HOME » NEWS » Coronavirus-latest-news » PLEASE CUT THE TREES WHERE BATS ARE LIVING BANGALORE PEOPLE REQUEST TO BBMP AFTER CORONAVIRUS THREAT RMD

ಬಾವಲಿ ಇರುವ ಮರವನ್ನೇ ಕಡಿದು ಹಾಕಿ; ಬಿಬಿಎಂಪಿಗೆ ಬೆಂಗಳೂರಿಗರಿಂದ ಬರುತ್ತಿದೆ ಹೀಗೊಂದು ಮನವಿ

 ಬೆಂಗಳೂರಿಗರ ಕೆಲ ಮನೆಯಲ್ಲಿ ಚಿಕ್ಕು ಹಣ್ಣಿನ ಮರ ಇದೆ. ಅಲ್ಲಿಗೆ ಬಾವಲಿಗಳು ನಿತ್ಯ ಬರುತ್ತಿವೆಯಂತೆ. ಇದರಿಂದ ಭಯಗೊಂಡ ಕೆಲವರು ಈ ರೀತಿ ದೂರು ನೀಡಿದ್ದಾರೆ. ಕೆಲವರಿಗೆ ಕೌಂನ್ಸಿಲ್​ ಮಾಡುವ ಕೆಲಸವನ್ನು ಬಿಬಿಎಂಪಿ ಮಾಡಿದೆ.

news18-kannada
Updated:April 20, 2020, 8:19 AM IST
ಬಾವಲಿ ಇರುವ ಮರವನ್ನೇ ಕಡಿದು ಹಾಕಿ; ಬಿಬಿಎಂಪಿಗೆ ಬೆಂಗಳೂರಿಗರಿಂದ ಬರುತ್ತಿದೆ ಹೀಗೊಂದು ಮನವಿ
ಬಾವಲಿ
  • Share this:
ಬೆಂಗಳೂರು (ಏ.20): ಪ್ರಾಣಿಗೆ ಇರುವ ರೋಗ ಮನುಷ್ಯನಿಗೆ ಹರಡುವಲ್ಲಿ ಬಾವಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು ಕೆಲ ಅಧ್ಯಯನದಿಂದ ತಿಳಿದು ಬಂದಿದೆ. ಇನ್ನು, ಕೊರೋನಾ ವೈರಸ್​ ಕೂಡ ಬಾವಲಿಯಿಂದ ಮನುಷ್ಯನಿಗೆ ಹರಡಿದೆ ಎನ್ನುವುದು ಕೆಲವರ ವಾದ. ಆದರೆ, ಈ ವರೆಗೆ ಇದಕ್ಕೆ ಸೂಕ್ತ ಸಾಕ್ಷ್ಯ ಸಿಕ್ಕಿಲ್ಲ. ಆದರೆ, ಈ ವಿಚಾರವನ್ನು ಬಲವಾಗಿ ನಂಬಿರುವವರು ಮಾತ್ರ, ಬಿಬಿಎಂಪಿ ಬಳಿ ವಿಚಿತ್ರ ಮನವಿ ಒಂದನ್ನು ಇಡುತ್ತಿದ್ದಾರೆ. ಅದೇನೆಂದರೆ ಬಾವಲಿ ಇರುವ ಮರವನ್ನು ಕಡಿದು ಹಾಕಿ ಎಂದು.

ಬಿಬಿಎಂಪಿಯಲ್ಲಿ ಅರಣ್ಯ ಇಲಾಖೆ ವಿಭಾಗವಿದೆ. ಈ ವಿಭಾಗ ಹಾವುಗಳು ಹಾಗೂ ಹಕ್ಕಿಗಳ ರಕ್ಷಣೆ ಮಾಡುವ ಕೆಲಸವನ್ನು ಮಾಡುತ್ತಿದೆ. ಈಗ ಈ ವಿಭಾಗಕ್ಕೆ ಜನಸಾಮಾನ್ಯರಿಂದ ಬಾವಲಿಗಳ ಬಗ್ಗೆ ದೂರುಗಳ ಸುರಿಮಳೆಯೇ ಹರಿದು ಬರುತ್ತಿದೆ ಎಂದು ಟೈಮ್ಸ್​ ಆಫ್​ ಇಂಡಿಯಾವ ವರದಿ ಮಾಡಿದೆ.

ನಮ್ಮ ಮನೆಯ ಎದುರಿನ ಹಣ್ಣಿನ ಮರದಲ್ಲಿ ಬಾವಲಿ ಇದೆ. ದಯವಿಟ್ಟು ಅದನ್ನು ಓಡಿಸಿ ಅಥವಾ ಅವರು ಇರುವ ಮರವನ್ನೇ ಕತ್ತರಿಸಿ ಹಾಕಿ ಎನ್ನುವ ವಿಚಿತ್ರ ಬೇಡಿಕೆ ಇಡುತ್ತಿದ್ದಾರೆ.

ವಿಶ್ವದಲ್ಲಿ ನಿತ್ಯ ಸಾವಿರಾರು ಜನರ ಪ್ರಾಣ ಹಿಂಡುತ್ತಿರುವ ಕೊರೋನಾ ವೈರಸ್​ ಪ್ರಾಣಿಗಳಿಂದ ಮನುಷ್ಯರಿಗೆ ಹರಡಲು ಬಾವಲಿಯೇ ಕಾರಣ ಎನ್ನುವ ವದಂತಿ ಹಬ್ಬಿದೆ. ಈ ಕಾರಣಕ್ಕೆ ಭಯಬಿದ್ದ ಜನರು ಈ ರೀತಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ಚಹಾ ಮತ್ತು ಚಾಕೊಲೇಟ್​ನಲ್ಲಿದೆ ನಿಮ್ಮ ಯೌವ್ವನದ ಗುಟ್ಟು

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಸಂಶೋಧನೆಯೊಂದನ್ನು ನಡೆಸಿತ್ತು. ಈ ವೇಳೆ ಕೇರಳದಲ್ಲಿರುವ ಎರಡು ಬಾವಲಿ ಜಾತಿಗಳಲ್ಲಿ ಬೇರೆ ರೀತಿಯ ಕೊರೋನಾ ವೈರಸ್​ ಇರುವ ವಿಚಾರ ಬೆಳಕಿಗೆ ಬಂದಿತ್ತು. ಅದನ್ನು ಬ್ಯಾಟ್​ ಕೊರೋನಾ ವೈರಸ್​ (BtCoV) ಎಂದು ಕರೆಯಲಾಗಿದೆ. ಆದರೆ, ಈ ವೈರಸ್​ ಮನುಷ್ಯರಿಗೆ ತೊಂದರೆ ಉಂಟು ಮಾಡುತ್ತವೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರಿಗರ ಕೆಲ ಮನೆಯಲ್ಲಿ ಸಪೋಟಾ ಅಥವಾ ಚಿಕ್ಕು ಹಣ್ಣಿನ ಮರ ಇದೆ. ಅಲ್ಲಿಗೆ ಬಾವಲಿಗಳು ನಿತ್ಯ ಬರುತ್ತಿವೆಯಂತೆ. ಇದರಿಂದ ಭಯಗೊಂಡ ಕೆಲವರು ಈ ರೀತಿ ದೂರು ನೀಡಿದ್ದಾರೆ. ಕೆಲವರಿಗೆ ಕೌಂನ್ಸಿಲ್​ ಮಾಡುವ ಕೆಲಸವನ್ನು ಬಿಬಿಎಂಪಿ ಮಾಡಿದೆ.
First published: April 20, 2020, 8:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories