HOME » NEWS » Coronavirus-latest-news » PM MODI DECIDED TO NOT TO ATTEND HOLI MEET THIS TIME DUE TO CORONA VIRUS SESR

ಕೊರೋನಾ ಭೀತಿ: ಹೋಳಿ ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ ಎಂದ ಪ್ರಧಾನಿ

ಹೋಳಿ ಹಬ್ಬದ ಸಂಭ್ರದಲ್ಲಿ ಭಾಗಿಯಾಗಲು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದರು. ಆದರೆ, ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಜನಸಂದಣಿ ಪ್ರದೇಶದಲ್ಲಿ ಭಾಗಿಯಾಗುವುದು ಅಷ್ಟು ಸುರಕ್ಷಿತವಲ್ಲ ಎಂದು ನಿರ್ಧರಿಸಿದ್ದಾರೆ.

Seema.R | news18-kannada
Updated:March 4, 2020, 12:39 PM IST
ಕೊರೋನಾ ಭೀತಿ: ಹೋಳಿ ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ ಎಂದ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ
  • Share this:
ನವದೆಹಲಿ(ಮಾ. 04): ಪ್ರಪಂಚವನ್ನು ಬೆಚ್ಚಿ ಬೀಳಿಸಿರುವ ಮಾರಕ ಸೋಂಕು ಕೊರೋನಾ ಸೋಂಕು ಎಲ್ಲರನ್ನು ಭಯಭೀತರನ್ನಾಗಿ ಮಾಡಿದೆ. ದೇಶದಲ್ಲಿಯೂ ದಿನೇ ದಿನೇ ಈ ಪ್ರಕರಣಗಳು ಹೆಚ್ಚುತ್ತಿದ್ದು ಆತಂಕ ಮೂಡಿಸಿದೆ. ಈಗಾಗಲೇ 6 ಜನರು ಈ ಸೋಂಕಿಗೆ ಬಲಿಯಾಗಿದ್ದು, ಜೈಪುರ ಪ್ರವಾಸಕ್ಕೆ ಒಂದ 15 ಜನರಲ್ಲಿ ಕೂಡ ಈ ಸೋಂಕು ದೃಢಪಟ್ಟಿದೆ. ಈ ಭಯ ಈಗ ಪ್ರಧಾನಿ ಮೋದಿಯನ್ನು ಆವರಿಸಿದ್ದು, ಈ ಹಿನ್ನೆಲೆ ಹೋಳಿ ಸಂಭ್ರಮದಲ್ಲಿ ಭಾಗಿಯಾಗದಿರಲು ಅವರು ನಿರ್ಧಾರಿಸಿದ್ದಾರೆ.

ಹೋಳಿ ಹಬ್ಬದ ಸಂಭ್ರದಲ್ಲಿ ಭಾಗಿಯಾಗಲು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದರು. ಆದರೆ, ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಜನಸಂದಣಿ ಪ್ರದೇಶದಲ್ಲಿ ಭಾಗಿಯಾಗುವುದು ಅಷ್ಟು ಸುರಕ್ಷಿತವಲ್ಲ ಎಂದು ನಿರ್ಧರಿಸಿದ್ದಾರೆ. ಈ ಹಿನ್ನೆಲೆ ಹೋಳಿ ಮಿಲನ್​ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಅವರು ಟ್ವೀಟ್​ ಮೂಲಕ ಸ್ಪಷ್ಟಪಡಿಸಿದ್ದಾರೆ.




ಸೋಂಕು ತಗುಲದಂತೆ ಮುನ್ನೆಚ್ಚರಿಕೆಯಾಗಿ ಹೆಚ್ಚು ಜನ ಸೇರುವುದನ್ನು ಕಡಿಮೆಗೊಳಿಸಬೇಕೆಂದು ವಿಶ್ವಾದ್ಯಂತ ತಜ್ಞರು ಹೇಳುತ್ತಿದ್ಧಾರೆ. ಹಾಗಾಗಿ ಈ ವರ್ಷ ನಾನು ಸಾರ್ವಜನಿಕರೊಂದಿಗೆ ಹೋಳಿ ಹಬ್ಬ ಆಚರಿಸುತ್ತಿಲ್ಲ ಎಂದಿದ್ದಾರೆ.

ಉತ್ತರ ಭಾರತೀಯರಿಗೆ ಹೋಳಿ ಹಬ್ಬ ಬಹುದೊಡ್ಡ ಹಬ್ಬವಾಗಿದ್ದು, ಒಟ್ಟಾಗಿ ಕಲೆತು ಬಣ್ಣದೋಕುಳಿಯಾಡುತ್ತಾರೆ. ಪ್ರಧಾನಿ ಮೋದಿ ಕೂಡ ಈ ರೀತಿ ಸಾರ್ವಜನಿಕವಾಗಿ ಈ ಹಿಂದೆ ಹೋಳಿ ಹಬ್ಬ ಆಚರಿಸಿದ್ದರು.ಇದನ್ನು ಓದಿ: ಕೊರೋನಾ ಬಗ್ಗೆ ಆತಂಕ ಬೇಡ: ಭೀತಿಯಲ್ಲಿರುವ ಜನರಿಗೆ ಧೈರ್ಯ ತುಂಬಿದ ಪ್ರಧಾನಿ ನರೇಂದ್ರ ಮೋದಿ

ಕೊರೋನಾ ವೈರಸ್​ಗೆ ವಿಶ್ವದಲ್ಲಿ 3000 ಜನರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಭಾರತದಲ್ಲಿ ಇದರ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಈ ಬಗ್ಗೆ ಸುರಕ್ಷತಾ ಕ್ರಮಕ್ಕೆ ಮುಂದಾಗುವುದು ಒಳಿತು ಎಂಬ ಮಾತು ಕೇಳಿಬಂದಿದೆ. ಇನ್ನು ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಹಲವು ಸಲಹೆಗಳನ್ನು ನೀಡಿ ಪ್ರಧಾನಿ ಟ್ವೀಟ್​ ಕೂಡ ಮಾಡಿದ್ದಾರೆ.
First published: March 4, 2020, 12:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories