Petrol Price: ವ್ಯಾಟ್ ಪರಿಣಾಮ, ದೆಹಲಿಯಲ್ಲಿ ಡೀಸೆಲ್ ಬೆಲೆ ಬರೋಬ್ಬರಿ 7.1 ರೂ ಏರಿಕೆ

Petrol Diesel Price: ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 73.55 ರೂಪಾಯಿಯಲ್ಲೇ ಮುಂದುವರಿದಿದೆ. ಡೀಸೆಲ್ ಬೆಲೆ 65.96 ರೂಪಾಯಿ ಇದೆ.

news18
Updated:May 5, 2020, 3:10 PM IST
Petrol Price: ವ್ಯಾಟ್ ಪರಿಣಾಮ, ದೆಹಲಿಯಲ್ಲಿ ಡೀಸೆಲ್ ಬೆಲೆ ಬರೋಬ್ಬರಿ 7.1 ರೂ ಏರಿಕೆ
ಸಾಂದರ್ಭಿಕ ಚಿತ್ರ
  • News18
  • Last Updated: May 5, 2020, 3:10 PM IST
  • Share this:
ನವದೆಹಲಿ(ಮೇ 05): ಮದ್ಯಕ್ಕೆ ಶೇ. 70ರಷ್ಟು ಕೊರೋನಾ ತೆರಿಗೆ ವಿಧಿಸಿದ್ದ ದೆಹಲಿ ಸರ್ಕಾರ ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಹೆಚ್ಚಿಸಿದೆ. ಪರಿಣಾಮ, ದೆಹಲಿಯಲ್ಲಿ ಎರಡರ ಬೆಲೆಗಳೂ ಹೆಚ್ಚಳ ಕಂಡಿವೆ. ಡೀಸೆಲ್ ಬೆಲೆಯಂತೂ ಲೀಟರ್​ಗೆ 7.1 ರೂಪಾಯಿಯಷ್ಟು ಹೆಚ್ಚಳವಾಗಿದೆ. ಪೆಟ್ರೋಲ್ ಬೆಲೆ 1.67 ರೂಪಾಯಿ ಹೆಚ್ಚಳವಾಗಿದೆ. ವ್ಯಾಟ್ ಹೇರಿಕೆಯಿಂದಾಗಿ ಇವತ್ತು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 71.26 ರೂಪಾಯಿ ತಲುಪಿದೆ. 62.29 ರೂಪಾಯಿ ಇದ್ದ ಡೀಸೆಲ್ ಬೆಲೆ 69.39 ರೂಪಾಯಿ ಮುಟ್ಟಿದೆ.

ಇದು ದೆಹಲಿಯಲ್ಲಿ ಮಾತ್ರ ವ್ಯಾಟ್ ಹೆಚ್ಚಳದಿಂದ ಆಗಿರುವ ಬದಲಾವಣೆ. ದೇಶದ ಬೇರೆಡೆ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 73.55 ರೂಪಾಯಿಯಲ್ಲೇ ಮುಂದುವರಿದಿದೆ. ಡೀಸೆಲ್ ಬೆಲೆ 65.96 ರೂಪಾಯಿ ಇದೆ.

ಇದನ್ನೂ ಓದಿ: ಬ್ಯಾಂಕ್ ಸಾಲಗಳ ಮೇಲಿನ ಮರುಪಾವತಿಗೆ ಇನ್ನೂ ಮೂರು ತಿಂಗಳು ವಿನಾಯಿತಿ; ಆರ್‌ಬಿಐ ಚಿಂತನೆ

ದೆಹಲಿಯಲ್ಲಿ ಈವರೆಗೂ ಬೇರೆ ನಗರಗಳಿಗೆ ಹೋಲಿಸಿದರೆ ವ್ಯಾಟ್ ತೆರಿಗೆ ಕಡಿಮೆ ಇತ್ತು. ತತ್​ಪರಿಣಾಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳೂ ಕಡಿಮೆ ಇದ್ದವು. ಈಗ ತೆರಿಗೆ ಹೆಚ್ಚಳದಿಂದಾಗಿ ಎರಡೂ ಕೂಡ ಬೆಲೆ ಹೆಚ್ಚಿಸಿಕೊಂಡಿವೆ. ಡೀಸೆಲ್ ಬೆಲೆಯಲ್ಲಿ ದೆಹಲಿ ಬೇರೆಲ್ಲಾ ನಗರಗಳಿಗಿಂತ ದುಬಾರಿಯಾದಂತಾಗಿದೆ.

ಆದರೆ, ಕೊರೋನಾ ವಿರುದ್ಧದ ಹೋರಾಟಕ್ಕೆ ಬೇಕಾಗಿರುವ ಹಣವನ್ನು ಸೇರಿಸಲು ವ್ಯಾಟ್ ಹೆಚ್ಚಿಸಲಾಗಿದೆ. ಶೇ. 27ರಷ್ಟಿದ್ದ ವ್ಯಾಟ್ ಅನ್ನು ಶೇ. 30ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ, ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೆ. 16.75ರಿಂದ ಶೇ. 30ಕ್ಕೆ ಅಧಿಕಗೊಳಿಸಲಾಗಿದೆ. ಹೀಗಾಗಿ, ಡೀಸೆಲ್ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಈಗ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ತೆರಿಗೆ ಸಮಾನವಾಗಿದೆ. ಬೆಲೆ ಕೂಡ ಹೆಚ್ಚೂಕಡಿಮೆ ಸಮಾನವಾಗಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಸಿಕ್ಕಾಪಟ್ಟೆ ಕಹಿಯಾಗಲಿದೆ ಎಣ್ಣೆ; ಮದ್ಯದ ಮೇಲೆ ವಿಶೇಷ ಕೊರೋನಾ ಸುಂಕ ವಿಧಿಸಿದ ಆಪ್‌ ಸರ್ಕಾರ

ಇದು ತಾತ್ಕಾಲಿಕ ಮಾತ್ರ. ಸರ್ಕಾರಕ್ಕೆ ಅಗತ್ಯ ಆದಾಯ ಬರತೊಡಗಿದರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ತೆರಿಗೆಯನ್ನು ಇಳಿಸಲಾಗುವುದು ಎಂದು ದೆಹಲಿ ಸರ್ಕಾರ ಸ್ಪಷ್ಟಪಡಿಸಿದೆ.
First published: May 5, 2020, 10:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading