ನವದೆಹಲಿ: ಇಡೀ ವಿಶ್ವವೇ ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿದೆ. ಹಾಗೆಯೇ ಭಾರತ ಕೂಡ ಕೊರೋನಾ ವಿರುದ್ಧ ಹೋರಾಡುತ್ತಿದೆ. ಭಾರತ ಎರಡೇರಡು ಸಂಕಷ್ಟಗಳನ್ನು ಎದುರಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತೀಯ ವಾಣಿಜ್ಯ ಮಂಡಳಿ 95ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕೊರೋನಾ ಜೊತೆಗೆ ಬೇರೆ ಬೇರೆ ಸಂಕಷ್ಟಗಳು ಎದುರಾಗುತ್ತಿವೆ. ಅಗ್ನಿ ಅವಘಡ, ಭೂಕಂಪ, ಚಂಡಮಾರುತಗಳು ಸರದಿಯಾಗಿ ಬರುತ್ತಿವೆ. ಇದೆಲ್ಲದರ ವಿರುದ್ದ ನಾವು ಒಂದಾಗಿ ಹೋರಾಟ ನಡೆಸುತ್ತಿದ್ದೇವೆ. ಸಮಯ ನಮ್ಮನ್ನು ಪರೀಕ್ಷೆ ಮಾಡುತ್ತಿದೆ. ಎಲ್ಲ ಸಂಕಷ್ಟಗಳು ಒಮ್ಮಲೇ ಬರುವ ಮೂಲಕ ನಮ್ಮನ್ನು ಪರೀಕ್ಷಿಸುತ್ತಿದೆ. ಆದರೆ ಇದು ಮುಂದೆ ಒಳ್ಳೆ ಭವಿಷ್ಯವನ್ನು ತಂದುಕೊಡಲಿದೆ. ಈ ಸಂಕಷ್ಟವನ್ನು ಬದಲಾವಣೆಯ ಹಂತವಾಗಿ ಪರಿವರ್ತಿಸಿಕೊಳ್ಳಬೇಕು. ಆತ್ಮ ನಿರ್ಭಾರ್ ಭಾರತ ಮೂಲಕ ಈ ಸಂಕಷ್ಟ ಕಾಲ ದೇಶಕ್ಕೆ ಬದಲಾವಣೆಯ ಘಟ್ಟ ಆಗಬೇಕು ಎಂದು ಕರೆ ನೀಡಿದರು.
ಇದನ್ನು ಓದಿ: Fact Check | ಜೂನ್ 15ರಿಂದ ದೇಶಾದ್ಯಂತ ಮತ್ತೆ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿ ಸುದ್ದಿ ನಿಜವೇ?
ಸರ್ಕಾರ ಹಲವು ಹಂತಗಳಲ್ಲಿ ದೇಶವನ್ನು ಸ್ವಾವಲಂಬಿಯತ್ತ ಸಾಗಿಸುತ್ತಿದೆ. 4-5 ವರ್ಷಗಳಿಂದ ಸ್ವಾವಲಂಬಿ ಸಾಧಿಸಲು ಪ್ರಯತ್ನ ಮಾಡುತ್ತಿದ್ದೇವೆ. ಕೊರೋನಾ ಸಂಕಷ್ಟ ಕಾಲ ಆತ್ಮ ನಿರ್ಭಾರ್ ಭಾರತ್ ಅದಕ್ಕೆ ಹೆಚ್ವು ವೇಗ ನೀಡಿದೆ. ಕುಟುಂಬಗಳಲ್ಲಿ ಮಕ್ಕಳಿಗೆ 20 ವರ್ಷ ಆಗುತ್ತಿದ್ದಂತೆ ಸ್ವಂತ ಕಾಲ ಮೇಲೆ ನಿಲ್ಲಲು ಹೇಳುತ್ತೇವೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಲಹೆ ನೀಡುತ್ತೇವೆ. ಭಾರತವೂ ಸಹ ತನ್ನ ಕಾಲ ಮೇಲೆ ನಿಲ್ಲಬೇಕಿದೆ. ಹೀಗಾಗಿ ಸಾಧ್ಯವಾದಷ್ಟು ಸ್ವಾವಲಂಬಿಯಾಗಬೇಕು. ರಫ್ತು ಮಾಡುವಷ್ಟು ಹಂತಕ್ಕೆ ಬೆಳೆಯಬೇಕು. ಆಗ ಸಣ್ಣ ಸಣ್ಣ ದೇಶಿ ವಸ್ತುಗಳ ಖರೀದಿಯಿಂದ ವ್ಯಾಪಾರಸ್ಥರ ಶ್ರಮವನ್ನು ನಾವು ಗೌರವಿಸದಂತಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ