ಕೊರೋನಾ ವೈರಸ್​​​ ನಿಯಂತ್ರಣಕ್ಕೆ 15 ಸಾವಿರ ಕೋಟಿ ವಿಶೇಷ ಪ್ಯಾಕೇಜ್​​ ಘೋಷಿಸಿದ ಪ್ರಧಾನಿ ಮೋದಿ

ಜನತೆ ಇನ್ನು 21 ದಿನಗಳ ಕಾಲ ರಸ್ತೆಗೆ ಇಳಿಯಬೇಡಿ. ನಿಮ್ಮಲ್ಲಿ ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ. ನಾವು ಈ ಕ್ಷಣದಿಂದ ಹೀಗೆ ಸಂಕಲ್ಪ ಮಾಡೋಣ. ಇಡೀ ದೇಶವೇ ಲಾಕ್ ಡೌನ್ ಆದರೂ ಅಗತ್ಯ ವಸ್ತುಗಳು ನಿಮಗೆ ಸಿಗುತ್ತದೆ. ಹಾಲು, ದಿನಸಿ, ಆಸ್ಪತ್ರೆ, ಮೆಡಿಕಲ್ ಶಾಪ್ ಮತ್ತು ತರಕಾರಿ ಎಂದಿನಂತೆ ಸಿಗುತ್ತದೆ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

 • Share this:
  ನವದೆಹಲಿ(ಮಾ.24): ಕೊರೋನಾ ವೈರಸ್​​ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು 15 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಇಂದು ದೇಶವನ್ನುದ್ದೇಶಿ ಮಾತಾಡಿದ ಪ್ರಧಾನಿ ನರೇಂದ್ರ ಮೋದಿ, ಇಡೀ ಪ್ರಪಂಚವನ್ನೇ ಕೊರೋನಾ ಸಂಕಷ್ಟಕ್ಕೆ ದೂಡಿದೆ. ನಾವು ಇದರಿಂದ ಪಾರಾಗಲು 15 ಸಾವಿರ ಕೋಟಿ ಅವಶ್ಯಕ ಎಂದು ಹೇಳಿದ್ದಾರೆ.

  ಇನ್ನು, ದೇಶದ ಪ್ರತಿಯೊಬ್ಬ ಪ್ರಜೆಯ ಜೀವವೂ ಮುಖ್ಯ. ಇದರಿಂದ ಬಚಾವ್​​ ಆಗಲು ಸರಪಳಿಯನ್ನು ತುಂಡರಿಸುವುದೊಂದೇ ಮಾರ್ಗ. ಸಾಮಾಜಿಕ ಅಂತರ ಕಾಯ್ದುಕೊಳ್ಳವುದು ತುಂಬಾ ಮುಖ್ಯ. ಎಲ್ಲರ ಜೀವ ಉಳಿಸಿಕೊಳ್ಳಲು ಸಲುವಾಗಿ ಭಾರತವನ್ನು ಲಾಕ್​​ಡೌನ್​ ಮಾಡಲಾಗುತ್ತಿದೆ ಎಂದರು.

  ನಾನು ನಿಮ್ಮೆ ಮನೆಯ ಸದಸ್ಯನಾಗಿ ಕೇಳಿಕೊಳ್ಳುತ್ತಿದ್ದೇನೆ ದಯವಿಟ್ಟು ಮನೆಯಿಂದ ಹೊರಗೆ ಬರಬೇಡಿ. ಇದು ನಮ್ಮ ಮೊದಲ ಆದತ್ಯೆ ಆಗಿರಲಿ. ಮುಂದಿನ 21 ದಿನಗಳ ಕಾಲ ಮನೆಗಳಲ್ಲೇ ಇರಬೇಕು ಎಂದು ಮೋದಿ ಕೇಳಿಕೊಂಡರು.

  ಇದನ್ನೂ ಓದಿ: 21 ದಿನ ದೇಶಾದ್ಯಂತ ಕರ್ಫ್ಯೂ; ಪ್ರಧಾನಿ ಮೋದಿ ಘೋಷಣೆ

  ಜನತೆ ಇನ್ನು 21 ದಿನಗಳ ಕಾಲ ರಸ್ತೆಗೆ ಇಳಿಯಬೇಡಿ. ನಿಮ್ಮಲ್ಲಿ ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ. ನಾವು ಈ ಕ್ಷಣದಿಂದ ಹೀಗೆ ಸಂಕಲ್ಪ ಮಾಡೋಣ. ಇಡೀ ದೇಶವೇ ಲಾಕ್ ಡೌನ್ ಆದರೂ ಅಗತ್ಯ ವಸ್ತುಗಳು ನಿಮಗೆ ಸಿಗುತ್ತದೆ. ಹಾಲು, ದಿನಸಿ, ಆಸ್ಪತ್ರೆ, ಮೆಡಿಕಲ್ ಶಾಪ್ ಮತ್ತು ತರಕಾರಿ ಎಂದಿನಂತೆ ಸಿಗುತ್ತದೆ.
  First published: