ದಯವಿಟ್ಟು ನನ್ನ ಮಾತು ಕೇಳಿ, ಇಲ್ಲದಿದ್ದರೆ ಕಂಡಲ್ಲಿ ಗುಂಡಿಡಲು ಆದೇಶಿಸಬೇಕಾಗುತ್ತದೆ: ಕೆಸಿಆರ್​

ಜನ ಸರ್ಕಾರದ ಆದೇಶವನ್ನು ಪಾಲಿಸದೇ, ಪೊಲೀಸರ ಮಾತು ಕೇಳದಿದ್ದರೆ ಸೇನೆಯನ್ನು ಕರೆಸಬೇಕಾಗುತ್ತದೆ. ಪೊಲೀಸರ ಕೈ ಮೀರಿ ಜನ ವರ್ತಿಸಿದರೆ ಕಂಡಲ್ಲಿ ಗುಂಡಿಡಲು ಆದೇಶಿಸಬೇಕಾಗುತ್ತದೆ, ಎಂದು ಕೆಸಿಆರ್​ ವಾರ್ನಿಂಗ್​ ಕೂಡ ನೀಡಿದ್ದಾರೆ.

news18-kannada
Updated:March 25, 2020, 7:10 AM IST
ದಯವಿಟ್ಟು ನನ್ನ ಮಾತು ಕೇಳಿ, ಇಲ್ಲದಿದ್ದರೆ ಕಂಡಲ್ಲಿ ಗುಂಡಿಡಲು ಆದೇಶಿಸಬೇಕಾಗುತ್ತದೆ: ಕೆಸಿಆರ್​
ಕೆಸಿಆರ್
  • Share this:
ಹೈದರಾಬಾದ್​: ಇಡೀ ದೇಶವನ್ನು 21 ದಿನಗಳ ಕಾಲ ಲಾಕ್​ಡೌನ್​ ಮಾಡಿ ಪ್ರಧಾನಿ ನರೇಂದ್ರ ಮೋದಿ ಆದೇಶಿಸಿದ ಬೆನ್ನಲ್ಲೇ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​, ನಿಷೇಧವನ್ನು ಜನರು ಸ್ವಾಗತಿಸಿ ಸಹಕರಿಸಬೇಕು ಎಂದು ಕೋರಿದ್ದಾರೆ. ಲಾಕ್​ಡೌನ್​ ಮಾಡುವಾಗ ಹೇರಿರುವ ಎಲ್ಲಾ ನಿಯಮಗಳನ್ನೂ ಜನರು ಪಾಲಿಸಬೇಕು ಮತ್ತು ಮನೆಯೊಳಗೇ ಇದ್ದು ಸರ್ಕಾರದ ಕ್ರಮಗಳಿಗೆ ಬೆಲೆ ಕೊಡಬೇಕು ಎಂದು ಅವರು ಕೋರಿದ್ದಾರೆ. 

ಮುಂದುವರೆದ ಅವರು, "ಜನ ಸರ್ಕಾರದ ಆದೇಶವನ್ನು ಪಾಲಿಸದೇ, ಪೊಲೀಸರ ಮಾತು ಕೇಳದಿದ್ದರೆ ಸೇನೆಯನ್ನು ಕರೆಸಬೇಕಾಗುತ್ತದೆ. ಪೊಲೀಸರ ಕೈ ಮೀರಿ ಜನ ವರ್ತಿಸಿದರೆ ಕಂಡಲ್ಲಿ ಗುಂಡಿಡಲು ಆದೇಶಿಸಬೇಕಾಗುತ್ತದೆ," ಎಂದು ಕೆಸಿಆರ್​ ವಾರ್ನಿಂಗ್​ ಕೂಡ ನೀಡಿದ್ದಾರೆ.

ಸದ್ಯ ತೆಲಂಗಾಣದಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿದೆ. ಜತೆಗೆ ಇದೀಗ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್​ಡೌನ್​ಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ತೆಲಂಗಾಣಕ್ಕೂ ಈ ನಿಯಮ ಅನ್ವಯವಾಗಲಿದೆ.

ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮುಂದುವರೆಸಲಿದೆ, ಅದರ ಜತೆಗೆ ಜನ ಪ್ರತಿನಿಧಿಗಳು ಕೂಡ ಜನ ಜಾಗೃತಿ ಮೂಡಿಸಬೇಕು. ಆದರೆ ಸಾರ್ವಜನಿಕರಿಂದ ಜನಪ್ರತಿನಿಧಿಗಳು ದೂರ ಉಳಿದಿದ್ದಾರೆ. ಪೊಲೀಸರು, ಮುನ್ಸಿಪಾಲಿಟಿ ಅಧೀಕಾರಿಗಳು, ಆರೋಗ್ಯಾಧಿಕಾರಿಗಳನ್ನು ಹೊರತುಪಡಿಸಿ, ಜನ ಪ್ರತಿನಿಧಿಗಳು ರಸ್ತೆಗೆ ಇಳಿದು ಜನರಿಗೆ ತಿಳುವಳಿಕೆ ಮೂಡಿಸುತ್ತಿರುವುದು ಕಾಣಿಸುತ್ತಿಲ್ಲ, ಎಂದು ಕೆಸಿಆರ್​ ಬೇಸರ ವ್ಯಕ್ತಪಡಿಸಿದರು. ಜತೆಗೆ ಜನಪ್ರತಿನಿಧಿಗಳ ಮೂಲಭೂತ ಕರ್ತವ್ಯ ಜನರ ಜತೆಗಿದ್ದು ಆತ್ಮಸ್ಥೈರ್ಯ ತುಂಬುವುದು ಮತ್ತು ಅರಿವು ಮೂಡಿಸುವುದು, ಅದನ್ನು ಅವರು ಈಗ ಮಾಡಲೇಬೇಕು ಎಂದು ತಾಕೀತು ಮಾಡಿದರು.

ಇದನ್ನೂ ಓದಿ: ಕೊರೋನಾ ವೈರಸ್​​​ ನಿಯಂತ್ರಣಕ್ಕೆ 15 ಸಾವಿರ ಕೋಟಿ ವಿಶೇಷ ಪ್ಯಾಕೇಜ್​​ ಘೋಷಿಸಿದ ಪ್ರಧಾನಿ ಮೋದಿ

ಮುಂದುವರೆದ ಅವರು, "ನೀವೆಲ್ಲರೂ ಜನರಿಂದ ಚುನಾಯಿತರಾಗಿ ಅಧಿಕಾರಕ್ಕೆ ಬಂದವರು. ಇದು ಜನರ ಸೇವೆಗೆ ಸಿಕ್ಕಿರುವ ದೊಡ್ಡ ಅವಕಾಶ ಮತ್ತು ಅನಿವಾರ್ಯ ಕ್ಷಣ," ಎಂದು ಜನಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದರು.

ತುರ್ತು ಪರಿಸ್ಥಿತಿಯಿದ್ದರೆ ಜನರು ತಕ್ಷಣ 100 ಗೆ ಕರೆ ಮಾಡಬೇಕು ಮತ್ತು ಸಹಾಯಕ್ಕಾಗಿ ಪೊಲೀಸ್​ ಇಲಾಖೆ ಸದಾ ಸಿದ್ಧವಾಗಿರುತ್ತದೆ ಎಂದ ಕೆಸಿಆರ್​,  ಅಗತ್ಯ ಬಿದ್ದರೆ ಜನರಿಗಾಗಿಯೇ ರಾಜ್ಯಾದ್ಯಂತ ನೂರು ವಾಹನಗಳನ್ನು ಮೀಸಲಿಡಲು ಸಿದ್ಧ ಎಂದಿದ್ದಾರೆ.ಇದನ್ನೂ ಓದಿ: ದೇಶದಲ್ಲಿ 21 ದಿನ ಕೊರೋನಾ ಕರ್ಫ್ಯೂ: ಇಂದಿನಿಂದ ಏನಿರುತ್ತೆ? ಏನಿರಲ್ಲ?

ದಿನಸಿ ಅಂಗಡಿಯವರಿಗೆ ಎಚ್ಚರಿಕೆ ನೀಡಿದ ಕೆಸಿಆರ್​, ದಿನನಿತ್ಯ ಬಳಸುವ ಸಾಮಗ್ರಿಗಳ ಬೆಲೆ ಏರಿಕೆ ಮಾಡಿದ್ದು ಕಂಡುಬಂದಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸುವುದಲ್ಲದೇ ಪರವಾನಗಿಯನ್ನು ರದ್ದುಗೊಳಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಭಾಷಣದ ಪ್ರಮುಖಾಂಶಗಳು: 21 ದಿನ ಮನೆಯಲ್ಲಿ ಇರದಿದ್ದರೆ ದೇಶ 21 ವರ್ಷ ಹಿಂದಕ್ಕೆ ಹೋಗಲಿದೆ 

ಕೊರೋನಾ ಅಂಕಿಅಂಶಗಳ ಬಗ್ಗೆ ಉಲ್ಲೇಖಿಸಿದ ಕೆಸಿಆರ್​, ಈವರೆಗೂ ತೆಲಂಗಾಣದಲ್ಲಿ ಒಟ್ಟೂ 36 ಪಾಸಿಟಿವ್​ ಪ್ರಕರಣಗಳು ದಾಖಲಾಗಿರುವುದಾಗಿ ತಿಳಿಸಿದ್ದಾರೆ.

“ಬೇರೆ ದೇಶಗಳಿಂದ ಬಂದವರು ಮತ್ತು ವಿದೇಶಿಗರು 14 ದಿನಗಳ ಕಾಲ ಕಡ್ಡಾಯವಾಗಿ ಮನೆಯೊಳಗಿದ್ದು ಸಮಾಜದಿಂದ ಮತ್ತು ನೆರೆಹೊರೆಯವರಿಂದ ಪ್ರತ್ಯೇಕವಾಗಿರಬೇಕು. ಏನಾದರೂ ನಿಯಮಕ್ಕೆ ತಪ್ಪಿ ಆಚೆ ಓಡಾಡಿದರೆ ಅಂತವರ ಪಾಸ್​ಪೋರ್ಟ್​ ರದ್ದುಗೊಳಿಸುತ್ತೇವೆ .” ಎಂದು ಎಚ್ಚರಿಸಿದ್ದಾರೆ

ವರದಿ: ಪಿ.ವಿ. ರಮಣ್​ ಕುಮಾರ್​

First published:March 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading