HOME » NEWS » Coronavirus-latest-news » PM APPRECIATES OMAR ABDULLAHS CALL FOR SOCIAL DISTANCING FOLLOWING HIS UNCLES DEATH SNVS

ಮಾವನ ಸಾವಾದರೂ ಸಾಮಾಜಿಕ ಅಂತರ ಪಾಲಿಸಿದ ಒಮರ್ ಅಬ್ದುಲ್ಲಾಗೆ ಪ್ರಧಾನಿ ಮೋದಿ ಶ್ಲಾಘನೆ

ಮನೆಯಿಂದ ಪ್ರಾರ್ಥನೆ ಮಾಡಿದರೂ ತಮ್ಮ ಮಾವನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಅಬ್ದುಲ್ಲಾ ಭಾನುವಾರ ರಾತ್ರಿ ಟ್ವೀಟ್ ಮಾಡಿದ್ದರು. ಕೊರೋನಾ ವೈರಸ್ ಸೋಂಕು ಹರಡುವ ಹಿನ್ನೆಲೆಯಲ್ಲಿ ಒಮರ್ ಅವರು ಸಾಮಾಜಿಕ ಕಳಕಳಿ ತೋರಿದ್ದಾರೆ.

news18
Updated:March 30, 2020, 4:28 PM IST
ಮಾವನ ಸಾವಾದರೂ ಸಾಮಾಜಿಕ ಅಂತರ ಪಾಲಿಸಿದ ಒಮರ್ ಅಬ್ದುಲ್ಲಾಗೆ ಪ್ರಧಾನಿ ಮೋದಿ ಶ್ಲಾಘನೆ
ಪ್ರಧಾನಿ ಮೋದಿ.
  • News18
  • Last Updated: March 30, 2020, 4:28 PM IST
  • Share this:
ನವದೆಹಲಿ: ಇತ್ತೀಚೆಗಷ್ಟೇ ಗೃಹ ಬಂಧನದಿಂದ ಬಿಡುಗಡೆಯಾಗಿದ್ದ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈಗ ದೇಶಾದ್ಯಂತ ಜಾರಿಯಲ್ಲಿರುವ 21 ದಿನ ಲಾಕ್​ಡೌನ್​ನಿಂದಾಗಿ ಪರೋಕ್ಷವಾಗಿ ಗೃಹ ಬಂಧನದಲ್ಲೇ ಇರುವಂತಾಗಿದೆ. ಇಂಥ ಹೊತ್ತಲ್ಲೇ ಒಮರ್ ಅಬ್ದುಲ್ಲಾ ತಮ್ಮ ಮಾವ ಡಾ. ಮೊಹಮ್ಮದ್ ಅಲಿ ಮಟ್ಟೂ ಅವರನ್ನು ಕಳೆದುಕೊಂಡಿದ್ದಾರೆ. ಆದರೆ, ಕೊರೋನಾ ವೈರಸ್ ಹರಡುವ ಅಪಾಯ ಇರುವುದರಿಂದ ಒಮರ್ ಅವರು ತಮ್ಮ ನೋವು ಮತ್ತು ತುಡಿತವನ್ನು ನುಂಗಿಕೊಂಡು ಮಾನವ ಅಂತ್ಯಕ್ರಿಯೆಯಿಂದ ದೂರ ಉಳಿದು ಸಾಮಾಜಿಕ ಅಂತರ ಪಾಲನೆ ಮಾಡಿದ್ಧಾರೆ. ಅಷ್ಟೇ ಅಲ್ಲ, ತಮ್ಮ ಮಾವನ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಅವರು, ಅಂತ್ಯಕ್ರಿಯೆಯಲ್ಲಿ ಯಾರೂ ಗುಂಪು ಸೇರಬಾರದು. ಸೋಷಿಯಲ್ ಡಿಸ್ಟೆನ್ಸಿಂಗ್ ಪಾಲಿಸಬೇಕು ಎಂದು ಕರೆ ನೀಡಿದ್ಧಾರೆ. ತಮ್ಮ ನಿವಾಸದ ಬಳಿಯಾಗಲೀ, ಸ್ಮಶಾನದ ಬಳಿಯಾಗಲೀ ಜನರು ಸೇರಬಾರದು ಎಂದು ತಮ್ಮ ಬೆಂಬಲಿಗರಿಗೆ ಒಮರ್ ಸೂಚಿಸಿದ್ದಾರೆ.

ಒಮರ್ ಅಬ್ದುಲ್ಲಾ ಅವರ ಈ ಸಾಮಾಜಿಕ ಕಳಕಳಿಯನ್ನು ಪ್ರಧಾನಿ ನರೇಂದ್ರ ಮೋದಿ ಮೆಚ್ಚಿಕೊಂಡಿದ್ದಾರೆ. ಡಾ. ಮೊಹಮ್ಮದ್ ಅಲಿ ಮಟ್ಟೂ ಅವರ ನಿಧನಕ್ಕೆ ಪ್ರಧಾನಿ ಸಂತಾಪ ವ್ಯಕ್ತಪಡಿಸಿದರು. ಅದೇ ಹೊತ್ತಿನಲ್ಲಿ ಲಾಕ್ ಡೌನ್ ನಿಯಮಗಳನ್ನ ಜನರು ಪಾಲಿಸಬೇಕೆಂದು ಒಮರ್ ಅಬ್ದುಲ್ಲಾ ಕೊಟ್ಟ ಕರೆಗೂ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕೂಲಿ ಕಾರ್ಮಿಕರು ಗುಳೆ ಹೋಗುತ್ತಿರುವುದು ಇಡೀ ದೇಶಕ್ಕೆ ಅಪಾಯ ತಂದಿದೆ: ದೆಹಲಿ ಡಿಸಿಎಂ ಆತಂಕ

“ದುಖದ ಈ ಸಮಯದಲ್ಲಿ ಯಾವುದೇ ದೊಡ್ಡ ಗುಂಪು ಸೇರಬಾರದೆಂದು ನೀವು ನೀಡಿರುವ ಕರೆ ಶ್ಲಾಘನೀಯ. ಇದು ಕೋವಿಡ್-19 ವಿರುದ್ಧ ಭಾರತದ ಹೋರಾಟಕ್ಕೆ ಬಲ ನೀಡುತ್ತದೆ" ಎಂದು ಹೇಳಿದರು.


ಪ್ರಧಾನ ಮಂತ್ರಿಗೆ ಉತ್ತರಿಸಿದ ಅಬ್ದುಲ್ಲಾ, "ನಿಮ್ಮ ಸಂತಾಪದ ಸಂದೇಶಕ್ಕಾಗಿ ನನ್ನ ಕುಟುಂಬವು ನಿಮಗೆ ತುಂಬಾ ಧನ್ಯವಾದ ಹೇಳುತ್ತದೆ. ಅಗಲಿದ ಆತ್ಮಕ್ಕಾಗಿ ನಿಮ್ಮ ಪ್ರಾರ್ಥನೆ ಸಲ್ಲಿಸಿರುವುದು ನಿಜಕ್ಕೂ ಪ್ರಶಂಸಾರ್ಹ” ಎಂದು ಹೇಳಿದರು.ಸುಮಾರು ಎಂಟು ತಿಂಗಳ ಬಂಧನದ ನಂತರ ಕಳೆದ ವಾರ ಬಿಡುಗಡೆಯಾದ ಅಬ್ದುಲ್ಲಾ ಅವರು “ಅನಾರೋಗ್ಯದ ಕಾರಣದಿಂದ ಅಂಕಲ್ ನಿಧನರಾಗಿದ್ದಾರೆ” ಎಂದು ಟ್ವಿಟ್ಟರ್​ನಲ್ಲಿ ತಿಳಿಸಿದ್ದರು.

ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ. ಮೊಹಮ್ಮದ್ ಅಲಿ ಮಟ್ಟೂ ಅವರು ಒಮರ್ ಅಬ್ದುಲ್ಲಾ ಅವರ ಅಜ್ಜ ಶೇಖ್ ಅಬ್ದುಲ್ಲಾರ ಅಳಿಯರಾಗಿದ್ಧಾರೆ. ಅಂದರೆ ಫಾರೂಕ್ ಅಬ್ದುಲ್ಲಾ ಅವರ ಬಾವ. ಒಮರ್ ಅಬ್ದುಲ್ಲಾ ಅವರಿಗೆ ಮಾವನಾಗಬೇಕು.

ಕೊರೋನಾ ವೈರಸ್ ಹರಡುವುದನ್ನು ತಡೆಯಲು ಭಾರತದಲ್ಲಿ ಮಾರ್ಚ್ 24 ರಿಂದ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಅಗತ್ಯ ವಸ್ತುಗಳ ಸರಬರಾಜಷ್ಟೇ ಇರಲಿದೆ. ಅನವಶ್ಯಕ ವಾಹನ ಸಂಚಾರ ಮತ್ತು ಜನ ಸಂಚಾರವನ್ನು ನಿಷಿದ್ಧಿಸಲಾಗಿದೆ. ಐದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರಬಾರದು ಎಂದು ಸೂಚಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಹೋದಾಗಲೂ ನಿರ್ದಿಷ್ಟ ದೈಹಿಕ ಅಂತರ ಪಾಲನೆ ಮಾಡಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಕೊರೋನಾ ವೈರಸ್ ಹರಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

- ಸಂಧ್ಯಾ ಎಂ.

First published: March 30, 2020, 4:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories