HOME » NEWS » Coronavirus-latest-news » PHILADELPHIA ICE HOCKEY FANS ARE BEING REWARDED WITH FREE GAME TICKETS IN RETURN FOR CORONA VACCINES STG SKTV

Corona Vaccine: ಐಸ್ ಹಾಕಿ ಪಂದ್ಯಕ್ಕೆ ಫ್ರೀ ಟಿಕೆಟ್ ಬೇಕಾ? ಹಾಗಿದ್ರೆ ಕೋವಿಡ್ ಲಸಿಕೆ ಪಡೆಯಿರಿ: ಫಿಲಡೆಲ್ಫಿಯಾದಲ್ಲಿ ಬೊಂಬಾಟ್ ಆಫರ್

ಫಿಲಡೆಲ್ಫಿಯಾ ಅಭಿಮಾನಿಗಳು ಸೋಮವಾರ ರಾತ್ರಿಯ ಆಟದ ಆರಂಭಕ್ಕೂ ಮುನ್ನ ಕೋವಿಡ್ 19 ಲಸಿಕೆ ತೆಗೆದುಕೊಳ್ಳುವ ಮೂಲಕ 2021-2022 ರ ಸೀಸನ್‌ಗೆ ಉಚಿತ ಟಿಕೆಟ್ ಗಳಿಸಿದ್ದಾರೆ. ಫಿಲಡೆಲ್ಫಿಯಾ ಫ್ಲೈಯರ್ಸ್ ಮೆಡಿಸಿನ್ ಪಾಲುದಾರಿಕೆ ಮೂಲಕ ಕೊರೊನಾವೈರಸ್ ಲಸಿಕೆ ಅಭಿಮಾನಿಗಳಿಗೆ ಲಭ್ಯವಿದ್ದು, 2 ಟಿಕೆಟ್ ವೋಚರ್, ಗ್ರಿಟ್ಟಿ ಸ್ಟಿಕ್ಕರ್, ಟೀಶರ್ಟ್‌ಗಳನ್ನು ನ್ಯೂಜೆರ್ಸಿ ವಿರುದ್ಧದ ಅಂತಿಮ ಪಂದ್ಯದ ಪ್ರೋತ್ಸಾಹದ ಕೊಡುಗೆಗಳಾಗಿ ನೀಡಲಿದ್ದಾರೆ.

news18-kannada
Updated:May 12, 2021, 9:16 AM IST
Corona Vaccine: ಐಸ್ ಹಾಕಿ ಪಂದ್ಯಕ್ಕೆ ಫ್ರೀ ಟಿಕೆಟ್ ಬೇಕಾ? ಹಾಗಿದ್ರೆ ಕೋವಿಡ್ ಲಸಿಕೆ ಪಡೆಯಿರಿ: ಫಿಲಡೆಲ್ಫಿಯಾದಲ್ಲಿ ಬೊಂಬಾಟ್ ಆಫರ್
ಸಂದೇಶದೊಂದಿಗೆ ಫಿಲಡೆಲ್ಫಿಯಾ ಐಸ್​ ಹಾಕಿ ಮಾಸ್ಕಾಟ್
  • Share this:
ಫಿಲಡೆಲ್ಫಿಯಾದ ಐಸ್ ಹಾಕಿ ಕ್ರೀಡಾ ತಂಡವು ತಮ್ಮ ಅಭಿಮಾನಿಗಳು ಕೋವಿಡ್ 19 ವಿರುದ್ಧ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳಲು ಮನವರಿಕೆ ಮಾಡಿಕೊಡುತ್ತಿದ್ದಾರೆ. ಅದು ಅವರ ಗುರಿಯೇ ಆಗಿದೆ. ಅಷ್ಟೇ ಅಲ್ಲದೇ ಫಿಲಡೆಲ್ಫಿಯಾ ಅಭಿಮಾನಿಗಳು ಸಹ ಸೋಮವಾರ ರಾತ್ರಿಯ ಆಟದ ಆರಂಭಕ್ಕೂ ಮುನ್ನ ಕೋವಿಡ್ 19 ಲಸಿಕೆ ತೆಗೆದುಕೊಳ್ಳುವ ಮೂಲಕ 2021-2022 ರ ಸೀಸನ್‌ಗೆ ಉಚಿತ ಟಿಕೆಟ್ ಗಳಿಸಿದ್ದಾರೆ. ಫಿಲಡೆಲ್ಫಿಯಾ ಫ್ಲೈಯರ್ಸ್ ಮೆಡಿಸಿನ್ ಪಾಲುದಾರಿಕೆ ಮೂಲಕ ಜಾನ್ಸನ್ ಮತ್ತು ಜಾನ್ಸನ್ ಕೊರೊನಾವೈರಸ್ ಲಸಿಕೆ ಅಭಿಮಾನಿಗಳಿಗೆ ಲಭ್ಯವಿದ್ದು, 2 ಟಿಕೆಟ್ ವೋಚರ್, ಗ್ರಿಟ್ಟಿ ಸ್ಟಿಕ್ಕರ್, ಟೀಶರ್ಟ್‌ಗಳನ್ನು ನ್ಯೂಜೆರ್ಸಿ ವಿರುದ್ಧದ ಅಂತಿಮ ಪಂದ್ಯದ ಪ್ರೋತ್ಸಾಹದ ಕೊಡುಗೆಗಳಾಗಿ ನೀಡಲಿದ್ದಾರೆ. ಅಭಿಮಾನಿಗಳು ಕೆಲವೇ ದಿನಗಳಲ್ಲಿ ತಮ್ಮ ಲಸಿಕೆಗಳನ್ನು ತೆಗೆದುಕೊಳ್ಳಲು ಕಾತುರರಾಗಿದ್ದಾರೆ. ಆಟಗಾರರು ಆರೋಗ್ಯವಾಗಿದ್ದಾರೆ.

ಫ್ಲೈಯರ್‌ಗಳು ಪೆನ್ಸಿಲ್ವೇನಿಯಾ ಏಕೈಕ ವೃತ್ತಿಪರ ಕ್ರೀಡಾ ತಂಡವಾಗಿದ್ದು ಕೋವಿಡ್ 19 ಲಸಿಕೆ ಅಭಿಯಾನದಲ್ಲಿ ದೊಡ್ಡ ಮಟ್ಟದಲ್ಲಿರುವ NHLನ ಏಕೈಕ ತಂಡವಾಗಿದೆ. ಅಲ್ಲದೇ ನಿಮ್ಮ ಲಸಿಕೆಗಳನ್ನು ತೆಗೆದುಕೊಳ್ಳಿ ಎಂದು ಮನವರಿಕೆ ಮಾಡುತ್ತಿದೆ. ಕೆಲವು ತಂಡಗಳು ಲಸಿಕೆ ಹಬ್‌ಗಳ ಸೌಲಭ್ಯ ಪಡೆದಿವೆ. ಈ ಈಗಲ್ಸ್, ಲಿಂಕನ್ ಫೈನಾನ್ಷಿಯಲ್ ಸ್ಥಳವನ್ನು ಆಟಿಸಂ ಸಮುದಾಯದ ಸದಸ್ಯರಿಗೆ ಕೋವಿಡ್ 19 ಲಸಿಕಾ ಕೇಂದ್ರವಾಗಿ ಮಾಡಿಕೊಟ್ಟಿದ್ದಾರೆ. ವೆಲ್ಸ್ ಫಾರ್ಗೋ ಕೇಂದ್ರಕ್ಕೆ ಬಂದ ನಂತರ ಕೆಲವು ಅಭಿಮಾನಿಗಳು ಲಸಿಕೆ ತೆಗೆದುಕೊಳ್ಳುವರು ಎನ್ನುವ ಭರವಸೆ ಫ್ಲೈಯರ್ಸ್‌ಗಿದೆ.

ಇದಿಷ್ಟೇ ಅಲ್ಲದೇ ಫ್ಲೈಯರ್ಸ್‌ನ ಮಾಲೀಕರು ಕಾಮ್ ಕ್ಯಾಸ್ಟ್ ವೀಕ್ಷಕರೊಬ್ಬರ ಮಾತಿನ ಪ್ರಕಾರ ಗೇಮ್ ಆರಂಭವಾದ ಕೆಲವೇ ಸಮಯದಲ್ಲಿ ಶೇಕಡಾ 75 ರಷ್ಟು ಅಭಿಮಾನಿಗಳು ಲಸಿಕೆ ಪಡೆದುಕೊಂಡಿದ್ದಾರೆ ಎಂದು ಹೇಳಿದರು. ವೆಲ್ಸ್ ಫಾರ್ಗೋ ಸೆಂಟರ್ 20% ಸಾಮರ್ಥ್ಯದಲ್ಲಿ 4,000 ಅಭಿಮಾನಿಗಳ ಜೊತೆಗೆ ತಮ್ಮ ಕಾರ್ಯಕ್ಷಮತೆ ತೋರಿದೆ. ನಾವು ಪಾಲುದಾರರನ್ನು ಹುಡುಕುತ್ತಿದ್ದೆವು. ಅವರು ಬಂದಿದ್ದು ಸಂತೋಷವಾಯಿತು ಎಂದು ಪೆನ್ಸಿಲ್ವೇನಿಯಾ ಆರೋಗ್ಯ ವ್ಯವಸ್ಥೆಯ ಮುಖ್ಯ ವೈದ್ಯಕೀಯ ಅಧಿಕಾರಿ ಪ್ಯಾಟ್ರಿಕ್ ಬ್ರೆನ್ನನ್ ಹೇಳಿದರು.

76ers ಮತ್ತು ಯೂನಿಯನ್ ಜೊತೆ ಇದೇ ರೀತಿಯ ಪಾಲುದಾರಿಕೆಯನ್ನು ಪಡೆಯಲು ಪೆನ್ ನಾಯಕತ್ವಕ್ಕೆ ಹಸ್ ಸೂಚಿಸಿದ್ದಾರೆ ಎಂದು ಬ್ರೆನ್ನನ್ ಹೇಳಿದರು. ಇದು ಯುವ ಸಮೂಹವಾಗಿದ್ದು, ಅವರು ಈಗಷ್ಟೇ ಅರ್ಹರಾಗಿದ್ದಾರೆ ಎಂದು ಬ್ರೆನ್ನನ್ ಹೇಳಿದರು. ರಾತ್ರಿ ಸಾಕಷ್ಟು ಜನರನ್ನು ಗಮನಿಸಿದ್ದು, ಸಮುದಾಯವೊಟ್ಟಿಗೆ ಈ ಸಂದರ್ಭದಲ್ಲಿ ಇದ್ದು, ಆಟ ಆರಂಭವಾಗುವ ಮುನ್ನ ಇರುವ ಸಮಯದಲ್ಲಿ ಲಸಿಕೆ ತೆಗೆದುಕೊಳ್ಳುವುದು ಉತ್ತಮ ಎಂದರು.

ಡೆಲವೇರ್ ಕಣಿವೆಯ ಫ್ಲೈಯರ್ಸ್ ಅಭಿಮಾನಿಯಾಗಿದ್ದ ಮಾರ್ಕ್ ಪೆಟ್ರಿ ಕ್ಲೌಡ್ ಗಿರೌಕ್ಸ್ ಜೆರ್ಸಿಯನ್ನು ಧರಿಸಿ, ಲಸಿಕೆ ಪಡೆದು ವಿಶ್ರಾಂತಿ ಗಳಿಸಿದರು. ಅಂತಿಮ ಪಂದ್ಯದ ಟಿಕೆಟ್ ಪಡೆದು ಲಸಿಕೆ ಪಡೆಯಲು ನಿರ್ಧರಿಸಿದ್ದರು. 'ಈ ಹಿಂದೆ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದೆ. ನಾನು ಮೂರ್ಖ ಎನ್ನುವುದನ್ನು ಒಪ್ಪುತ್ತೇನೆ. ಹೈಪ್ ಕೊಡುವುದನ್ನು ನಾನು ವಿರೋಧಿಸುವೆ. ಎಲ್ಲರೂ ಏನು ಮಾಡುತ್ತಾರೋ ಅದಕ್ಕೆ ವಿರುದ್ಧವಾಗಿ ನಾನು ಮಾಡುತ್ತೇನೆ' ಎಂದಿದ್ದಾರೆ.

ಆದರೆ ಇಂದು ಲಸಿಕೆ ಪಡೆದಿದ್ದು ಏಕೆ ? ಎನ್ನುವ ಪ್ರಶ್ನೆಗೆ 'ಉಚಿತ ಫ್ಲೈಯರ್ಸ್ ಟಿಕೆಟ್‌ಗಾಗಿ' ಪಡೆದೆ ಎಂದು ಹೇಳಿದ್ದಾರೆ.
Youtube Video
ಏನೇ ಆಗಲಿ, ಫ್ಲೈಯರ್ಸ್ ಅವರ ಎಲ್ಲಾ ಅಭಿಮಾನಿಗಳು ಲಸಿಕೆ ಪಡೆಯಬೇಕು. ವೆಲ್ಸ್ ಫಾರ್ಗೋ ಕೇಂದ್ರದಲ್ಲಿ ಅಕ್ಟೋಬರ್‌ನಲ್ಲಿ 20,000 ಸಾಮರ್ಥ್ಯವುಳ್ಳವರನ್ನು ಪಡೆಯಲು ಲಸಿಕೆ ಅಗತ್ಯವಾಗಿದೆ. ಈ ಲಸಿಕೆ ರೂಪಾಂತರಿಗಳ ವಿಚಾರದಲ್ಲಿ ಹೇಗೆ ವರ್ತಿಸುತ್ತದೆ ಎನ್ನುವುದು ಅವಲಂಭಿಸಿರುತ್ತದೆ ಎಂದು ಬ್ರೆನ್ನನ್ ಹೇಳಿದರು. ನಾವು ಸಾಕಷ್ಟು ಜನರಿಗೆ ಲಸಿಕೆ ನೀಡದಿದ್ದರೆ, ವೈರಸ್ ಹರಡುತ್ತಲೇ ಇರುತ್ತದೆ, ಅದು ರೂಪಾಂತರಗೊಳ್ಳುತ್ತದೆ, ಜೊತೆಗೆ ವೈರಸ್ ಮತ್ತು ಅವುಗಳ ರೂಪಾಂತರಗಳನ್ನು ತಡೆಯಲು ಲಸಿಕೆ ಅತ್ಯವಶ್ಯಕ ಎಂದರು.
Published by: Soumya KN
First published: May 12, 2021, 9:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories