ನವದೆಹಲಿ (ಆ. 30): ಮಕ್ಕಳಿಗೆ ಕೋವಿಡ್ ಲಸಿಕೆ ಉತ್ಪಾದನೆಗೆ ಅಮೆರಿಕ ಮೂಲದ ಫೈಜರ್ (Pfizer) ಶೀಘ್ರದಲ್ಲಿಯೇ ಅನುಮೋದನೆ ಪಡೆಯುವ ಸಾಧ್ಯತೆ ಇದೆ. 5 ರಿಂದ 12 ವರ್ಷದ ಮಕ್ಕಳಿಗೆ (vaccine for children) ಫೈಜರ್ ಲಸಿಕೆ ಅಕ್ಟೋಬರ್ ಒಳಗೆ ಅನುಮತಿ ಪಡೆಯಲಿದೆ ಎಂದು ಆಹಾರ ಮತ್ತು ಔಷಧ ಆಡಳಿತದ (FDA) ಮಾಜಿ ಮುಖ್ಯಸ್ಥ ಸ್ಕಾಟ್ ಗಾಟ್ಲೀಬ್ ತಿಳಿಸಿದ್ದಾರೆ. ಪ್ರಸ್ತುತ ಅಮೆರಿಕದಲ್ಲಿ ಮೂರು ಕೋವಿಡ್ ಲಸಿಕೆ ಬಳಕೆ ಮಾಡಲಾಗುತ್ತಿದೆ. ಇದರಲ್ಲಿ ಕೇವಲ ಫೈಜರ್ ಲಸಿಕೆಗೆ ಮಾತ್ರ 12 ವರ್ಷದ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗೆ ಅವಕಾಶ ನೀಡಲಾಗಿದೆ. ಫೈಜರ್ ಬೆನ್ನಲ್ಲೆ ಮೊಡರ್ನಾ ಮತ್ತು ಜಾನ್ಸನ್ ಮತ್ತು ಜಾನ್ಸನ್ ಲಸಿಕೆಗಳು ಕೂಡ 12 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡುವ ಸಂಬಂಧ ಪ್ರಯೋಗಗಳು ನಡೆಸಿವೆ. ಈ ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲು ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿದೆ.
ಫೈಜರ್ ಪ್ರಯೋಗದ ಕುರಿತು ಮುಂದಿನ ತಿಂಗಳು ಕೆಲವು ದಾಖಲೆಗಳನ್ನು ಎಫ್ಡಿಎಗೆ ನೀಡಲಿದೆ. ಇದಾದ ಬಳಿಕ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ತುರ್ತು ಲಸಿಕೆ ಬಳಕೆಗೆ ಅರ್ಜಿ ಸಲ್ಲಿಸಲು ಮುಂದಾಗಲಿದೆ ಎಂದರು ಅವರು ತಿಳಿಸಿದ್ದಾರೆ.
ಲಸಿಕೆಗೆ ತುರ್ತು ಅನುಮೋದನೆ ನೀಡುವ ಸಂಬಂಧ ಎಫ್ಡಿಎ ಕೂಡ ಮುಂದಾಗಿದೆ. ಬಹುಶಃ ಚಳಿಗಾಲದ ಆರಂಭದಲ್ಲಿ ಲಸಿಕೆ ನೀಡಲು ಅನುಮೋದನೆ ಸಿಗಬಹುದು. ಇಲ್ಲಿನ ಪರಿಸ್ಥಿತಿಯ ನಿರ್ಧಾರಿಸಿ ಮಕ್ಕಳಿಗೆ ತುರ್ತು ಲಸಿಕೆ ನೀಡಲಾಗುವುದು ಎಂದಿದ್ದಾರೆ.
2 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಸಂಬಂಧ ಫೈಜರ್ ಕ್ಲಿನಿಕಲ್ ಪ್ರಯೋಗ ನಡೆಸಿದೆ. ಈ ಪ್ರಯೋಗಗಳ ಫಲಿತಾಂಶ ನವೆಂಬರ್ ಸಿಗಲಿದೆ. ನವೆಂಬರ್ ಅಥವಾ ಡಿಸೆಂಬರ್ನಲ್ಲಿ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಫೈಜರ್ ಲಸಿಕೆ ನೀಡಲು ಅನುಮೋದಿಸಿದರೆ, ಈ ವರ್ಷಾಂತ್ಯದೊಳಗೆ ಲಸಿಕೆ ವಿತರಣೆಗೆ ಆರಂಭಿಸಲಿದೆ.
ಇದನ್ನು ಓದಿ: ಕೋವಿಡ್ ಲಸಿಕೆ ಪಡೆದು ಅಸ್ವಸ್ಥಗೊಂಡ ಅಪ್ರಾಪ್ತ ಬಾಲಕ; ತನಿಖೆಗೆ ಆಗ್ರಹ
ಮೂರನೇ ಅಲೆ ಸೋಂಕು ಅಥವಾ ಡೆಲ್ಟಾ ಸೋಂಕುಗಳು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುವ ಹಿನ್ನಲೆ ಕೋವಿಡ್ ವಿರುದ್ಧ ಹೋರಾಡಲು ಮಕ್ಕಳಿಗೆ ಲಸಿಕೆ ನೀಡುವುದು ಅವಶ್ಯವಾಗಿದ್ದು, ಈಗಾಗಲೇ ಮಕ್ಕಳ ಲಸಿಕೆಗೆ ಅನೇಕ ಔಷಧ ಕಂಪನಿಗಳು ಪ್ರಯೋಗ ನಡೆಸುತ್ತಿವೆ.
ಶಾಲೆ ಪುನರ್ ಆರಂಭವಾದ ಹಿನ್ನಲೆ ದಿನವೊಂದಕ್ಕೆ ಏನಿಲ್ಲಾ ಎಂದರೂ ಸೋಂಕಿನಿಂದಾಗಿ ಸುಮಾರು 300 ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮಕ್ಕಳಲ್ಲಿ ಸೋಂಕು ನಿಯಂತ್ರಣಕ್ಕಾಗಿ ಶಾಲೆಗಳು ವಾರದಲ್ಲಿ ಎರಡು ಬಾರಿ ಮಕ್ಕಳ ಪರೀಕ್ಷೆ ನಡೆಸಬೇಕು. ಜೊತೆಗೆ ವಿದ್ಯಾರ್ಥಿಗಳು ಹೆಚ್ಚು ಗುಂಪುಗೂಡದಂತೆ ಸಾಮಾಜಿಕ ಅಂತರ ಕಾಪಾಡುವುದು ಅವಶ್ಯವಾಗಿದೆ ಎಂದು ಸ್ಕಾಟ್ ಗಾಟ್ಲೀಬ್ ಸಲಹೆ ನೀಡಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ