ಕರ್ನಾಟಕ ಸೇರಿ ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಪಿಎಂ ನರೇಂದ್ರ ಮೋದಿ ಸಭೆ

ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ದೆಹಲಿ ಮತ್ತು ಪಂಜಾಬ್ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಸಭೆ ನಡೆಸಲಿದ್ದು, ಕೊರೋನಾ ನಿಯಂತ್ರಣಕ್ಕೆ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

  • News18
  • Last Updated :
  • Share this:
    ನವದೆಹಲಿ(ಸೆ. 23): ನಾಲ್ಕನೇ  ಹಂತದ ಅಲ್​ಲಾಕ್ ಅಂತ್ಯಗೊಳ್ಳುತ್ತಿದೆ. ಸೆ. 30ರ ನಂತರದ ಐದನೇ ಹಂತದ ಲಾಕ್​ಡೌನ್ ಸಡಿಲಿಕೆ ಹೇಗಿರುತ್ತದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಸೇರಿದಂತೆ ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಸಭೆ ನಡೆಸುತ್ತಿದ್ದಾರೆ. ಕರ್ನಾಟಕ ಅಲ್ಲದೆ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ದೆಹಲಿ ಮತ್ತು ಪಂಜಾಬ್ ರಾಜ್ಯಗಳ ಸಿಎಂಗಳು ಆನ್​ಲೈನ್​ನಲ್ಲಿ ನಡೆಯುವ ಈ ಸಭೆಯಲ್ಲಿ ಪ್ರಧಾನಿ ಜೊತೆ ಸಂವಾದ ನಡೆಸಲಿದ್ದಾರೆ. ದೇಶದಲ್ಲಿ ಕೊರೋನಾ ಪ್ರಕರಣಗಳು ಅತಿ ಹೆಚ್ಚು ಇರುವುದು ಈ ಏಳು ರಾಜ್ಯಗಳಲ್ಲೇ. ದೇಶದ ಶೇ. 63ರಷ್ಟು ಪ್ರಕರಣಗಳು ಈ ಏಳು ರಾಜ್ಯಗಳಲ್ಲೇ ಇವೆ. ಈ ಹಿನ್ನೆಲೆಯಲ್ಲಿ ಪ್ರಧಾನಿಗಳು ಈ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ವಾಸ್ತವ ಪರಿಸ್ಥಿತಿ ಹಾಗೂ ಸಹಾಯ ಅಗತ್ಯತೆ ಬಗ್ಗೆ ವಿಚಾರಿಸುವ ಸಾಧ್ಯತೆ ಇದೆ.

    ಕೊರೋನಾ ನಿಯಂತ್ರಣದಲ್ಲಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ವಿವಿಧ ಸ್ತರಗಳಲ್ಲಿ ಸಹಕಾರ ನೀಡುತ್ತಾ ಬಂದಿದೆ. ಅಗತ್ಯ ಇರುವ ರಾಜ್ಯಗಳಿಗೆ ತನ್ನ ತಂಡಗಳನ್ನ ಕಳುಹಿಸಿ ನೆರವು ಒದಗಿಸುತ್ತಿದೆ. ರೋಗ ನಿಯಂತ್ರಣ, ಪರೀಕ್ಷೆ, ವೈದ್ಯಕೀಯ ನಿರ್ವಹಣೆ ಇತ್ಯಾದಿ ವಿಚಾರಗಳಲ್ಲಿ ರಾಜ್ಯಗಳಿಗೆ ಕೇಂದ್ರ ಸಹಾಯ ಮಾಡುತ್ತಿದೆ. ಜಮ್ಮು-ಕಾಶ್ಮೀರ ರಾಜ್ಯಕ್ಕೆ ಇತ್ತೀಚೆಗೆ ಕೇಂದ್ರದ ಒಂದು ತಂಡ ಹೋಗಿದೆ. ದೆಹಲಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ಜಂಟಿಯಾಗಿ ಕೊರೋನಾ ಪರಿಸ್ಥಿತಿ ನಿಭಾಯಿಸುತ್ತಿವೆ. ಈಗ ಕೊರೋನಾ ಅತಿ ಹೆಚ್ಚು ಇರುವ ಏಳು ರಾಜ್ಯಗಳಲ್ಲಿ ಮುಂದೆ ಯಾವ ಕಾರ್ಯತಂತ್ರ ಅನುಸರಿಸಬಹುದು, ಯಾವ್ಯಾವ ರೀತಿಯ ನೆರವಿನ ಅಗತ್ಯ ಇದೆ ಎಂಬುದನ್ನು ಪ್ರಧಾನಿಗಳು ಇಂದು ಸಮಾಲೋಚಿಸಲಿದ್ದಾರೆ.

    ಇದನ್ನೂ ಓದಿ: Covid-19 India: ಭಾರತದಲ್ಲಿ 56 ಲಕ್ಷ ದಾಟಿದ ಕೊರೋನಾ‌ ಸೋಂಕಿತರ ಸಂಖ್ಯೆ

    ದೇಶದಲ್ಲಿ ಇಲ್ಲಿಯವರೆಗೆ ದಾಖಲಾಗಿರುವ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 56 ಲಕ್ಷ ದಾಟಿ ಹೋಗಿದೆ. ಸಾವಿನ ಸಂಖ್ಯೆ 90 ಸಾವಿರ ಗಡಿ ದಾಟಿದೆ. ಆದರೆ, ಅದೃಷ್ಟಕ್ಕೆ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿಯವರೆಗೆ 45 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್​ನಿಂದ ಚೇತರಿಸಿಕೊಂಡಿರುವುದು ಕೇಂದ್ರ ಆರೋಗ್ಯ ಇಲಾಖೆ ನೀಡಿದ ಮಾಹಿತಿಯಿಂದ ತಿಳಿದುಬರುತ್ತದೆ. ಈಗ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 9.68 ಲಕ್ಷ ಇದೆ. ಇಲ್ಲಿ ಸಕ್ರಿಯ ಪ್ರಕರಣಗಳೆಂದರೆ ಈಗ ಸೋಂಕು ಹೊಂದಿರುವ ಪ್ರಕರಣಗಳಾಗಿವೆ.

    ಸಕ್ರಿಯ ಪ್ರಕರಣಗಳು ಹೆಚ್ಚಿರುವ ರಾಜ್ಯಗಳು:
    1) ಮಹಾರಾಷ್ಟ್ರ 2,72,809
    2) ಕರ್ನಾಟಕ 93,172
    3) ಆಂಧ್ರ ಪ್ರದೇಶ 71,465
    4) ಉತ್ತರ ಪ್ರದೇಶ 63,148
    5) ತಮಿಳುನಾಡು 46,350
    6) ಕೇರಳ 40,453
    7) ಒಡಿಶಾ 34,377
    8) ದೆಹಲಿ 31,623
    9) ತೆಲಂಗಾಣ 29,873
    10) ಅಸ್ಸಾಮ್ 29,857
    11) ಪಶ್ಚಿಮ ಬಂಗಾಳ 24,971
    12) ಮಧ್ಯ ಪ್ರದೇಶ 22,646
    13) ಜಮ್ಮು ಕಾಶ್ಮೀರ 21,485
    14) ಪಂಜಾಬ್ 21,288

    ಇದನ್ನೂ ಓದಿ: Tata Group - ಟಾಟಾಗೆ ನಾವು ವಿದಾಯ ಹೇಳುವ ಸಮಯ ಬಂದಿದೆ: ಮಿಸ್ತ್ರಿ ಕುಟುಂಬ

    ಇನ್ನು, ಜಾಗತಿಕವಾಗಿ ಭಾರತ ಎರಡನೇ ಸ್ಥಾನದಲ್ಲಿದೆ. ಅಮೆರಿಕ, ಭಾರತ ಮತ್ತು ಬ್ರೆಜಿಲ್ ಈ ಮೂರು ದೇಶಗಳಲ್ಲಿ ಬಹುತೇಕ ಪ್ರಕರಣಗಳು ಇವೆ. ಅಮೆರಿಕದಲ್ಲಿ ಸಕ್ರಿಯ ಪ್ರಕರಣಗಳೇ ಈಗ 25 ಲಕ್ಷ ಇವೆ. ಬ್ರೆಜಿಲ್​ನಲ್ಲಿ 5.12 ಲಕ್ಷ ಆ್ಯಕ್ಟಿವ್ ಕೇಸ್​ಗಳಿವೆ.
    Published by:Vijayasarthy SN
    First published: