾಡಲಾಗುತ್ತೆ ಎಂದು ತಿಳಿದುಬಂದಿದೆ.

  ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮನ್​ ಕಿ ಬಾತ್​ ಭಾಷಣ ಭಾರೀ ಮಹತ್ವ ಪಡೆದುಕೊಂಡಿದೆ. ಹೀಗಾಗಿ ದೇಶದ ಜನತೆ ಇವರ ಭಾಷಣಕ್ಕಾಗಿ ಕಾಯುತ್ತಿದ್ಧಾರೆ.
  First published: