PM Modi Speech Highlights: ಭಾರತದ ಸ್ವಾವಲಂಬನೆಗೆ ಐದು ಪಿಲ್ಲರ್​ಗಳನ್ನ ತಿಳಿಸಿದ ಪ್ರಧಾನಿ ಮೋದಿ

ಆರ್ಥಿಕತೆ, ಮೂಲಸೌಕರ್ಯ, ಅಭಿವೃದ್ಧಿ ವ್ಯವಸ್ಥೆ, ಜನಸಂಖ್ಯಾ ಶಕ್ತಿ ಮತ್ತು ಬೇಡಿಕೆ ಇವು ಭಾರತವನ್ನು ಮುನ್ನಡೆಸುವ ಪಿಲ್ಲರ್​ಗಳು ಎಂದು ಮೋದಿ ತಿಳಿಸಿದ್ದಾರೆ.

news18
Updated:May 12, 2020, 9:05 PM IST
PM Modi Speech Highlights: ಭಾರತದ ಸ್ವಾವಲಂಬನೆಗೆ ಐದು ಪಿಲ್ಲರ್​ಗಳನ್ನ ತಿಳಿಸಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ.
  • News18
  • Last Updated: May 12, 2020, 9:05 PM IST
  • Share this:
ನವದೆಹಲಿ(ಮೇ 12): ಕೊರೋನಾ ವೈರಸ್​ನಿಂದ ಉದ್ಭವಿಸಿರುವ ವಿವಿಧ ಹಂತದ ಬಿಕ್ಕಟ್ಟಿನಿಂದ ದೇಶವನ್ನು ಪಾರು ಮಾಡಲು ಪ್ರಧಾನಿ ನರೇಂದ್ರ ಮೋದಿ ಪಣ ತೊಟ್ಟಿದ್ಧಾರೆ. ಕೋವಿಡ್ ಬಿಕ್ಕಟ್ಟಿನ ನಂತರ ದೇಶವನ್ನ ಯಾವ ರೀತಿ ಮುನ್ನಡೆಸಬೇಕೆಂಬುದನ್ನು ತಿಳಿಸಿದ್ದಾರೆ. ನಿನ್ನೆಯಿಂದ ದೇಶದ ವಿವಿಧ ಮುಖ್ಯಮಂತ್ರಿಗಳೊಂದಿಗೆ ನಡೆದ ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಪಾಲ್ಗೊಂಡ ಬಳಿಕ ಇಂದು ಸಂಜೆ ಅವರು ದೇಶವನ್ನುದ್ದೇಶಿಸಿ ಮಾತನಾಡುತ್ತಾ ಅವರು ದೇಶದ ಐದು ಪಿಲ್ಲರ್​ಗಳ ಅಗತ್ಯವನ್ನು ತಿಳಿಸಿದ್ಧಾರೆ.

ಯಾವುದವು ಪಿಲ್ಲರ್​ಗಳು?
1) ಆರ್ಥಿಕತೆ (Economy)

2) ಮೂಲ ಸೌಕರ್ಯ (Infrastructure)
3) ವ್ಯವಸ್ಥೆ (System)
4) ಜನಸಂಖ್ಯಾ ಶಕ್ತಿ (Demography)
5) ಬೇಡಿಕೆ (Demand)ಇದನ್ನೂ ಓದಿ: PM Narendra Modi : 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್, ಲಾಕ್​ಡೌನ್​ ವಿಸ್ತರಣೆ; ಮೋದಿ ಘೋಷಣೆ

ಭಾರತದ ಆರ್ಥಿಕತೆ ಬಹಳ ಶಕ್ತಿಯುತವಾಗಿದ್ದು, ಇಂಥ ಬಿಕ್ಕಟ್ಟಿನಿಂದ ಶೀಘ್ರ ಚೇತರಿಸಿಕೊಳ್ಳುವಷ್ಟು ಸಮರ್ಥವಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಎರಡನೇ ಪಿಲ್ಲರ್ ಬಗ್ಗೆ ಮಾತನಾಡಿದ ಅವರು ಮೂಲಸೌಕರ್ಯ ಆರ್ಥಿಕ ಪ್ರಗತಿಗೆ ಎಷ್ಟು ಮುಖ್ಯ ಎಂದು ತಿಳಿಸಿದ್ದಾರೆ.

ಇನ್ನು, ಮೂರನೇ ಪಿಲ್ಲರ್ ಆಗಿರುವ ಸಿಸ್ಟಂ ಅಂದರೆ 21ನೇ ಶತಮಾನದ ಭಾರತದ ಕನಸನ್ನು ನನಸು ಮಾಡುವ ವ್ಯವಸ್ಥೆ ಇದು. ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಎಂದು ಪ್ರಧಾನಿ ಹೇಳಿದ್ದಾರೆ.

ಡೆಮಾಗ್ರಫಿಯನ್ನು ನಾಲ್ಕನೇ ಪಿಲ್ಲರ್ ಎಂದ ಅವರು, ಭಾರತದ ವೈವಿಧ್ಯಮಯ ಜನಸಂಖ್ಯೆಯೇ ದೇಶದ ಶಕ್ತಿ ಎಂದಿದ್ದಾರೆ.

ಹಾಗೆಯೇ, ಐದನೇ ಪಿಲ್ಲರ್ ಆಗಿರುವ ಬೇಡಿಕೆಯು ಆರ್ಥಿಕ ಬಲವರ್ಧನೆಗೆ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಜೆ 7ಗಂಟೆಗೆ ಭಾಷಣ ಪ್ರಾರಂಭಿಸಿದ ಅವರು ಒಂದು ವೈರಸ್​ನಿಂದ ಇಡೀ ಜಗತ್ತು ಹೈರಾಣಗೊಂಡಿದ್ದು ಈ ಸಂಕಷ್ಟವನ್ನು ಹಿಂದೆಂದೂ ತಾನು ಕಂಡಿರಲಿಲ್ಲ ಮತ್ತು ಕೇಳಿರಲಿಲ್ಲ ಎಂದು ತಿಳಿಸಿದರು.

ಕೋವಿಡ್ ಬಿಕ್ಕಟ್ಟಿನಲ್ಲಿ ಭಾರತ ತೋರಿಸುತ್ತಿರುವ ಸಂಕಲ್ಪದ ಬಗ್ಗೆ ಅವರು ಗರ್ವ ಪಟ್ಟರು. ಬಿಕ್ಕಟ್ಟು ಪ್ರಾರಂಭವಾದಾಗ ಭಾರತದಲ್ಲಿ ಒಂದೇ ಒಂದು ಪಿಪಿಇ ಕಿಟ್ ಉತ್ಪಾದನೆ ಇರಲಿಲ್ಲ. ಎನ್95 ಮಾಸ್ಕ್ ವಿರಳವಾಗಿತ್ತು. ಈಗ 2 ಲಕ್ಷ ಪಿಪಿಇ ಕಿಟ್ ಮತ್ತು 2 ಲಕ್ಷ ಎನ್95 ಮಾಸ್ಕ್ ತಯಾರಿಸುತ್ತಿದ್ದೇವೆ. ಇಡೀ ವಿಶ್ವಕ್ಕೆ ಔಷಧ ನೀಡುತ್ತಿದ್ಧೇವೆ. ಭಾರತದ ಅಭಿವೃದ್ಧಿ ತತ್ವದಲ್ಲಿ ವಸುದೈವ ಕುಟುಂಬ ಎಂಬ ಮಂತ್ರವೂ ಅಡಗಿದೆ ಎಂದು ಅವರು ಹೇಳಿದರು.

ಕೊರೋನಾ ವೈರಸ್​ನ ಬಿಕ್ಕಟ್ಟಿನಿಂದ ಭಾರತ ಹೊರಬಂದೇ ಬರುತ್ತದೆ. ಸಂಕಷ್ಟ ಬಂದಾಗ ಸೋಲಪ್ಪಬಾರದು. ನಮ್ಮ ಹೋರಾಟ ಮುಂದುವರಿಸಬೇಕು. ಗುಜರಾತ್​ನ ಕಚ್ ಪಟ್ಟಣ ಭೀಕರ ಭೂಕಂಪದಿಂದ ತತ್ತರಿಸಿದಾಗ ಅದು ಚೇತರಿಸಿಕೊಳ್ಳಲು ಹಲವು ವರ್ಷಗಳೇ ಬೇಕಾಗಬಹುದು ಎಂದಿದ್ದರು. ಆದರೆ ಬೇಗನೇ ಪುಟಿದೆದ್ದು ನಿಂತಿತು. ಸಂಕಲ್ಪ ತೊಟ್ಟರೆ ಎಲ್ಲವೂ ಸಾಧ್ಯ ಎಂದು ಪ್ರಧಾನಿ ಹುರಿದುಂಬಿಸಿದರು.
First published: May 12, 2020, 8:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading