• ಹೋಂ
 • »
 • ನ್ಯೂಸ್
 • »
 • Corona
 • »
 • ‘ದೇಶಾದ್ಯಂತ ಒಮ್ಮೆಲೇ ಲೈಟ್ ಆಫ್ ಮಾಡಿದರೆ ಪವರ್ ಗ್ರಿಡ್ ಹಾಳಾದೀತು; ಫ್ಯಾನ್ ಆನ್​ನಲ್ಲೇ ಇರಲಿ’

‘ದೇಶಾದ್ಯಂತ ಒಮ್ಮೆಲೇ ಲೈಟ್ ಆಫ್ ಮಾಡಿದರೆ ಪವರ್ ಗ್ರಿಡ್ ಹಾಳಾದೀತು; ಫ್ಯಾನ್ ಆನ್​ನಲ್ಲೇ ಇರಲಿ’

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

​ಕೊರೋನಾ ವೈರಸ್ ಬಿಕ್ಕಟ್ಟನ್ನು "ತಪ್ಪಾಗಿ ನಿರ್ವಹಿಸುವುದು" ಮತ್ತು ಜನರನ್ನು ಹೀಗೆ ಹುಚ್ಚು ಟಾಸ್ಕ್​​​ ನೀಡಿ ದಾರಿ ತಪ್ಪಿಸುವ ಕೆಲಸ ಪ್ರಧಾನಿ ಮಾಡುತ್ತಿದ್ದಾರೆ ಎಂದು ಕೇಂದ್ರ ಪ್ರತಿಪಕ್ಷಗಳು ಟೀಕಿಸಿವೆ.

 • Share this:

  ನವದೆಹಲಿ(ಏ.04): ಇದೇ ಭಾನುವಾರ ಏಪ್ರಿಲ್​​ 5ನೇ ತಾರೀಕು ರಾತ್ರಿ 9 ಗಂಟೆಗೆ ಒಂಬತ್ತು ನಿಮಿಷಗಳ ಕಾಲ ತಮ್ಮ ಮನೆಯ ಎಲ್ಲಾ ವಿದ್ಯುತ್​​ ದೀಪಗಳನ್ನು ಆಫ್​​ ಮಾಡಿ ಮೇಣದ ಬತ್ತಿ ಮತ್ತು ಹಣತೆ ಉರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ದೇಶದ ಜನತೆಗೆ ಕರೆ ನೀಡಿದ್ದರು. ಆದರೀಗ, ಪ್ರಧಾನಿ ಕರೆಯಂತೆ ಒಮ್ಮೆಲೇ ದೇಶಾದ್ಯಂತ ಲೈಟ್​ ಆಫ್​​ ಮಾಡಿದರೆ ಪವರ್​​ ಗ್ರಿಡ್​​ಗಳು ಹಾಳಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ತಾಂತ್ರಿಕ ಸಮಸ್ಯೆಯಾಗಿ ತುಸು ಯಡವಟ್ಟಾದರೂ ಇಡೀ ದೇಶದ 10-16 ಗಂಟೆಗಳ ಕಾಲ ಕತ್ತಲಲ್ಲೇ ಕಳೆಯಬೇಕಾಗುತ್ತದೆ.


  ಅತ್ತ ಒಂದೇ ಬಾರಿಗೆ ದೀಪಗಳನ್ನು ಆಫ್ ಮಾಡುವುದರಿಂದ ವಿದ್ಯುತ್​​ನಲ್ಲೇನಾದರೂ ವ್ಯತ್ಯಾಸ ಉಂಟಾಗಬಹುದು. ಏಕೆಂದರೇ, ಒಮ್ಮಲೇ ಇಡೀ ದೇಶ ಕರೆಂಟ್​ ತೆಗೆದರೆ ವಿದ್ಯುತ್​ ಪೂರೈಸುವ ಪವರ್​ ಗ್ರಿಡ್​ನ ಟ್ರಿಪ್​ ಆಗುವ ಸಾಧ್ಯತೆ ಇದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದ ಈಗ ದೇಶದ ವಿದ್ಯುತ್ ಸರಬರಾಜು ಸಂಸ್ಥೆಗಳ ಹೆದರಿಕೆ ಶುರುವಾಗಿದೆ. ಹಾಗಾಗಿ ಮುಂಜಾಗೃತ ಕ್ರಮವಾಗಿ ವಿದ್ಯುತ್​ ಪೂರೈಕೆ ಮಾಡುವ ಪವರ್ ಗ್ರಿಡ್​ಗಳ ರಕ್ಷಣೆಗೆ ಮುಂದಾಗಿವೆ.


  ಇತ್ತ, ಕೇಂದ್ರ ವಿದ್ಯುತ್​​ ಸಚಿವಾಲಯದ ವಕ್ತಾರರೊಬ್ಬರು, ಇಡೀ ದೇಶ ಒಂದೇ ಸಲ ಲೈಟ್​ ಆಫ್​​ ಮಾಡಿದರೆ ಪವರ್​​ ಗ್ರಿಡ್​​ಗಳ ಕಾರ್ಯವೂ ಸ್ಥಗಿತಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗದಂತೆ ಕೇಂದ್ರ ಸರ್ಕಾರ ಮತ್ತು ವಿದ್ಯುತ್​​ ಸರಬರಾಜು ಸಂಸ್ಥೆಗಳು ಎಚ್ಚರಿಕೆವಹಿಸಿವೆ ಎಂದು ಹೇಳಿದ್ದಾರೆ.


  ಈ ಬೆನ್ನಲ್ಲೇ ನ್ಯೂಕ್ಲಿಯರ್ ಪವರ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್​​ಪಿಸಿಐಎಲ್) ಅಸೋಸಿಯೇಟ್​​ ಡೈರೆಕ್ಟರ್​​ ಎಂ.ಕೆ ಮಾಥುರ್​​ ಮಾತ್ರ ದೇಶದ ಜನತೆಯಲ್ಲಿ ಕರೆಂಟ್​ ತೆಗೆದ ಸಂದರ್ಭದಲ್ಲಿ 15 ನಿಮಿಷಗಳ ಕಾಲ ಫ್ಯಾನ್​ ಆನ್​ ಮಾಡುವಂತೆ ಸಂದೇಶ ರವಾನಿಸಿದ್ದಾರೆ.


  ಇನ್ನು, ಉತ್ತರಪ್ರದೇಶ ಮತ್ತು ತಮಿಳುನಾಡಿನಲ್ಲಿ ಪವರ್ ಕಾರ್ಪೊರೇಷನ್​ ಲಿಮಿಟೆಡ್​​​ಗಳು ತಮ್ಮ ಸಿಬ್ಬಂದಿಗೆ ಅಲರ್ಟ್​ ಆಗಿರುವಂತೆ ಸೂಚಿಸಿವೆ. ರಾತ್ರಿ 9 ಗಂಟೆಗೆ ಒಮ್ಮೆಲೆ ಎಲ್ಲರೂ ಪವರ್​ ಆಫ್​​ ಮಾಡಿದರೆ, ವಿದ್ಯುತ್​ ಪೂರೈಕೆ ಸ್ತಬ್ಧಗೊಳ್ಳಲಿದೆ. ಇದರಿಂದಾಗಿ ಪವರ್​ ಗ್ರಿಡ್​ನಲ್ಲಿ​ ಹೈವೋಲ್ಟೇಜ್​ ಸೃಷ್ಟಿಯಾಗಿ ಟ್ರಿಪ್​​ ಆಗುವ ಸಾಧ್ಯತೆ ಇದೆ. ಹೀಗಾಗಿ ಅಲರ್ಟ್​ ಆಗಿರಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


  ಇದನ್ನೂ ಓದಿ: ‘ಜನಕ್ಕೆ ಬೇಕಾದ ದಿನನಿತ್ಯ ವಸ್ತುಗಳು ಸ್ಟಾಕ್​​ ಇದೆ; ಯಾರು ಭಯಪಡುವ ಅಗತ್ಯವಿಲ್ಲ‘ - ಸಿಎಂ ಯಡಿಯೂರಪ್ಪ


  ಪ್ರಧಾನಿ ನರೇಂದ್ರ ಮೋದಿಯವರೇ ದಯವಿಟ್ಟು ಕರೆಂಟ್​ ಆಫ್​ ಮಾಡುವುದಕ್ಕೆ ಸೂಚಿಸಬೇಡಿ. ಒಂದು ವೇಳೆ ಪವರ್​ ಗ್ರಿಡ್​ ಟ್ರಿಪ್​ ಆದರೆ, ಮತ್ತೆ ಅದನ್ನು ರಿಸ್ಟೋರ್​ ಮಾಡಲು 16 ಗಂಟೆ ಬೇಕಾಗುತ್ತದೆ. ಹಾಗಾಗಿ ಕೇವಲ ದೀಪ ಹಚ್ಚಲು ತಿಳಿಸಿ ಎಂದು ಮಹಾರಾಷ್ಟ್ರದ ಇಂಧನ ಸಚಿವ ನಿತಿನ್​ ರಾವತ್ ಮನವಿ ಮಾಡಿದ್ದಾರೆ.
  ಕೊರೋನಾ ವೈರಸ್ ಬಿಕ್ಕಟ್ಟನ್ನು "ತಪ್ಪಾಗಿ ನಿರ್ವಹಿಸುವುದು" ಮತ್ತು ಜನರನ್ನು ಹೀಗೆ ಹುಚ್ಚು ಟಾಸ್ಕ್​​​ ನೀಡಿ ದಾರಿ ತಪ್ಪಿಸುವ ಕೆಲಸ ಪ್ರಧಾನಿ ಮಾಡುತ್ತಿದ್ದಾರೆ ಎಂದು ಕೇಂದ್ರ ಪ್ರತಿಪಕ್ಷಗಳು ಟೀಕಿಸಿವೆ.

  Published by:Ganesh Nachikethu
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು