HOME » NEWS » Coronavirus-latest-news » PM MODI MEET CENTRAL HEALTH MINISTER HARSHVARDHAN TO DISCUSS CORONAVIRUS OUTBREAK SESR

ಕೊರೋನಾ ಭೀತಿ: ವಂದತಿಗಳಿಗೆ ಕಿವಿಗೊಡದಿರಿ ಎಂದು ಜನರಿಗೆ ಪ್ರಧಾನಿ ಮನವಿ; ಕಾಶ್ಮೀರದಲ್ಲಿ ಇಬ್ಬರು ಕೊರೋನಾ ಶಂಕಿತರು

ಕೊರೋನಾ ಭೀತಿ ಹಿನ್ನೆಲೆ ಜಮ್ಮು ಮತ್ತು ಸಂಬಾ ಜಿಲ್ಲೆಯಲ್ಲಿನ ಎಲ್ಲಾ ಶಾಲೆಗಳನ್ನು ಸ್ಥಗಿತಗೊಳಿಸಲಾಗಿದೆ. ಮಾರ್ಚ್​ 31 ರವರೆಗೆ ಶಾಲೆಗಳಿಗೆ ರಜೆ ನೀಡಲಾಗಿದೆ. ಇದರ ಜೊತೆಗೆ ನೌಕರರಿಗೆ ಬಯೋಮೆಟ್ರಿಕ್​ ಹಾಜರಾತಿಯನ್ನು ಕೂಡ ರದ್ದುಗೊಳಿಸಲಾಗಿದೆ

Seema.R | news18-kannada
Updated:March 7, 2020, 12:27 PM IST
ಕೊರೋನಾ ಭೀತಿ: ವಂದತಿಗಳಿಗೆ ಕಿವಿಗೊಡದಿರಿ ಎಂದು ಜನರಿಗೆ ಪ್ರಧಾನಿ ಮನವಿ; ಕಾಶ್ಮೀರದಲ್ಲಿ ಇಬ್ಬರು ಕೊರೋನಾ ಶಂಕಿತರು
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ(ಮಾ. 07): ಕೊರೋನಾ ವೈರಸ್​ ಭೀತಿ ಜಗತ್ತನ್ನು ತಲ್ಲಣಗೊಳಿಸಿದ್ದು, ದೇಶದಲ್ಲಿ ಕೂಡ ಆಂತಕ ಮೂಡಿಸಿದೆ. ಕೊರೋನಾ ಭೀತಿ ದಿನೇ ದಿನೇ ಹೆಚ್ಚುತ್ತಿದ್ದು, ಕೆಲವು ಗುಂಪುಗಳು ವಂದತಿಗಳನ್ನು ಹರಡುತ್ತಿವೆ. ಈ ಕುರಿತು ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದು, ಸುಳ್ಳು ವಂದತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ್ದಾರೆ.

ಈ ಕುರಿತು ಜನೌಷಧಿ ಸಂವಾದದಲ್ಲಿ ಮಾತನಾಡಿರುವ ಅವರು, ಅದು ತಿನ್ನ ಬೇಡಿ. ಇದು ತಿನ್ನಿ ಎಂದು ಜನರು ಸಂದೇಶ ನೀಡುತ್ತಾರೆ. ಇವಕ್ಕೆಲ್ಲಾ ಕಿವಿಗೊಡಬೇಡಿ. ಕೊರೋನಾ ಬಗ್ಗೆ ಆತಂಕಪಡಬೇಕಾಗಿಲ್ಲ. ಮುಂಜಾಗ್ರತೆ ವಹಿಸಿ ಎಂದಿದ್ದಾರೆ.

ದೇಶದಲ್ಲಿ ಈಗಾಗಲೇ 31 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಹಿನ್ನೆಲೆ ಯಾವ ರೀತಿ ರೋಗ ತಡೆಗೆ ಕ್ರಮ ಕೈಗೊಳ್ಳಬಹುದು ಎಂಬ ಕುರಿತು ಚರ್ಚೆ ನಡೆಸಲು ಪ್ರಧಾನಿ ಮೋದಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್​ ಅವರೊಂದಿಗೆ ಇಂದು ಗಂಭೀರ ಚರ್ಚೆ ನಡೆಸಲಿದ್ದಾರೆ. ಈ ಚರ್ಚೆ ವೇಳೆ ಮಾಹಿತಿ ಮತ್ತು ಪ್ರಸರಣ ಇಲಾಖೆ ಅಧಿಕಾರಿಗಳು ಕೂಡ ಭಾಗಿಯಾಗುವ ಸಾಧ್ಯತೆ ಇದೆ.

ಈ ನಡುವೆ ಜಮ್ಮು ಮತ್ತು ಕಾಶ್ಮೀರದ ಇಬ್ಬರಲ್ಲಿ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಇವರ ವೈದ್ಯಕೀಯ ವರದಿಯಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದು, ಅಧಿಕೃತವಾಗಿ ಇನ್ನು ದೃಢೀಕರಣಗೊಂಡಿಲ್ಲ. ಈ ಹಿನ್ನೆಲೆ ಇಬ್ಬರನ್ನು ತೀವ್ರ ನಿಗಾಘಟಕದಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನಡೆಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಎಎನ್​ಐ ವರದಿ ಮಾಡಿದೆ.
ಈ ಹಿನ್ನೆಲೆ ಜಮ್ಮು ಮತ್ತು ಸಂಬಾ ಜಿಲ್ಲೆಯಲ್ಲಿನ ಎಲ್ಲಾ ಶಾಲೆಗಳನ್ನು ಸ್ಥಗಿತಗೊಳಿಸಲಾಗಿದೆ. ಮಾರ್ಚ್​ 31 ರವರೆಗೆ ಶಾಲೆಗಳಿಗೆ ರಜೆ ನೀಡಲಾಗಿದೆ. ಇದರ ಜೊತೆಗೆ ನೌಕರರಿಗೆ ಬಯೋಮೆಟ್ರಿಕ್​ ಹಾಜರಾತಿಯನ್ನು ಕೂಡ ರದ್ದುಗೊಳಿಸಲಾಗಿದೆ.

ಇದನ್ನು ಓದಿ: ಕೊರೋನಾ ಕರಿಛಾಯೆ: ಪ್ರಮುಖ ಪ್ರವಾಸಿ ತಾಣಗಳಲ್ಲಿ ಗಣನೀಯವಾಗಿ ಇಳಿಮುಖವಾದ ಪ್ರವಾಸಿಗರ ಸಂಖ್ಯೆ!

ಬಿಎಸ್​ಎನ್​ಎಲ್​, ಜಿಯೋದಲ್ಲಿ ಅರಿವಿನ ಕಾರ್ಯಕ್ರಮ

ಕೊರೋನಾ ಬಗ್ಗೆ ಜನರಿಗೆ ಅರಿವು ಮೂಡಿಸಲು ಬಿಎಸ್​ಎನ್​ಎಲ್​ ಮತ್ತು ಜಿಯೋ ದೂರಸಂಪರ್ಕ ಸೇವೆಗಳು ಜಾಗೃತಿ ಕಾರ್ಯಕ್ಕೆ ಮುಂದಾಗಿದೆ. ಸೋಂಕಿನ ಕುರಿತು ಜಾಗೃತಿ ಸಂದೇಶಗಳನ್ನು ತಮ್ಮ ಗ್ರಾಹಕರಿಗೆ ನೀಡುತ್ತಿದೆ.
First published: March 7, 2020, 12:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories