ದಾರಿ ಮಧ್ಯೆ ಸಿಲುಕಿದವರನ್ನು ಸೇನಾ ವಾಹನದ ಮೂಲಕ ಮನೆಗೆ ತಲುಪಿಸಿ; ಕೇಂದ್ರಕ್ಕೆ ಜೆಡಿಎಸ್ ಪತ್ರ

ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹಾಗೂ ಗೃಹ ಸಚಿವ ಅಮಿತ್​ ಶಾಗೆ ಜೆಡಿಎಸ್​ ಪರವಾಗಿ ಬಿ.ಎಂ. ಫಾರೂಕ್​ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಸೇನೆ ಬಳಸಿ ದಾರಿ ಮಧ್ಯೆ ಸಿಲುಕಿದ ದಿನಗೂಲಿಗಳನ್ನು ಮನೆಗೆ ತಲುಪಿಸುವ ಕೆಲಸ ಮಾಡಲಿ ಎಂದು ಕೋರಿದ್ದಾರೆ.

news18-kannada
Updated:March 29, 2020, 1:11 PM IST
ದಾರಿ ಮಧ್ಯೆ ಸಿಲುಕಿದವರನ್ನು ಸೇನಾ ವಾಹನದ ಮೂಲಕ ಮನೆಗೆ ತಲುಪಿಸಿ; ಕೇಂದ್ರಕ್ಕೆ ಜೆಡಿಎಸ್ ಪತ್ರ
ಜೆಡಿಎಸ್​
  • Share this:
ಬೆಂಗಳೂರು (ಮಾ.29):  ಕೊರೋನಾ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಏಪ್ರಿಲ್​ 14ರವರೆಗೆ ಇಡೀ ದೇಶವನ್ನೇ ಲಾಕ್​ಡೌನ್​ ಮಾಡಲಾಗಿದೆ. ಅಗತ್ಯ ಮತ್ತು ತುರ್ತು ಸೇವೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸೇವೆಯ ಲಭ್ಯವಿಲ್ಲ. ಹೀಗಾಗಿ ದೆಹಲಿಯಿಂದ ಸಾಕಷ್ಟು ದಿನಗೂಲಿಗಳು 200 ಕಿ.ಮೀ. ನಡೆದು ಮನೆ ಸೇರುತ್ತಿದ್ದಾರೆ. ಈ ಬಗ್ಗೆ ಮರುಕ ವ್ಯಕ್ತಪಡಿಸಿರುವ ಜೆಡಿಎಸ್​, ಇವರನ್ನು ಸೇನಾ ವಾಹನದ ಮೂಲಕ ಮನೆಗೆ ತಲುಪಿಸುವಂತೆ ಕೋರಿದೆ.

ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹಾಗೂ ಗೃಹ ಸಚಿವ ಅಮಿತ್​ ಶಾಗೆ ಜೆಡಿಎಸ್​ ಪರವಾಗಿ ಬಿ.ಎಂ. ಫಾರೂಕ್​ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಸೇನೆ ಬಳಸಿ ದಾರಿ ಮಧ್ಯೆ ಸಿಲುಕಿದ ದಿನಗೂಲಿಗಳನ್ನು ಮನೆಗೆ ತಲುಪಿಸುವ ಕೆಲಸ ಮಾಡಲಿ ಎಂದು ಕೋರಿದ್ದಾರೆ.

“21 ದಿನಗಳ ಲಾಕ್​ಡೌನ್ ಆದೇಶದಿಂದ ಸಾಕಷ್ಟು ಜನರು ಕೆಲಸ ಕಳೆದುಕೊಂಡಿದ್ದಾರೆ. ತುತ್ತು ಊಟಕ್ಕೆ ಗತಿ ಇಲ್ಲದೆ  ಮನೆಗೆ ನಡೆದು ಸಾಗುತ್ತಿದ್ದಾರೆ. ವಿಶೇಷ ವಿಮಾನದ  ಮೂಲಕ ವಿದೇಶದಿಂದ ನಮ್ಮ ದೇಶದವರನ್ನು ಹೇಗೆ ಕರೆತಂದಿರೋ ಹಾಗೆಯೇ ದಾರಿ ಮಧ್ಯೆ ಸಿಲುಕಿದವರನ್ನು ಸೇನಾ ವಾಹನದ ಮೂಲಕ ಕರೆತನ್ನಿ,” ಎಂದು ಕೋರಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್ ಎಫೆಕ್ಟ್:​​ ದೆಹಲಿಯಿಂದ 200 ಕಿ.ಮೀ. ನಡೆದ ವ್ಯಕ್ತಿ ಮನೆ ತಲುಪುವ ಮುನ್ನವೇ ಸಾವು

ಜನರು ಮನೆಯಿಂದ ಹೊರ ಬರದಂತೆ ನೋಡಿಕೊಳ್ಳಲು ದಿನಸಿ ಪೂರೈಕೆ ಮಾಡಬೇಕು ಎಂದಿರುವ ಫಾರೂಕ್​, “ಜನರು ಮನೆಯಿಂದ ಹೊರಬರದಂತೆ ನೋಡಿಕೊಳ್ಳಲು ಮನೆ ಮನೆಗೆ ದಿನಸಿ ಪೂರೈಕೆ ಮಾಡುವ ಕೆಲಸ ಆಗಬೇಕು. ಇದಕ್ಕೆ ಜನರ ಬಿಪಿಎಲ್​ ಹಾಗೂ ಆಧಾರ್​ ಕಾರ್ಡ್​ಅನ್ನು ಪ್ರೂಫ್​ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು,” ಎಂದು ಅವರು ಕೋರಿದ್ದಾರೆ.

First published: March 29, 2020, 1:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading