ನೀವು ಕೊರೋನಾ ಲಸಿಕೆ ನೀಡಿ, ನಾವು ದಾದಿಯರನ್ನು ನೀಡುತ್ತೇವೆ: ಬ್ರಿಟನ್, ಜರ್ಮನಿಗೆ ಫಿಲಿಪೈನ್ಸ್ ಮನವಿ

ವಿಶ್ವದಲ್ಲೇ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಬಲಿಯಾದವ ಸಂಖ್ಯೆಯಲ್ಲಿ ಬ್ರಿಟನ್ 6ನೇ ಸ್ಥಾನದಲ್ಲಿದೆ. ಅಲ್ಲದೆ ಸಾಂಕ್ರಾಮಿಕ ರೋಗದಿಂದ ಉಂಟಾದ ಕೆಟ್ಟ ಆರ್ಥಿಕ ಹೊಡೆತದಲ್ಲಿ ಬ್ರಿಟನ್ ಹಿಡಿತ ಸಾಧಿಸುತ್ತಿದೆ, ಆದರೆ ಜರ್ಮನಿಯು ಜಾಗತಿಕವಾಗಿ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

ಸಾಂದರ್ಭಿಕ ಚಿತ್ರ,

ಸಾಂದರ್ಭಿಕ ಚಿತ್ರ,

 • Share this:
  ಅಗತ್ಯವಿರುವಷ್ಟು ಕೊರೊನಾ ಲಸಿಕೆಯನ್ನು ದಾನವಾಗಿ ನೀಡಲು ಉಭಯ ದೇಶಗಳು ಒಪ್ಪಿದರೆ ಫಿಲಿಪೈನ್ಸ್ ತನ್ನ ಸಾವಿರಾರು ಆರೋಗ್ಯ ರಕ್ಷಣಾ ಕಾರ್ಯಕರ್ತರನ್ನು (ದಾದಿಯರನ್ನು) ಬ್ರಿಟನ್ ಮತ್ತು ಜರ್ಮನಿಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಏಷ್ಯಾದಲ್ಲಿಯೇ ಅತಿಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಫಿಲಿಪೈನ್ಸ್ ನಲ್ಲಿ ದಾಖಲಾಗಿವೆ. ತನ್ನ ಆರೋಗ್ಯ ರಕ್ಷಣಾ ಕಾರ್ಯಕರ್ತರನ್ನು ವಿದೇಶಕ್ಕೆ ನಿಯೋಜಿಸುವ ನಿಷೇಧ ಸಡಿಲಗೊಳಿಸಿರುವ ಫಿಲಿಪೈನ್ಸ್, ದೇಶಕ್ಕೆ ಅಗತ್ಯವಿರುವಷ್ಟು ಲಸಿಕೆ ಪೂರೈಸುವ ದೇಶಗಳಲ್ಲಿ ತಮ್ಮ ದಾದಿಯರು ಸೇವೆ ಸಲ್ಲಿಸಲಿದ್ದಾರೆಂದು ತಿಳಿಸಿದೆ. ಆದರೆ ಕೇವಲ 5 ಸಾವಿರ ರಕ್ಷಣಾ ಕಾರ್ಯಕರ್ತರನ್ನು ಮಾತ್ರ ವಿದೇಶಗಳಲ್ಲಿ ಸೇವೆಗೆ ಕಳುಹಿಸಿಕೊಡಲಾಗುತ್ತದೆ ಎಂದು ಫಿಲಿಪೈನ್ಸ್ ಹೇಳಿದೆ.

  ಬ್ರಿಟನ್ ಮತ್ತು ಜರ್ಮನಿ ಕೊರೊನಾ ಲಸಿಕೆ ಪೂರೈಸಿದರೆ, ಫಿಲಿಪೈನ್ಸ್ ದಾದಿಯರನ್ನು ಆ ದೇಶಗಳಲ್ಲಿ ಸೇವೆ ಸಲ್ಲಿಸಲು ಕಳುಹಿಸಿಕೊಡಲು ಮುಕ್ತವಾಗಿದೆ. ಇದರಿಂದ ಮೂರು ದೇಶಗಳಿಗೂ ಉಪಯುಕ್ತವಾಗುತ್ತದೆ. ಫಿಲಿಪೈನ್ಸ್ ಗೆ ಕೋವಿಡ್-19 ಲಸಿಕೆ ಸಿಕ್ಕರೆ, ಬ್ರಿಟನ್ ಮತ್ತು ಜರ್ಮನಿಯಲ್ಲಿ ರೋಗಿಗಳ ಸೇವೆಗೆ ದಾದಿಯರು ಸಿಕ್ಕಂತಾಗುತ್ತದೆ ಎಂದು ಕಾರ್ಮಿಕ ಸಚಿವಾಲಯದ ಅಂತಾರಾಷ್ಟ್ರೀಯ ವ್ಯವಹಾರಗಳ ಬ್ಯೂರೋದ ನಿರ್ದೇಶಕ ಆಲಿಸ್ ವಿಸ್ಪೆರಾಸ್ ಅಭಿಪ್ರಾಯಪಟ್ಟಿದ್ದಾರೆ.

  ಮೈಸೂರು ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ ಲೆಕ್ಕಾಚಾರ ತಲೆಕೆಳಗು; ಜೆಡಿಎಸ್​ಗೆ ಒಲಿದ ಮೇಯರ್ ಪಟ್ಟ

  ‘ವಿದೇಶಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಫಿಲಿಪೈನ್ಸ್ ಜನರಲ್ಲಿ ದಾದಿಯರು ಸೇರಿದ್ದಾರೆ. ದೇಶದ ಆರ್ಥಿಕತೆಗೆ ಇವರು ವರ್ಷಕ್ಕೆ ಸುಮಾರು 30 ಶತಕೋಟಿ ಡಾಲರ್ ಗಿಂತ ಹೆಚ್ಚಿನ ಹಣವನ್ನು ಕೊಡುಗೆಯಾಗಿ ನೀಡುತ್ತಾರೆ. ನಮ್ಮ ವಿನಂತಿಯನ್ನು ಪರಿಗಣಿಸಿ ಈ ಒಪ್ಪಂದಕ್ಕೆ ಒಳಪಟ್ಟು ಉಭಯ ದೇಶಗಳು ಫಿಲಿಪೈನ್ಸ್ ಜೊತೆಗಿರುವ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುತ್ತವೆ’ ಎಂದು ವಿಸ್ಪೆರಾಸ್ ಭರವಸೆ ವ್ಯಕ್ತಪಡಿಸಿದ್ದಾರೆ.

  ವಿಶ್ವದಲ್ಲೇ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಬಲಿಯಾದವ ಸಂಖ್ಯೆಯಲ್ಲಿ ಬ್ರಿಟನ್ 6ನೇ ಸ್ಥಾನದಲ್ಲಿದೆ. ಅಲ್ಲದೆ ಸಾಂಕ್ರಾಮಿಕ ರೋಗದಿಂದ ಉಂಟಾದ ಕೆಟ್ಟ ಆರ್ಥಿಕ ಹೊಡೆತದಲ್ಲಿ ಬ್ರಿಟನ್ ಹಿಡಿತ ಸಾಧಿಸುತ್ತಿದೆ, ಆದರೆ ಜರ್ಮನಿಯು ಜಾಗತಿಕವಾಗಿ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

  ಉಭಯ ದೇಶಗಳು ಒಟ್ಟು 23 ಮಿಲಿಯನ್ ಜನರಿಗೆ ಈಗಾಗಲೇ ಕೊರೊನಾ ಚುಚ್ಚುಮದ್ದು ನೀಡಿವೆ. ಆದರೆ ಫಿಲಿಪೈನ್ಸ್ 70 ಮಿಲಿಯನ್ ವಯಸ್ಕರಿಗೆ ಅಥವಾ ಆ ದೇಶದ 108 ಮಿಲಿಯನ್ ಜನರ ಪೈಕಿ 3ನೇ ಎರಡರಷ್ಟು ಜನರಿಗೆ ರೋಗನಿರೋಧಕ ಶಕ್ತಿ ನೀಡುವ ಅಭಿಯಾನವನ್ನು ಇನ್ನಷ್ಟೇ ಪ್ರಾರಂಭಿಸಬೇಕಿದೆ. ಈ ವಾರ ಚೀನಾ ದಾನ ಮಾಡಿರುವ ತನ್ನ ಮೊದಲ ಬ್ಯಾಚ್ ನ ಲಸಿಕೆಗಳನ್ನು ಪಡೆಯುವ ನಿರೀಕ್ಷೆಯಿದೆ. ಫಿಲಿಪೈನ್ಸ್ ಒಟ್ಟಾರೆ 148 ಮಿಲಿಯನ್ ಡೋಸ್ ಲಸಿಕೆಗಳನ್ನು ಪಡೆಯಲು ಬಯಸಿದೆ.

  2019 ರಲ್ಲಿ ಸುಮಾರು 17 ಸಾವಿರ ಫಿಲಿಪೈನ್ಸ್ ದಾದಿಯರು ಸಾಗರೋತ್ತರ ಕೆಲಸದ ಒಪ್ಪಂದಗಳಿಗೆ ಸಹಿ ಹಾಕಿದ್ದರು ಎಂದು ಸರ್ಕಾರದ ಅಂಕಿ ಅಂಶಗಳು ತೋರಿಸುತ್ತವೆ. ಕಳಪೆ ಕೆಲಸದ ಪರಿಸ್ಥಿತಿಗಳು ಮತ್ತು ದೇಶದಲ್ಲಿನ ಕಡಿಮೆ ವೇತನದಿಂದ ಪಾರಾಗಲು ಈಗಾಗಲೇ ವಿಧಿಸಲಾಗಿರುವ ನಿಷೇಧವನ್ನು ತೆಗೆದುಹಾಕಲು ಫಿಲಿಪೈನ್ಸ್ ದಾದಿಯರು ಹೋರಾಟ ಮಾಡಿದ್ದಾರೆ. ಇದರಿಂದಾಗಿ ದೇಶದಲ್ಲಿ ಜನರಿಗೆ ಲಸಿಕೆ ನೀಡುವ ಯೋಜನೆ ಸರಿಯಾಗಿ ಪ್ರಾರಂಭವಾಗಿಲ್ಲ. ‘ದಾದಿಯರು ಮತ್ತು ಆರೋಗ್ಯ ರಕ್ಷಣಾ ಕಾರ್ಯಕರ್ತರನ್ನು ಸರ್ಕಾರವು ಸರಕು ಅಥವಾ ರಫ್ತು ಉತ್ಪನ್ನಗಳಾಗಿ ಹೇಗೆ ಪರಿಗಣಿಸುತ್ತಿದೆ ಎನ್ನುವುದರ ಬಗ್ಗೆ ನಮಗೆ ಅಸಹ್ಯವಾಗಿದೆ’ ಎಂದು ಫಿಲಿಫೈನ್ಸ್ ನರ್ಸಸ್ ಯುನೈಟೆಡ್‌ನ ಪ್ರಧಾನ ಕಾರ್ಯದರ್ಶಿ ಜೋಸೆಲಿನ್ ಅಂಡಾಮೊ ಬೇಸರ ವ್ಯಕ್ತಪಡಿಸಿದ್ದಾರೆ.
  Published by:Latha CG
  First published: