HOME » NEWS » Coronavirus-latest-news » PM NARENDRA MODI ADDRESS NATION AT 10 AM ON APRIL 14TH TOMORROW GNR

ಕೊರೋನಾ ಲಾಕ್​​ಡೌನ್ ವಿಸ್ತರಣೆ​​​: ಏ.14ರಂದು ಬೆಳಿಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಭಾಷಣ

ಪ್ರಧಾನಿ ನರೇಂದ್ರ ಮೋದಿಯವರು ಸೂಚನೆ ನೀಡಿದ ಬೆನ್ನಲ್ಲೇ ಒರಿಸ್ಸಾ, ಪಂಜಾಬ್​​​, ಮಹಾರಾಷ್ಟ್ರ, ಈಗ ಪಶ್ಚಿಮ ಬಂಗಾಳ ಸರ್ಕಾರವೂ ಲಾಕ್​​ಡೌನ್​​​ ವಿಸ್ತರಿಸಿ ಆದೇಶಿಸಿದೆ. ಇದಾದ ಕೆಲ ಹೊತ್ತಲ್ಲೇ ಸಿಎಂ ಬಿ.ಎಸ್​ ಯಡಿಯೂರಪ್ಪ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್​​ಡೌನ್​​ ವಿಸ್ತರಿಸಿ ಸುತ್ತೋಲೆ ಹೊರಡಿಸಿದ್ದಾರೆ.

Updated:April 13, 2020, 2:50 PM IST
ಕೊರೋನಾ ಲಾಕ್​​ಡೌನ್ ವಿಸ್ತರಣೆ​​​: ಏ.14ರಂದು ಬೆಳಿಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಭಾಷಣ
ಪ್ರಧಾನಿ ನರೇಂದ್ರ ಮೋದಿ.
  • Share this:
ನವದೆಹಲಿ(ಏ.13): ಕೊರೋನಾ ವೈರಸ್​​ ವಿರುದ್ಧ ಹೋರಾಡುವ ಕುರಿತಂತೆ ಏಪ್ರಿಲ್​​​​​ 14ನೇ ತಾರೀಕು ಬೆಳಿಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಲಿದ್ದಾರೆ. ಭಾರದಲ್ಲಿ ಲಾಕ್​​​ಡೌನ್​​​ ಅವಧಿಯನ್ನು ವಿಸ್ತರಿಸುವ ಮತ್ತು ಕೇಂದ್ರ ಸರ್ಕಾರ ಕೋವಿಡ್​​-19 ತಡೆಗೆ ತೆಗೆದುಕೊಳ್ಳಲಿರುವ ಮುಂದಿನ ಕ್ರಮಗಳ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ.

ಇತ್ತೀಚೆಗೆ ಕೊರೋನಾ ವಿರುದ್ಧ ಹೋರಾಡಲು ಜಾರಿ ಮಾಡಲಾಗಿದ್ದ 21 ದಿನಗಳ ಲಾಕ್​​ಡೌನ್​ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿರು. ಈ ವಿಡಿಯೋ ಸಂವಾದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ, ತೆಲಂಗಾಣ ಸಿಎಂ ಕೆಸಿಆರ್​​, ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್​​ ಮೋಹನ್​​ ರೆಡ್ಡಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಈ ಸಂವಾದದ ವೇಳೆ ಮುಖ್ಯಮಂತ್ರಿಗಳೊಂದಿಗೆ ಮಹತ್ವದ ವಿಚಾರಗಳನ್ನು ಚರ್ಚಿಸಿದು. ಜತೆಗೆ ಕೊರೋನಾ ವಿರುದ್ಧದ ಹೋರಾಟ ಮಾಡಲು ನಾವು ಲಾಕ್​​ಡೌನ್​​ ಮುಂದುವರಿಸಲೇಬೇಕು ಎಂದು ಸೂಚನೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಸೂಚನೆ ನೀಡಿದ ಬೆನ್ನಲ್ಲೇ ಒರಿಸ್ಸಾ, ಪಂಜಾಬ್​​​, ಮಹಾರಾಷ್ಟ್ರ, ಈಗ ಪಶ್ಚಿಮ ಬಂಗಾಳ ಸರ್ಕಾರವೂ ಲಾಕ್​​ಡೌನ್​​​ ವಿಸ್ತರಿಸಿ ಆದೇಶಿಸಿದೆ. ಇದಾದ ಕೆಲ ಹೊತ್ತಲ್ಲೇ ಸಿಎಂ ಬಿ.ಎಸ್​ ಯಡಿಯೂರಪ್ಪ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್​​ಡೌನ್​​ ವಿಸ್ತರಿಸಿ ಸುತ್ತೋಲೆ ಹೊರಡಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಇಂದು 15 ಕೊರೋನಾ ಪ್ರಕರಣ ಪತ್ತೆ; ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆ

ಕರ್ನಾಟಕದಲ್ಲಿ ಲಾಕ್​​ಡೌನ್​​ ಮುಂದುವರಿಸುವ ಕುರಿತಂತೆ ಸುದ್ದಿಗೋಷ್ಠಿ ನಡೆಸಿದ್ದ ಸಿಎಂ ಬಿ.ಎಸ್​ ಯಡಿಯೂರಪ್ಪ, ಕೊರೋನಾ ತಡೆಗೆ ಕರ್ನಾಟದಲ್ಲಿ ಲಾಕ್​​ಡೌನ್ ಏಪ್ರಿಲ್​​ 30ರವರೆಗೂ ಮುಂದುವರಿಸುವುದು ಅನಿವಾರ್ಯ. ಹಾಗಾಗಿ ಜನ ಸರ್ಕಾರದ ಈ ನಿರ್ಧಾರಕ್ಕೆ ಸಹಕರಿಸಬೇಕು ಎಂದು ಹೇಳಿದ್ದರು.
First published: April 13, 2020, 2:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories