Lockdown 4.0: ಲಾಕ್​ಡೌನ್​ ವಿಸ್ತರಣೆ ಹಿನ್ನೆಲೆ; ಇಂದು ಸಂಜೆ ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ

PM Modi on Lockdown 4.0: ಇನ್ನೆರಡು ದಿನಗಳಲ್ಲಿ ಹೊಸ ಲಾಕ್​ಡೌನ್​ನ ನಿಯಮಾವಳಿಗಳನ್ನು ಘೋಷಿಸಬೇಕಾದ್ದರಿಂದ ಇಂದು ಸಂಜೆ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಲಿದ್ದಾರೆ.

news18-kannada
Updated:May 13, 2020, 6:24 PM IST
Lockdown 4.0: ಲಾಕ್​ಡೌನ್​ ವಿಸ್ತರಣೆ ಹಿನ್ನೆಲೆ; ಇಂದು ಸಂಜೆ ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ
ನರೇಂದ್ರ ಮೋದಿ
  • Share this:
ನವದೆಹಲಿ (ಮೇ 13): ದೇಶದಲ್ಲಿ ಜಾರಿಯಲ್ಲಿರುವ 3ನೇ ಹಂತದ ಲಾಕ್​ಡೌನ್​ ಇನ್ನು 4 ದಿನಗಳಲ್ಲಿ ಅಂತ್ಯವಾಗಲಿದೆ. ಈಗಾಗಲೇ 4ನೇ ಹಂತದ ಲಾಕ್​ಡೌನ್​ ವಿಸ್ತರಣೆ ಬಗ್ಗೆ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಆದರೆ, ಆ ಲಾಕ್​ಡೌನ್​ ನಿಯಮಗಳು ಯಾವ ರೀತಿ ಇರಲಿವೆ ಎಂಬ ಮಾಹಿತಿ ಹೊರಬೀಳಬೇಕಾಗಿದೆ. ಈ ಕುರಿತು ಚರ್ಚಿಸಲು ಇಂದು ಸಂಜೆ 4.30ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಪ್ರಧಾನಿ ಘೋಷಿಸಿರುವ 20 ಲಕ್ಷ ಕೋಟಿ ರೂ. ವಿಶೇಷ ಆರ್ಥಿಕ ಪ್ಯಾಕೇಜ್​ ಕುರಿತು ಮಾಹಿತಿ ನೀಡಲು  ಇಂದು ಸಂಜೆ 4 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ಕರೆದಿದ್ದಾರೆ. ಇದಾದ ಬಳಿಕ ಪ್ರಧಾನಿ ಮೋದಿ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. 

ಭಾರತದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ 4ನೇ ಹಂತದ ಲಾಕ್​ಡೌನ್ ವಿಸ್ತರಣೆ ಮಾಡಲಾಗಿದೆ. 4ನೇ ಹಂತದ ಲಾಕ್ ಡೌನ್ ಹೇಗಿರಲಿವೆ ಎಂದು ತಿಳಿಸುವ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಮೇ 18ರೊಳಗೆ ತಿಳಿಸುವುದಾಗಿ ಮಂಗಳವಾರ ರಾತ್ರಿ ನರೇಂದ್ರ ಮೋದಿ ತಿಳಿಸಿದ್ದರು. ಆದರೆ, ಆ ಮಾರ್ಗಸೂಚಿ ಮೇ15 ರಂದೇ ಹೊರಬೀಳುವ ಸಾಧ್ಯತೆ ಇದೆ. ಕೊರೋನಾ ಸೋಂಕು ಹೆಚ್ಚಾಗಿ ಪತ್ತೆಯಾಗದ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಲಾಕ್​ಡೌನ್​ ನಿಯಮಗಳನ್ನು ಸಡಿಲಗೊಳಿಸುವ ಸಾಧ್ಯತೆಯಿದೆ. ಈಗಾಗಲೇ ಈ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಶುರುಮಾಡಿದೆ.

ಇದನ್ನೂ ಓದಿ: Air India: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಸಿಲುಕಿದವರಿಗೆ ಸಿಹಿಸುದ್ದಿ; ಮೇ 19ರಿಂದ ಏರ್​ ಇಂಡಿಯಾ ವಿಮಾನ ಸಂಚಾರ

ಹೀಗಾಗಿ, ಇನ್ನೆರಡು ದಿನಗಳಲ್ಲಿ ಹೊಸ ಲಾಕ್​ಡೌನ್​ನ ನಿಯಮಾವಳಿಗಳನ್ನು ಘೋಷಿಸಬೇಕಾದ್ದರಿಂದ ಇಂದು ಸಂಜೆ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಲಿದ್ದಾರೆ. ಕೊರೋನಾ ಸೋಂಕು ಹರಡುವಿಕೆ ನಿಯಂತ್ರಿಸುವ ದೃಷ್ಟಿಯಿಂದ ಏನಾದರೂ ಸಲಹೆ, ಶಿಫಾರಸುಗಳಿದ್ದರೆ ಮೇ‌ 15ರೊಳಗೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಿ, ಎಲ್ಲಾ ಸಲಹೆಗಳನ್ನು ಆಧರಿಸಿ‌ ಹೊಸ ಮಾರ್ಗಸೂಚಿಗಳನ್ನು ಸಿದ್ದಪಡಿಸಲಾಗುವುದು ಎಂದು ಪ್ರಧಾನಿ ಮೋದಿ ಆಯಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಹೇಳಿದ್ದರು. ಅದರ ಅನ್ವಯ ಕೇಂದ್ರ ಗೃಹ ಇಲಾಖೆ ಈಗ ಮೇ 15ರವರೆಗೆ ರಾಜ್ಯಗಳಿಂದ ಸಲಹೆಗಳು ಬರಬಹುದು ಎಂದು ಕಾಯುತ್ತಿದೆ.

ಹೊಸ ಮಾರ್ಗಸೂಚಿಯಲ್ಲಿ ಅಗತ್ಯ ಬಿದ್ದರೆ ನೀವೇ ಕಠಿಣ ನಿಯಮ ರೂಪಿಸಿಕೊಳ್ಳಿ ಎಂದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡುವ ಸಾಧ್ಯತೆಯೂ ಇರಲಿದೆ‌. ಹಸಿರು, ಕಿತ್ತಳೆ ಮತ್ತು ಕೆಂಪು ವಲಯಗಳನ್ನು ಗುರುತಿಸುವ ವಿಷಯವನ್ನೂ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬಿಡುವ ಸಾಧ್ಯತೆ ಕೂಡ ಹೆಚ್ಚಾಗಿದೆ.
First published: May 13, 2020, 3:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading