ಇಂದು ಸಂಜೆ ಬಿಜೆಪಿಯಿಂದ ಕೋವಿಡ್ ಸೇವಾ ಅಭಿಯಾನದ ಅವಲೋಕನ ಸಭೆ

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಿಎಂ ಬಿಎಸ್ವೈ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

news18-kannada
Updated:July 4, 2020, 7:39 AM IST
ಇಂದು ಸಂಜೆ ಬಿಜೆಪಿಯಿಂದ ಕೋವಿಡ್ ಸೇವಾ ಅಭಿಯಾನದ ಅವಲೋಕನ ಸಭೆ
ನರೇಂದ್ರ ಮೋದಿ
  • Share this:
ಬೆಂಗಳೂರು(ಜುಲೈ 04): ಬಿಜೆಪಿಯಿಂದ ಕೋವಿಡ್ ಸೇವಾ ಅಭಿಯಾನದ ಅವಲೋಕನ ಸಭೆ ಇಂದು ನಡೆಯಲಿದೆ. ಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ ವೀಡಿಯೋ ಕಾನ್ಪೆರೆನ್ಸ್ ನಡೆಸಲಿದ್ದಾರೆ. ದೇಶದಲ್ಲಿರುವ ರಾಜ್ಯಗಳ ಬಿಜೆಪಿ ಅಧ್ಯಕ್ಷರು ಹಾಗೂ ಪಕ್ಷದ ಮುಖ್ಯಮಂತ್ರಿಗಳ ಜೊತೆ ಕಾನ್ಪೆರೆನ್ಸ್ ನಡೆಸಿ ಅವರ ಜೊತೆ ಮಾತನಾಡಲಿದ್ದಾರೆ. ಶನಿವಾರ ಸಂಜೆ 4 ಗಂಟೆಗೆ ನಡೆಯಲಿರುವ ಕಾನ್ಪೆರೆನ್ಸ್​ನಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಭಾಗವಹಿಸಲಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಿಎಂ ಬಿಎಸ್​ವೈ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೊವಿಡ್ ಸೇವಾ ಅಭಿಯಾನದ ಅವಲೋಕನ ಸಭೆಯಲ್ಲಿ ಪ್ರಮುಖವಾಗಿ ಕೊವೀಡ್​ನಿಂದ ಉಂಟಾದ ಸಮಸ್ಯೆ ಬಗ್ಗೆ ಚರ್ಚೆ ನಡೆಯಲಿದೆ.

ಇದನ್ನೂ ಓದಿ: ಖಾಸಗಿ ಶಾಲಾ ಶಿಕ್ಷಕರ ಗೋಳು ಕೇಳೋರಿಲ್ಲ; ಕಳೆದ 4 ತಿಂಗಳಿಂದ ಶಿಕ್ಷಕರ ಬದುಕು ದುಸ್ತರ..!

ಈಗಾಗಲೇ ದೇಶದಲ್ಲಿ ಮಹಮಾರಿ ಕೊರೋನಾದಿಂದ ಬಹಳಷ್ಟು ಹಾನಿ ಉಂಟಾಗಿದೆ. ಜೊತೆಗೆ ಜನರು ಕೂಡ ಕೊರೋನಾಗೆ ಬಲಿಯಾಗಿದ್ದಾರೆ. ಜೊತೆಗೆ, ಕೊರೋನಾ ಅಟ್ಟಹಾಸ ಮುಂದುವರೆದಿದ್ದರಿಂದ ಬಹಳಷ್ಟು ಸಮಸ್ಯೆಯಾಗಿದೆ. ಹೀಗಾಗಿ ಕೊರೋನಾದಿಂದ ದೇಶದಲ್ಲಿ ಉಂಟಾಗಿರುವ ಸಮಸ್ಯೆಗಳು ಹಾಗೂ ಕೊರೋನಾ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಪ್ರಮುಖವಾಗಿ ಕೊರೋನಾ ಬಂದ ನಂತರ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳು ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ. ಅಲ್ಲದೆ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಹಾಗೂ ಪರಿಹಾರ ಕ್ರಮಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘೋಷಿಸಿರುವ ಯೋಜನೆಗಳು, ಕೂಲಿ ಕಾರ್ಮಿಕರಿಗೆ ಮಾಡಿರುವ ಪರಿಹಾರ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳಲ್ಲೂ ಕೊರೋನಾ ಚಿಕಿತ್ಸೆ: 73 ಆಸ್ಪತ್ರೆಗಳ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರಇನ್ನು, ಕೊವೀಡ್ ತಡೆಗೆ ಕೇಂದ್ರ ಸರ್ಕಾರ ಮಾಡಿದ ಯೋಜನೆಗಳು, ಪರಿಹಾರ ಕ್ರಮಗಳ ಬಗ್ಗೆ ಜನರಿಗೆ ತಿಳಿಸುವ ಕುರಿತು ಯಾವೆಲ್ಲಾ ಕ್ರಮ ವಹಿಸಬೇಕು ಎಂಬುದರ ಬಗ್ಗೆ ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ಕೊಡುವ ನಿರೀಕ್ಷೆ ಇದೆ.
Published by: Vijayasarthy SN
First published: July 4, 2020, 7:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading