HOME » NEWS » Coronavirus-latest-news » PETROL AND DIESEL PRICE HAS INCREASED AGAIN AMIDST CORONA LOCKDOWN CRISIS DBDEL SKTV

Fuel Price Hike: ಎರಡೇ ದಿನಗಳಲ್ಲಿ ಮತ್ತೆ ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆ, ಕೊರೊನಾ ಸಂಕಷ್ಟದ ನಡುವೆ ಮತ್ತೊಂದು ಬರೆ !

ಬಿಜೆಪಿಯ ಕೇಂದ್ರ ಸರ್ಕಾರ ಕೊರೊನಾ ಮೊದಲ ಅಲೆ ಇದ್ದಾಗಲೂ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುತ್ತಿತ್ತು. ಈಗ ಕೊರೊನಾ ಎರಡನೇ ಅಲೆ ತಾರಕ್ಕೇರಿರುವ ಸಂದರ್ಭದಲ್ಲೂ ಮತ್ತೆ ಮೇ 4 ರಿಂದ ನಿರಂತರವಾಗಿ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ.

news18-kannada
Updated:May 10, 2021, 9:32 AM IST
Fuel Price Hike: ಎರಡೇ ದಿನಗಳಲ್ಲಿ ಮತ್ತೆ ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆ, ಕೊರೊನಾ ಸಂಕಷ್ಟದ ನಡುವೆ ಮತ್ತೊಂದು ಬರೆ !
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ, ಮೇ 10: ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ.‌ ಹಲವು ನಿರ್ಬಂಧಗಳ ನಡುವೆಯೂ ಪ್ರತಿ ದಿನ‌ ಮೂರೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದಾರೆ. ಇದರಿಂದ ಕೊರೋನಾದ ಹುಟ್ಡಡಗಿಸಲು ಮತ್ತೆ ಲಾಕ್ಡೌನ್ ಮಾಡಲೇಬೇಕಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇವುಗಳ ನಡುವೆ ಕೊರೋನಾ ಕಷ್ಟ ಕಾಲದಲ್ಲೂ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸುತ್ತಲೇ ಇದೆ. 

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಕೇಂದ್ರ ಸರ್ಕಾರ ಕೊರೊನಾ ಮೊದಲ ಅಲೆ ಇದ್ದಾಗಲೂ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುತ್ತಿತ್ತು. ಈಗ ಕೊರೊನಾ ಎರಡನೇ ಅಲೆ ತಾರಕ್ಕೇರಿರುವ ಸಂದರ್ಭದಲ್ಲೂ ಮತ್ತೆ ಮೇ 4 ರಿಂದ ನಿರಂತರವಾಗಿ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ. ಮೇ 5 ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 13 ಪೈಸೆ ಮತ್ತು ಪ್ರತಿ ಡೀಸೆಲ್ ಮೇಲೆ 21 ಪೈಸೆ, ಮೇ 6ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 18 ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 31 ಪೈಸೆ ಹಾಗೂ ಮೇ 7 ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 25 ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 33 ಪೈಸೆ ಬೆಲೆ ಹೆಚ್ಚಿಸಿತ್ತು.

ಹೀಗೆ ನಿರಂತರವಾಗಿ ನಾಲ್ಕು ದಿನ ಬೆಲೆ ಏರಿಸಿ ಎರಡು ದಿನ ಮಾತ್ರ ವಿರಮಿಸಿತ್ತು. ಈಗ ಮೇ 10ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 23 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 35 ಪೈಸೆ ಹೆಚ್ಚಳ ಮಾಡಿದೆ. ಮೇ 5ರಿಂದ ಇತ್ತೀಚೆಗೆ ಒಟ್ಟು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 1.10 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 1.35 ರೂಪಾಯಿ ಹೆಚ್ಚಳ ಮಾಡಲಾಗಿದೆ.
Youtube Video

ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ -ಡೀಸೆಲ್ ಬೆಲೆ ಹೀಗಿದೆ:

ಬೆಂಗಳೂರು- ಪೆಟ್ರೋಲ್ 94.57 ರೂ., ಡೀಸೆಲ್ 86.99 ರೂ.
ಭೂಪಾಲ್- ಪೆಟ್ರೋಲ್ 99.55 ರೂ., ಡೀಸೆಲ್ 90.36 ರೂ.ಮುಂಬೈ- ಪೆಟ್ರೋಲ್ 97.86 ರೂ., ಡೀಸೆಲ್ 89.17 ರೂ.
ಜೈಪುರ - ಪೆಟ್ರೋಲ್ 97.92 ರೂ., ಡೀಸೆಲ್ 90.61 ರೂ.
ಪಾಟ್ನಾ- ಪೆಟ್ರೋಲ್ 93.77 ರೂ., ಡೀಸೆಲ್ 87.27 ರೂ.
ಚೆನ್ನೈ- ಪೆಟ್ರೋಲ್ 93.38 ರೂ., ಡೀಸೆಲ್ 86.96 ರೂ.
ಕೋಲ್ಕತ್ತಾ- ಪೆಟ್ರೋಲ್ 91.66 ರೂ., ಡೀಸೆಲ್ 84.90 ರೂ.
ದೆಹಲಿ- ಪೆಟ್ರೋಲ್ 91.53 ರೂ., ಡೀಸೆಲ್ 82.06 ರೂ.
ಲಕ್ನೋ- ಪೆಟ್ರೋಲ್ 89.56 ರೂ., ಡೀಸೆಲ್ 82.43 ರೂ.
ರಾಂಚಿ- ಪೆಟ್ರೋಲ್ 88.77 ರೂ., ಡೀಸೆಲ್ 86.69 ರೂ.
Published by: Soumya KN
First published: May 10, 2021, 9:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories