HOME » NEWS » Coronavirus-latest-news » PFIZER IN TALKS WITH INDIA GOVERNMENT OVER EXPEDITED APPROVAL FOR COVID19 VACCINE RHHSN

COVID Vaccine | ಕೋವಿಡ್ ಲಸಿಕೆಗೆ ತ್ವರಿತ ಅನುಮೋದನೆಗೆ ಸರ್ಕಾರದ ಜೊತೆ ಫೈಜರ್ ಸಂಸ್ಥೆ ಮಾತುಕತೆ

ಭಾರತಕ್ಕೆ ಫೈಜರ್ ಸಂಸ್ಥೆಯಿಂದ 519.4 ಕೋಟಿ (70 ಮಿಲಿಯ್ ಡಾಲರ್) ಮೊತ್ತದ ಕೋವಿಡ್ ಔಷಧಿಗಳನ್ನು ದೇಣಿಗೆ ರೂಪದಲ್ಲಿ ನೀಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಫೈಜರ್ ಸಂಸ್ಥೆಯ ಸಿಇಒ ಬೌರ್ಲಾ ಅವರು ಹೇಳಿದ್ದಾರೆ.  

news18-kannada
Updated:May 3, 2021, 3:11 PM IST
COVID Vaccine | ಕೋವಿಡ್ ಲಸಿಕೆಗೆ ತ್ವರಿತ ಅನುಮೋದನೆಗೆ ಸರ್ಕಾರದ ಜೊತೆ ಫೈಜರ್ ಸಂಸ್ಥೆ ಮಾತುಕತೆ
ಲಸಿಕೆ ಚಿತ್ರಣ
  • Share this:
ನವದೆಹಲಿ: ದೇಶಾದ್ಯಂತ ಕೊರೋನಾ ಸೋಂಕಿನ ಅಟ್ಟಹಾಸ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಪ್ರಮಾಣ ಹಾಗೂ ಸಾವಿನ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾದ ಕಾರಣ ದೇಶದಲ್ಲಿ ಹಾಸಿಗೆ, ಆಕ್ಸಿಜನ್ ಹಾಗೂ ಲಸಿಕೆ ಕೊರತೆ ಕಾಡಲಾರಂಭಿಸಿದೆ. ಇದುವರೆಗೂ ದೇಶದಲ್ಲಿ ಎರಡು ಕಂಪನಿಯ ಲಸಿಕೆಗಳನ್ನು ನೀಡಲಾಗುತ್ತಿದೆ. ಇದೇ ತಿಂಗಳ 1ರಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದುಕೊಳ್ಳಬಹುದು ಎಂದು ಹೇಳಿರುವ ಕೇಂದ್ರ ಸರ್ಕಾರ ಮೂರನೇ ಹಂತದ ಲಸಿಕೆ ಮಹಾಅಭಿಯಾನಕ್ಕೆ ಚಾಲನೆ ನೀಡಿದೆ. ಆದರೆ, ಲಸಿಕೆ ಕೊರತೆ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ 3ನೇ ಹಂತದ ಲಸಿಕೆ ಮಹಾಭಿಯಾನವನ್ನು ಇನ್ನು ಆರಂಭಿಸಿಲ್ಲ. ಏತನ್ಮಧ್ಯೆ, ಮತ್ತೊಂದು ಲಸಿಕೆ ತಯಾರಿಕಾ ಸಂಸ್ಥೆ ತಮ್ಮ ಸಂಸ್ಥೆಯ ಲಸಿಕೆಗೆ ಅನುಮೋದನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಫೈಜರ್ ಸಂಸ್ಥೆಯ ಕೋವಿಡ್ ಲಸಿಕೆಗೆ ತ್ವರಿತ ಅನುಮೋದನೆ ಪಡೆದುಕೊಳ್ಳುವ ಕುರಿತು ಭಾರತ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ಫೈಜರ್ ಸಿಇಒ ಅಲ್ಬರ್ಟ್ ಬೌರ್ಲಾ ಅವರು ಲಿಂಕ್ಡ್​ಇನ್​ನಲ್ಲಿ ಸೋಮವಾರ ತಿಳಿಸಿದ್ದಾರೆ.

ಇದನ್ನು ಓದಿ: Oxygen Crisis: ಇದು ಸಾವೋ ಅಥವಾ ಕೊಲೆಯೋ?; ಚಾಮರಾಜನಗರ ದುರಂತಕ್ಕೆ ರಾಹುಲ್​ ಗಾಂಧಿ ವಿಷಾದ

ದುರದೃಷ್ಟವಶಾತ್, ನಮ್ಮ ಲಸಿಕೆ ಭಾರತದಲ್ಲಿ ನೋಂದಣಿಯಾಗಿಲ್ಲ. ಆದರೆ, ಈ ಸಂಬಂಧ ಕಳೆದ ತಿಂಗಳೇ ನಾವು ಅರ್ಜಿ ಸಲ್ಲಿಸಿದ್ದೇವೆ. ಭಾರತದಲ್ಲೂ ಫೈಜರ್ ಲಸಿಕೆ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಲಸಿಕೆಗೆ ತ್ವರಿತ ಅನುಮೋದನೆ ನೀಡುವ ಮಾರ್ಗದ ಬಗ್ಗೆ ಭಾರತ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಭಾರತಕ್ಕೆ ಫೈಜರ್ ಸಂಸ್ಥೆಯಿಂದ 519.4 ಕೋಟಿ (70 ಮಿಲಿಯ್ ಡಾಲರ್) ಮೊತ್ತದ ಕೋವಿಡ್ ಔಷಧಿಗಳನ್ನು ದೇಣಿಗೆ ರೂಪದಲ್ಲಿ ನೀಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಫೈಜರ್ ಸಂಸ್ಥೆಯ ಸಿಇಒ ಬೌರ್ಲಾ ಅವರು ಹೇಳಿದ್ದಾರೆ.
Published by: HR Ramesh
First published: May 3, 2021, 3:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories