HOME » NEWS » Coronavirus-latest-news » PM MODI MEETS AMIT SHAH SITHARAMAN TO FINALISE SECOND STIMULUS PACKAGE MAK

ಲಾಕ್‌ಡೌನ್ ಮುಂದುವರಿಕೆ; ದೇಶದ ಆರ್ಥಿಕ ಅಭಿವೃದ್ಧಿಗೆ ಮತ್ತೊಂದು ಪ್ಯಾಕೇಜ್ ಘೋಷಿಸಲಿದ್ದಾರಾ ಪ್ರಧಾನಿ ಮೋದಿ?

ಈ ಹಿಂದೆಯೂ ಸಹ ಕೇಂದ್ರ ಸರ್ಕಾರ ಲಾಕ್‌ಡೌನ್ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಸುಮಾರು 1.7 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡಿತ್ತು. ಅಲ್ಲದೆ, ಸಾಮಾನ್ಯ ಜನರಿಗೆ ಬ್ಯಾಂಕ್ ಸಾಲ ಮರುಪಾವತಿ ಸೇರಿದಂತೆ ಸಾಕಷ್ಟು ವಿಚಾರದಲ್ಲಿ ರಿಯಾಯಿತಿ ನೀಡಿತ್ತು.

MAshok Kumar | news18-kannada
Updated:May 2, 2020, 4:12 PM IST
ಲಾಕ್‌ಡೌನ್ ಮುಂದುವರಿಕೆ; ದೇಶದ ಆರ್ಥಿಕ ಅಭಿವೃದ್ಧಿಗೆ ಮತ್ತೊಂದು ಪ್ಯಾಕೇಜ್ ಘೋಷಿಸಲಿದ್ದಾರಾ ಪ್ರಧಾನಿ ಮೋದಿ?
ಪ್ರಧಾನಿ ನರೇಂದ್ರ ಮೋದಿ
  • Share this:
ನವ ದೆಹಲಿ (ಏಪ್ರಿಲ್ 02); ಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ದೇಶದ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಕುಂಠಿತವಾಗಿದ್ದು, ಈ ಕ್ಷೇತ್ರಗಳ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ ಮತ್ತೊಂದು ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೇರಿದಂತೆ ಪ್ರಮುಖ ಮಂತ್ರಿಗಳೊಂದಿಗೆ ಇಂದು ಸರಣಿ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದಲ್ಲದೆ, ಆರ್ಥಿಕ ಸಚಿವಾಲಯದ ಇತರೆ ಅಧಿಕಾರಗಳು ಮತ್ತು ಬೃಹತ್-ಮದ್ಯಮ ಕೈಗಾರಿಕಾ ಸಚಿವರುಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸರಣಿ ಸಭೆ ನಡೆಸಿದ್ದಾರೆ. ಈ ಸಾಲಿನ ಜಿಎಸ್‌ಟಿ ಹಣ ಸಂಗ್ರಹಣೆ ಕುರಿತ ಮಾಹಿತಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ ಭಾರತದ ಆರ್ಥಿಕತೆಯನ್ನು ಉತ್ತೇಜಿಸಲು ಕೈಗೊಳ್ಳಲಿರುವ ಹಲವಾರು ಉಪಕ್ರಮಗಳ ಕುರಿತು ಮೋದಿ ವಿವರವಾದ ಪ್ರಸ್ತುತಿಯನ್ನು ನೀಡಲಿದ್ದಾರೆ ಎನ್ನಲಾಗಿದೆ.

ಈ ಹಿಂದೆಯೂ ಸಹ ಕೇಂದ್ರ ಸರ್ಕಾರ ಲಾಕ್‌ಡೌನ್ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಸುಮಾರು 1.7 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡಿತ್ತು. ಅಲ್ಲದೆ, ಸಾಮಾನ್ಯ ಜನರಿಗೆ ಬ್ಯಾಂಕ್ ಸಾಲ ಮರುಪಾವತಿ ಸೇರಿದಂತೆ ಸಾಕಷ್ಟು ವಿಚಾರದಲ್ಲಿ ರಿಯಾಯಿತಿ ನೀಡಿತ್ತು. ಆದರೆ, ಲಾಕ್‌ಡೌನ್ ಅವಧಿ ಮತ್ತಷ್ಟು ವಿಸ್ತರಣೆಯಾಗಿರುವ ಕಾರಣ ಕೇಂದ್ರ ಸರ್ಕಾರ ಆರ್ಥಿಕ ಕ್ಷೇತ್ರಗಳ ಅಭಿವೃದ್ಧಿಗೆ ಮತ್ತಷ್ಟು ವಿನಾಯಿತಿ ನೀಡಲು ಮುಂದಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಶಿವಮೊಗ್ಗದಲ್ಲಿ ದಿನವಿಡೀ ವ್ಯಾಪಾರ ವಹಿವಾಟಿಗೆ ಅನುಮತಿ; ಶಿಸ್ತಿನಿಂದ ಇರುವಂತೆ ಈಶ್ವರಪ್ಪ ಎಚ್ಚರಿಕೆ
Youtube Video
First published: May 2, 2020, 4:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories