PM Modi Speech Highlights: ಪ್ರಧಾನಿ ನರೇಂದ್ರ ಮೋದಿ ಭಾಷಣದ ಪ್ರಮುಖಾಂಶಗಳು

PM Modi Speech Today: 21 ನೇ ಶತಮಾನವು ಭಾರತದದ್ದಾಗಿರುತ್ತದೆ ಎಂದು ನಾವು ಕೇಳಿದ್ದೇವೆ. ನಮ್ಮ ಸಂಕಲ್ಪವು ಬಿಕ್ಕಟ್ಟುಗಳಿಗಿಂತ ದೊಡ್ಡದಾಗಿದೆ. ನಾವು ನಮ್ಮನ್ನು ಉಳಿಸಿಕೊಳ್ಳಬೇಕು ಮತ್ತು ನಮ್ಮ ಹೋರಾಟವನ್ನು ಮುಂದುವರಿಸಬೇಕು. ನಾವು ಸೋಲನ್ನು ಸ್ವೀಕರಿಸುವುದಿಲ್ಲ.

ನರೇಂದ್ರ ಮೋದಿ

ನರೇಂದ್ರ ಮೋದಿ

 • Share this:
  ನವದೆಹಲಿ: ಕೊರೋನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಭಾಷಣದ ಪ್ರಮುಖಾಂಶಗಳು.

  • ಇಂದು ಇಡೀ ಜಗತ್ತು ಹಿಂದೆ ಎಂದೂ ಕಾಣದಂತಹ ಬಿಕ್ಕಟ್ಟನ್ನು ಎದುರಿಸುತ್ತಿದೆ.

  • ಭಾರತದಲ್ಲಿ ಕೊರೋನಾ ಕಾಲಿಟ್ಟಾಗ ಎನ್​-95 ಮಾಸ್ಕ್​ ಹಾಗೂ ಪಿಪಿಇ ಕಿಟ್​ಗಳ ಹೆಸರಿತ್ತು. ಈಗ ಪ್ರತಿದಿನ 2 ಲಕ್ಷ ಎನ್-95 ಮಾಸ್ಕ್ 2 ಲಕ್ಷ ಪಿಪಿಇ ಕಿಟ್ ಉತ್ಪಾದಿಸಲಾಗುತ್ತಿದೆ.

  • ಈ ಬಿಕ್ಕಟ್ಟು ಭಾರತಕ್ಕೆ ಒಂದು ಪ್ರಮುಖ ಅವಕಾಶ ತಂದಿದೆ. ಈ ಹೋರಾಟದಲ್ಲಿ ನಾವು ನಿರ್ಣಾಯಕ ಘಟ್ಟದಲ್ಲಿದ್ದೇವೆ. ಸ್ವಾವಲಂಬಿ ಭಾರತವೇ ನಮ್ಮ ಮುಂದಿನ ದಾರಿ. ನಾವು ಕೋವಿಡ್ ನಂತರದ ವಿಶ್ವ ಕ್ರಮಾಂಕದಲ್ಲಿ ಭಾರತವನ್ನು ಶ್ರೇಷ್ಠರನ್ನಾಗಿ ಮಾಡಬೇಕಾಗಿದೆ.

  • 21 ನೇ ಶತಮಾನವು ಭಾರತದದ್ದಾಗಿರುತ್ತದೆ ಎಂದು ನಾವು ಕೇಳಿದ್ದೇವೆ. ನಮ್ಮ ಸಂಕಲ್ಪವು ಬಿಕ್ಕಟ್ಟುಗಳಿಗಿಂತ ದೊಡ್ಡದಾಗಿದೆ. ನಾವು ನಮ್ಮನ್ನು ಉಳಿಸಿಕೊಳ್ಳಬೇಕು ಮತ್ತು ನಮ್ಮ ಹೋರಾಟವನ್ನು ಮುಂದುವರಿಸಬೇಕು. ನಾವು ಸೋಲನ್ನು ಸ್ವೀಕರಿಸುವುದಿಲ್ಲ.

  • ಇಡೀ ಜಗತ್ತು ಸಾವು ಮತ್ತು ಬದುಕಿನೊಂದಿಗೆ ಹೋರಾಡುತ್ತಿದೆ. ಭಾರತದ ಔಷಧ ಹೊಸ ವಿಶ್ವಾಸ, ಭರವಸೆಯನ್ನು ಮೂಡಿಸಿದೆ. ಈ ನಡೆಯಿಂದ ಭಾರತ ಜಗತ್ತಿನಾದ್ಯಂತ ಪ್ರಶಂಸೆಗೆ ಒಳಗಾಗಲಿದೆ. ಇದು ಪ್ರತಿಯೊಬ್ಬ ಭಾರತೀಯನ ಹೆಮ್ಮೆ.

  • ಸ್ವಾವಲಂಬಿ ಭಾರತ ನಿರ್ಮಿಸುವ ಉದ್ದೇಶದಿಂದ ಆರ್ಥಿಕ ಪ್ಯಾಕೇಜ್ ಘೋಷಣೆ.

  • 'ಆತ್ಮಾ ನಿರ್ಭಾರ್ ಭಾರತ್ ಅಭಿಯಾನ'ದ ಆರ್ಥಿಕ ಪ್ಯಾಕೇಜ್ ಭಾರತದ ಜಿಡಿಪಿಯ ಶೇ.10 ರಷ್ಟಿದೆ. ಕೊನೆಯ ಪ್ಯಾಕೇಜ್ ಸೇರಿದಂತೆ ಒಟ್ಟು 20 ಲಕ್ಷ ಕೋಟಿ ರೂ. ಹಂಚಿಕೆ ಮಾಡಲಾಗಿದೆ.

  • ಈ ಪ್ಯಾಕೇಜ್​ ಹಂಚಿಕೆಯ ಮಾಹಿತಿಯನ್ನು ನಾಳೆ ವಿತ್ತ ಸಚಿವರು ನೀಡಲಿದ್ದಾರೆ.

  • ಜಾಗತಿಕ ಮಟ್ಟದಲ್ಲಿ ಭಾರತ ಸ್ಪರ್ಧೆ ಮಾಡಲು ಈ ಪ್ಯಾಕೇಜ್​ ಸಹಾಯಕವಾಗಲಿದೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತ ಮಹತ್ವದ ಪಾತ್ರ ವಹಿಸಲಿದೆ.

  • ಈ ಆರ್ಥಿಕ ಪ್ಯಾಕೇಜ್ ನಮ್ಮ ರೈತರನ್ನು ರಕ್ಷಿಸುವ ಮತ್ತು ಭಾರತೀಯ ಕೈಗಾರಿಕೆಗಳನ್ನು ಬಲಪಡಿಸುವ ಸುಧಾರಣೆಗಳ ಗುರಿಯನ್ನು ಹೊಂದಿದೆ.

  • 4.0 ಲಾಕ್​ಡೌನ್​ ಆಯಾ ರಾಜ್ಯಗಳ ಸಲಹೆ ಮೇರೆಗೆ ನಿರ್ಧಾರವಾಗಲಿದೆ. ಮೇ 18ರೊಳಗೆ ಈ ಬಗ್ಗೆ ಮಾಹಿತಿ ಹೊರಬೀಳಲಿದೆ.


  ಇದನ್ನು ಓದಿ: PM Narendra Modi Speech: ದೇಶದ ಆರ್ಥಿಕ ಸುಧಾರಣೆಗೆ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್; ಮೋದಿ ಘೋಷಣೆ

   
  First published: