HOME » NEWS » Coronavirus-latest-news » PM NARENDRA MODI TO ADDRESS THE NATION AT 4 PM TODAY GNR

PM Modi Speech: ಇಂದು ಸಂಜೆ 4 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ಇನ್ನೊಂದೆಡೆ ದೇಶದಲ್ಲಿ ಮಾರಕ ಕೊರೋನಾ ವೈರಸ್​ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ಕೇಂದ್ರ ಸರ್ಕಾರ ಅನ್​ಲಾಕ್​​-2 ಮಾರ್ಗಸೂಚಿಗಳನ್ನು ಹೊರಡಿಸಿದೆ. ಇನ್ನೇನು ದೇಶಾದ್ಯಂತ ಎಲ್ಲವನ್ನೂ ಮಾಡಿ ಲಾಕ್​​ಡೌನ್ ಮಾಡಿ ನೂರು ದಿನಗಳು ಸಮೀಪಿಸುತ್ತಿವೆ. ಇದರ ಕುರಿತು ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.


Updated:June 30, 2020, 7:47 AM IST
PM Modi Speech: ಇಂದು ಸಂಜೆ 4 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ  ನರೇಂದ್ರ ಮೋದಿ ಭಾಷಣ
ನರೇಂದ್ರ ಮೋದಿ
  • Share this:
ನವದೆಹಲಿ(ಜೂ.30): ಭದ್ರತಾ ಕಾರಣವೊಡ್ಡಿ ಕೇಂದ್ರ ಸರ್ಕಾರ ಚೀನಾ ಮೂಲದ 59 ಆ್ಯಪ್​ಗಳನ್ನ ನಿಷೇಧಿಸಿದ ಬೆನ್ನಲ್ಲೀಗ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರವನ್ನುದ್ದೇಶಿಸಿ ಇಂದು ಭಾಷಣ ಮಾಡಲಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಪ್ರಧಾನಿ ಕಾರ್ಯಾಲಯ,  ನರೇಂದ್ರ ಮೋದಿಯವರು ಜೂನ್​​​ 30ನೇ ತಾರೀಕಿನಂದು ಸಂಜೆ 4ಕ್ಕೆ ದೇಶದ ಜನರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಇನ್ನು, ಯಾವ ವಿಚಾರದ ಬಗ್ಗೆ ಪ್ರಧಾನಿ ನರೇಂದ್ರ ಭಾಷಣ ಮಾಡಲಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಆದರೆ, ಕೇಂದ್ರ ಸರ್ಕಾರ ಚೀನಾದ 59 ಆ್ಯಪ್​​ಗಳನ್ನು ನಿಷೇಧಿಸಿದ ಮರುದಿನವೇ ಮೋದಿ ಭಾಷಣ ಮಾಡುತ್ತಿರುವುದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.  ಹಲವರು ಚೀನಾ ಆ್ಯಪ್​​ಗಳನ್ನು ನಿಷೇಧಿಸಿದ ಬಗ್ಗೆ ಮೋದಿ ಪ್ರಸ್ತಾಪ ಮಾಡಬಹುದು ಎಂದು ಹೇಳುತ್ತಿದ್ದಾರೆ.

ಇನ್ನೊಂದೆಡೆ ದೇಶದಲ್ಲಿ ಮಾರಕ ಕೊರೋನಾ ವೈರಸ್​ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ಕೇಂದ್ರ ಸರ್ಕಾರ ಅನ್​ಲಾಕ್​​-2 ಮಾರ್ಗಸೂಚಿಗಳನ್ನು ಹೊರಡಿಸಿದೆ. ಇನ್ನೇನು ದೇಶಾದ್ಯಂತ ಎಲ್ಲವನ್ನೂ ಲಾಕ್​​ಡೌನ್ ಮಾಡಿ ನೂರು ದಿನಗಳು ಸಮೀಪಿಸುತ್ತಿವೆ. ಇದರ ಕುರಿತು ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಚೀನೀ ಆ್ಯಪ್​ಗಳ ನಿಷೇಧ ಕ್ರಮ ಹೇಗೆ ಜಾರಿಯಾಗುತ್ತದೆ? ಪ್ಲೇಸ್ಟೋರ್​ನಲ್ಲಿ ಇರುತ್ತವಾ ಈ ಆ್ಯಪ್​ಗಳು?

ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಕೊರೋನಾ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹೊತ್ತಲ್ಲೇ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಮತ್ತು ಸೋಂಕು ತಡೆಗೆ ಜನ ವಹಿಸಬೇಕಾದ ಮುಂಜಾಗೃತೆ ಕುರಿತಂತೆ ಹಿಂದಿನ ಭಾಷಣಗಳಲ್ಲಿ ಮೋದಿ ಪ್ರಸ್ತಾಪಿಸಿದ್ದರು.
First published: June 30, 2020, 7:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading