HOME » NEWS » Coronavirus-latest-news » PM MODI HAS SPOKEN WITH 4 STATE CHIEF MINISTERS ON COVID SITUATIONS SESR

ಕೋವಿಡ್​ ಕಳವಳ; ಸೋಂಕಿನ​ ಪರಿಸ್ಥಿತಿ ಕುರಿತು ನಾಲ್ಕು ರಾಜ್ಯಗಳ ಸಿಎಂಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ

ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡಿದ ಅವರು ರಾಜ್ಯಗಳಲ್ಲಿನ ಕೋವಿಡ್​ ಪರಿಸ್ಥಿತಿಯನ್ನು ಪರಾಮರ್ಶೆ ಮಾಡಿದ್ದಾರೆ.

news18-kannada
Updated:May 8, 2021, 3:50 PM IST
ಕೋವಿಡ್​ ಕಳವಳ; ಸೋಂಕಿನ​ ಪರಿಸ್ಥಿತಿ ಕುರಿತು ನಾಲ್ಕು ರಾಜ್ಯಗಳ ಸಿಎಂಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ
ನರೇಂದ್ರ ಮೋದಿ
  • Share this:
ನವದೆಹಲಿ (ಮೇ. 8): ಮೊದಲ ಅಲೆ ಕೊರೋನಾ ಸೋಂಕನ್ನು ಎದುರಿಸಿ ಯಶಸ್ವಿಯಾಗಿದ್ದ ಭಾರತ ಎರಡನೇ ಅಲೆ ಸೋಂಕು ನಿಯಂತ್ರಣವದಲ್ಲಿ ಎಡವಿದೆ. ದೇಶದಲ್ಲಿ ಸೋಂಕು ಹರಡುವಿಕೆ ಮೀತಿ ಮೀರಿದ್ದು, ದಿನವೊಂದಕ್ಕೆ 4 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿದೆ. ಕಳೆದ ಬಾರಿ ಸೋಂಕು ನಿಯಂತ್ರಣಕ್ಕೆ ದೇಶವಿಡೀ ಲಾಕ್​ಡೌನ್​ ಘೋಷಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಈ ಬಾರಿ ಸೋಂಕು ನಿಯಂತ್ರಣದ ಜವಾಬ್ದಾರಿಯನ್ನು ಆಯಾ ರಾಜ್ಯಗಳಿಗೆ ವಹಿಸಿದ್ದಾರೆ. ಈ ನಡುವೆ ಕೆಲ ರಾಜ್ಯಗಳಲ್ಲಿ ಸೋಂಕು ನಿಯಂತ್ರಣ ಮೀರಿ ಹರಡುತ್ತಿರುದ್ದು, ಸಾಕಷ್ಟು ಆತಂಕ ತಂದಿದೆ. ಇದೇ ಹಿನ್ನಲೆ ಸೋಂಕು ಹೆಚ್ಚಳಗೊಂಡಿರುವ ನಾಲ್ಕು ರಾಜ್ಯಗಳ ಕುರಿತು ಇಂದು ಪ್ರಧಾನಿ ಮೋದಿ ಚರ್ಚೆ ನಡೆಸಿದ್ದಾರೆ. ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡಿದ ಅವರು ರಾಜ್ಯಗಳಲ್ಲಿನ ಕೋವಿಡ್​ ಪರಿಸ್ಥಿತಿಯನ್ನು ಪರಾಮರ್ಶೆ ಮಾಡಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ, ತಮಿಳುನಾಡು ನೂತನ ಸಿಎಂ ಎಂ. ಕೆ ಸ್ಟಾಲಿನ್​, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌವ್ಹಣ್​ ಮತ್ತು ಹಿಮಾಚಲ್​ ಪ್ರದೇಶ ಸಿಎಂ ಜೈ ರಾಮ್​ ಠಾಕೂರ್​ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿ ಕೋವಿಡ್​ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದಾರೆ.

ಕಳೆದ ಡಿಸೆಂಬರ್​ನಲ್ಲಿ ದೇಶದಲ್ಲಿಯೇ ಅತಿಹೆಚ್ಚು ಸೋಂಕಿಗೆ ತುತ್ತಾಗಿದ್ದ ಮೊದಲ ರಾಜ್ಯ ಮಹಾರಾಷ್ಟ್ರ. ವಾಣಿಜ್ಯ ನಗರಿಯಲ್ಲಿ ಸೋಂಕು ಮಿತಿ ಮೀರಿದ ಹಿನ್ನಲೆ ರಾಜ್ಯದಲ್ಲಿ ಲಾಕ್​ಡೌನ್​ನಂತಹ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಉದ್ಧವ್​ ಠಾಕ್ರೆ ಮುಂದಾಗಿದ್ದರು. ಅಲ್ಲಿನ ರಾಜ್ಯ ಸರ್ಕಾರ ಕೈ ಗೊಂಡ ಕ್ರಮದಿಂದಾಗಿ ಅಂಕೆ ಮೀರಿದ್ದ ಸೋಂಕು ಈಗ ನಿಯಂತ್ರಣಕ್ಕೆ ಬಂದಿದೆ. ಆದರೆ, ರಾಜ್ಯದಲ್ಲಿ ಹೊಸ ಸೋಂಕಿನ ಪ್ರಕರತಣ ಪತ್ತೆಯಾಗುವ ಬಗ್ಗೆ ಕೇಂದ್ರ ಸಚಿವರು ತಿಳಿಸಿದ್ದರು. ಈ ಹಿನ್ನಲೆ ಈ ಕುರಿತು ಚರ್ಚೆ ನಡೆಸಲಾಗಿದೆ. ಇದರ ಜೊತೆಗೆ ಕೋವಿಡ್​ ಲಸಿಕೆಗಾಗಿ ತಮ್ಮದೇ ಆದ ಹೊಸ ಆ್ಯಪ್​ ಅನ್ನು ಅಭಿವೃದ್ಧಿಪಡಿಸುವ ಬಗ್ಗೆ ಠಾಕ್ರೆ ಕೇಂದ್ರಕ್ಕೆ ಪತ್ರ ಬರೆದಿದ್ದು, ಈ ಬಗ್ಗೆ ಕೂಡ ಮಾತುಕತೆ ನಡೆದಿದೆ. ಮಹಾರಾಷ್ಟ್ರದಲ್ಲಿ ಶುಕ್ರವಾರ 55 .022 ಸಾವಿರ ಹೊಸ ಪ್ರಕರಣಗಳು ದಾಖಲಾಗಿದೆ

ಇದನ್ನು ಓದಿ: ಬೆಡ್​ಗಾಗಿ ಸಿಎಂ ಬಳಿಯೇ ಆಗಮಿಸುತ್ತಿರುವ ಸೋಂಕಿತರು; ಮುಖ್ಯಮಂತ್ರಿ ನಿವಾಸದ ರಸ್ತೆಯೇ ಬಂದ್​​

ಮಧ್ಯಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ಕುರಿತು ಮಧ್ಯ ಪ್ರದೇಶ ಸಿಎಂ ಕಾರ್ಯಕ್ಕೆ ಇದೇ ವೇಳೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸೋಂಕಿನ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡ ಕರ್ಫ್ಯೂ ಕುರಿತು ಚರ್ಚೆ ನಡೆಸಿದರು. ಈ ವೇಳೆ ರಾಜ್ಯಕ್ಕೆ ಬೇಕಾದ ಸಹಾಯದ ಕುರಿತು ಕೇಂದ್ರ ಭರವಸೆ ನೀಡಿದೆ.

ಹಿಮಾಚಲ ಪ್ರದೇಶದಲ್ಲಿ ಆಕ್ಸಿಜನ್​ ಪೂರೈಕೆ ಮತ್ತು ಲಸಿಕೆ ವಿತರಣೆ ಕಾರ್ಯದ ಕುರಿತು ಪ್ರಧಾನಿ ಮೋದಿ ಮಾಹಿತಿ ಪಡೆದರು. ಸೋಂಕಿನ ವಿರುದ್ಧದ ಹೋರಾಟದಲ್ಲಿ ರಾಜ್ಯಕ್ಕೆ ಬೇಕಾದ ನೆರವನ್ನು ನೀಡುವುದಾಗಿ ಪ್ರಧಾನಿ ಮೋದಿ ಆಶ್ವಾಸನೆ ನೀಡಿದ್ದು, ಈ ಕುರಿತು ಟ್ವೀಟ್​ ಮಾಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಶುಕ್ರವಾರ 4,177 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ ಸೋಂಕಿಗೆ 56 ಮಂದಿ ಸಾವನ್ನಪ್ಪಿದ್ದಾರೆ.

ತಮಿಳುನಾಡಿನಲ್ಲಿ ಸೋಂಕು ನಿಯಂತ್ರಣಕ್ಕೆ ಮುಂದಾಗಿರುವ ನೂತನ ಡಿಎಂಕೆ ಸರ್ಕಾರ ಕೂಡ ಮೇ 10 ರಿಂದ 14 ದಿನ ಲಾಕ್​ಡೌನ್​ ಘೋಷಣೆ ಮಾಡಿದೆ. ಸೋಂಕು ನಿಯಂತ್ರಣಕ್ಕೆ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್​ ನೇತೃತ್ವದ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಕೂಡ ಪ್ರಧಾನಿ ಮೋದಿ ವಿವರಣೆ ಪಡೆದರು.
Published by: Seema R
First published: May 8, 2021, 3:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories