ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸೋಮವಾರ ಪ್ರಧಾನಿ ಮೋದಿ ವಿಡಿಯೋ ಸಂವಾದ

ಮೇ 3ರಂದು ಎರಡನೇ ಹಂತದ ಲಾಕ್​ಡೌನ್ ಮುಕ್ತಾಯವಾಗಲಿದೆ. ಲಾಕ್​ಡೌನ್ ಕೊನೆಯ ವಾರ ನಿರ್ಣಾಯಕವಾಗಿರುವ ಕಾರಣ ಸೋಮವಾರ ವಿಡಿಯೋ ಕಾನ್ಪರೆನ್ಸ್ ‌ಮೂಲಕ ಪ್ರಧಾನಿ ಮೋದಿ ಅವರು ಆಯಾ ರಾಜ್ಯಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

news18-kannada
Updated:April 22, 2020, 5:20 PM IST
ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸೋಮವಾರ ಪ್ರಧಾನಿ ಮೋದಿ ವಿಡಿಯೋ ಸಂವಾದ
ಪ್ರಧಾನಿ ನರೇಂದ್ರ ಮೋದಿ
  • Share this:
ಬೆಂಗಳೂರು: ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಲಾದ ಕ್ರಮಗಳು ಹಾಗೂ ಆಯಾ ರಾಜ್ಯಗಳ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ಮೋದಿ ಅವರು ಸೋಮವಾರ (ಏ.27) ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮತ್ತೊಮ್ಮೆ ವಿಡಿಯೋ ಸಂವಾದ ನಡೆಸಲಿದ್ದಾರೆ.

ಸೋಮವಾರ ಪ್ರಧಾನಿ ಮೋದಿ ಅವರು ವಿಡಿಯೋ ಸಂವಾದ ನಡೆಸುವ ಸಂಬಂಧ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಧಾನಿ ಮೋದಿ ಕಚೇರಿಯಿಂದ ಮಾಹಿತಿ ರವಾನಿಸಲಾಗಿದೆ.

ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಿಎಂ ಯಡಿಯೂರಪ್ಪ , ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ರಾಮುಲು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಗೃಹ ಇಲಾಖೆ ಕಾರ್ಯದರ್ಶಿ, ಆರೋಗ್ಯ ಇಲಾಖೆ ಕಾರ್ಯದರ್ಶಿಗಳು ಹಾಗೂ ಪೊಲೀಸ್ ಮಹಾ ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ.

ಮೇ 3ರಂದು ಎರಡನೇ ಹಂತದ ಲಾಕ್​ಡೌನ್ ಮುಕ್ತಾಯವಾಗಲಿದೆ. ಲಾಕ್​ಡೌನ್ ಕೊನೆಯ ವಾರ ನಿರ್ಣಾಯಕವಾಗಿರುವ ಕಾರಣ ಸೋಮವಾರ ವಿಡಿಯೋ ಕಾನ್ಪರೆನ್ಸ್ ‌ಮೂಲಕ ಪ್ರಧಾನಿ ಮೋದಿ ಅವರು ಆಯಾ ರಾಜ್ಯಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

ಇದನ್ನು ಓದಿ: ಇಂದು ಮಧ್ಯರಾತ್ರಿಯಿಂದಲೇ ಲಾಕ್​​ಡೌನ್‌ ಸಡಿಲಿಕೆ: ಯಾವ ಕ್ಷೇತ್ರಗಳಿಗೆ ವಿನಾಯಿತಿ? ಇಲ್ಲಿದೆ ಡೀಟೆಲ್ಸ್​

ದೇಶದ ಕೊರೋನಾ ಹಾಟ್​ಸ್ಪಾಟ್​ಗಳಲ್ಲಿ ಲಾಕ್​ಡೌನ್ ಮುಂದುವರೆಸುವುದು, ಮತ್ತೆ ಕೆಲವು ಕಡೆ ಲಾಕ್​ಡೌನ್ ಸಡಿಲಿಕೆ ಮಾಡುವುದು ಹಾಗೂ ಕೊರೋನಾ ನಿಯಂತ್ರಣ ವಿಚಾರದಲ್ಲಿ ಆಯಾ ರಾಜ್ಯಗಳ ಕ್ರಮ, ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ಅವರು ಅವಲೋಕನ ನಡೆಸಲಿದ್ದಾರೆ.
First published: April 22, 2020, 5:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading