Narendra Modi Speech - ಮೇ 3ರ ನಂತರ ಮುಂದೇನು? ಈ ವಾರಾಂತ್ಯದ ಪ್ರಧಾನಿ ಭಾಷಣದಲ್ಲಿ ನಿರ್ಧಾರ ಪ್ರಕಟ

Prime Minister Modi to Address Nation - ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಲಾಕ್ ಡೌನ್ ಸಡಿಲಿಕೆ ಬಗ್ಗೆ ಪ್ರಧಾನಿ ಮೋದಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

  • News18
  • Last Updated :
  • Share this:
    ನವದೆಹಲಿ(ಏ. 27): ಎರಡನೇ ಹಂತರ ದೇಶವ್ಯಾಪಿ ಲಾಕ್​ಡೌನ್ ಮೇ 3ರಂದು ಅಂತ್ಯಗೊಳ್ಳಲಿದೆ. ಆ ಬಳಿಕ ಸಹಜ ಜೀವನ ಮರಳುವುದು ಅಸಾಧ್ಯ. ಕೆಲ ಸಡಿಲಿಕೆಗಳೊಂದಿಗೆ ಲಾಕ್ ಡೌನ್ ಮುಂದುವರಿಯುವುದು ಖಚಿತವೆನ್ನಲಾಗಿದೆ. ಆದರೆ ಏನೇನು ಸಡಿಲಿಕೆಗಳಿರಲಿವೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಈ ವಾರಾಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಲಾಕ್ ಡೌನ್ ಸಡಿಲಿಕೆ ಸಂಬಂಧ ನಿರ್ಧಾರ ಪ್ರಕಟಿಸಲಿದ್ದಾರೆ. ಕೊರೊನಾ ಬಿಕ್ಕಟ್ಟು ಬಂದಾಗಿನಿಂದ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾಡಲಿರುವ ನಾಲ್ಕನೇ ಭಾಷಣ ಅದಾಗಿರಲಿದೆ.

    ಇವತ್ತು, ಪ್ರಧಾನಿ ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸುತ್ತಿರುವ ವಿಡಿಯೋ ಕಾನ್ಫೆರೆನ್ಸಿಂಗ್​ನಲ್ಲಿ ಈ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಲಿದ್ದಾರೆ. ಎಲ್ಲರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಲಾಕ್ ಡೌನ್ ಸಡಿಲಿಕೆ ಬಗ್ಗೆ ಪ್ರಧಾನಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ಧಾರೆ.

    ಇದನ್ನೂ ಓದಿ: Covid-19: ಕೊರೋನಾ ನಿಯಂತ್ರಿಸಲು ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ನೀಡಿದ ಸಲಹೆಯೇನು ಗೊತ್ತಾ?

    ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ವಿಡಿಯೋ ಸಂವಾದ ನಡೆಸುತ್ತಿರುವುದೂ ಕೂಡ ಇದು ನಾಲ್ಕನೇ ಬಾರಿ. ಕಳೆದ ಬಾರಿ ನಡೆದ ಕಾನ್ಫೆರೆನ್ಸ್​ನಲ್ಲಿ ಬಹುತೇಕ ಎಲ್ಲಾ ಮುಖ್ಯಮಂತ್ರಿಗಳು ಲಾಕ್ ಡೌನ್ ಅವಧಿಯನ್ನು ವಿಸ್ತರಿಸಬೇಕೆಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಕೊರೋನಾ ವೈರಸ್ ವಿರುದ್ಧ ಜನಜಾಗೃತಿ ಮೂಡಿಸಲು ಪ್ರಧಾನಿ ಮೋದಿ ಅವರು ಮಾರ್ಚ್ 22ರಂದು ಜನತಾ ಕರ್ಫ್ಯೂ ಘೋಷಿಸಿದ್ದರು. ಅದು ಯಶಸ್ವಿಯಾಯಿತು. ಬಳಿಕ ಮಾರ್ಚ್ 25ರಿಂದ ಏಪ್ರಿಲ್ 14ರವರೆಗೂ 21 ದಿನಗಳ ಮೊದಲ ಹಂತದ ದೇಶವ್ಯಾಪಿ ಲಾಕ್ ಡೌನ್ ಘೋಷಿಸಿದರು. ಕೊರೋನಾ ವೈರಸ್ ಸೋಂಕು ಹರಡುವುದು ನಿಲ್ಲದ್ದರಿಂದ ಎರಡನೇ ಹಂತರ ಲಾಕ್ ಡೌನ್ ಪ್ರಕಟಿಸಲಾಯಿತು. ಮೇ 3ರವರೆಗೆ ಲಾಕ್ ಡೌನ್ ವಿಸ್ತರಿಸಲಾಯಿತು. ಈಗಲೂ ಸೋಂಕು ಹರಡುವುದು ನಿಂತಿಲ್ಲ. ಲಾಕ್ ಡೌನ್ ಅನ್ನು ಸಂಪೂರ್ಣ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ. ಆರ್ಥಿಕತೆ ಸಂಪೂರ್ಣ ಪಾತಾಳ ಕಚ್ಚದಂತೆ ಎಚ್ಚರ ವಹಿಸಲು ಕೆಲ ಉದ್ಯಮಗಳ ಚಟುವಟಿಕೆಗೆ ಸರ್ಕಾರ ಅನುಮತಿ ಕೊಡುವ ನಿರೀಕ್ಷೆ ಇದೆ.

    First published: